ನವದೆಹಲಿ: ಅಮೆಜಾನ್ ಭಾರತದಲ್ಲಿ ವಿವಿಧ ಹಂತಗಳಲ್ಲಿ ಸುಮಾರು 500 ಉದ್ಯೋಗಿಗಳನ್ನು ವಜಾಗೊಳಿಸಿದೆ ಎಂದು ವರದಿಗಳು ತಿಳಿಸಿವೆ.
ಈ ವರ್ಷದ ಮಾರ್ಚ್‌ನಲ್ಲಿ ಜಾಗತಿಕ ಮಟ್ಟದ ಉದ್ಯೋಗ ಅಮೆಜಾನ್ ಘೋಷಣೆ ಮಾಡಿತ್ತು. ಅದರ ಪ್ರಕಾರವಾಗಿ ಸದ್ಯ ವಜಾ ಪ್ರಕ್ರಿಯೆ ನಡೆದಿದೆ. ಉದ್ಯೋಗ ಕಡಿತ ಮಾಡುವ ಅಮೆಜಾನ್‌ನ ನಿರ್ಧಾರದಿಂದಾಗಿ ಜಾಗತಿಕವಾಗಿ 9,000 ಸಿಬ್ಬಂದಿ ನೌಕರಿ ಕಳೆದುಕೊಳ್ಳುವ ಆತಂಕವಿದೆ. ಕೊಚ್ಚಿ ಮತ್ತು ಲಕ್ಕೋದಂತಹ ನಗರಗಳಲ್ಲಿ ಅಮೆಜಾನ್‌ನ ಹಲವು ವಿಭಾಗಗಳನ್ನು ಮುಚ್ಚಲಾಗಿದೆ.
ಮಂಗಳೂರು: ಚುನಾವಣಾ ರಾಜಕೀಯದಿಂದ ನಿವೃತ್ತನಾಗುತ್ತಿದ್ದೇನೆ- ಬಿ.ರಮಾನಾಥ ರೈ ಘೋಷಣೆ
ಅಮೆಜಾನ್ ಡಿಜಿಟಲ್ ಕೇಂದ್ರಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಸುದ್ದಿ ಮಾಧ್ಯಮ ‘ಮನಿ ಕಂಟ್ರೋಲ್’ ವರದಿ ಮಾಡಿದೆ. ಈಗ ಆರಂಭವಾಗಿರುವ ಉದ್ಯೋಗ ಕಡಿತ ಮುಂದಿನ ವರ್ಷದವರೆಗೂ ಮುಂದುವರಿಯಲಿದೆ ಎಂದು ಕಂಪನಿ ಹೇಳಿದೆ.