ನವದೆಹಲಿ : ದೇಶದಲ್ಲಿ 2,000 ರೂ. ನೋಟು ರದ್ದತಿ ಘೋಷಣೆ ಹೊರಬೀಳುತ್ತಿದ್ದಂತೆ ಸರ್ಕಾರ 1,000 ರೂ. ಮುಖಬೆಲೆಯ ಹೊಸ ನೋಟುಗಳನ್ನು ಬಿಡುಗಡೆ ಮಾಡಲಿದೆ ಎಂಬ ವದಂತಿಗಳು ಹರಡಿವೆ. 1,000 ರೂ. ನೋಟು ಬಿಡುಗಡೆ ಕುರಿತಂತೆ ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅವರು ಪ್ರತಿಕ್ರಿಯೆ ನೀಡಿದ್ದು, 2,000 ರೂ.ನೋಟು ವಾಪಸ್ ಬೆನ್ನಲ್ಲೇ ಸರ್ಕಾರ 1,000 ರೂ. ಮುಖಬೆಲೆಯ ಹೊಸ ನೋಟುಗಳನ್ನು ಬಿಡುಗಡೆ ಮಾಡಲಿದೆ ಎಂಬ ವದಂತಿಗಳು ಹರಡಿವೆ.
ಇವೆಲ್ಲಾ ಕೇವಲ ಊಹಾಪೋಹ, ಇಂಥ ಯಾವುದೇ ಪ್ರಸ್ತಾಪ ಸದ್ಯ ನಮ್ಮ ಮುಂದೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇನ್ನು 2,000 ರೂ. ನೋಟು ಚಲಾಯಿಸುವ ವಿಷಯದಲ್ಲಿ ಜನರು ಆತಂಕ ಪಡುವ ಅಗತ್ಯವಿಲ್ಲ.
ಬಿಜೆಪಿ ಸರ್ಕಾರ ಕೈಗೊಂಡಿದ್ದ ಎಲ್ಲಾ ಇಲಾಖೆಗಳ ಕಾಮಗಾರಿಗಳಿಗೆ ತಡೆ : ರಾಜ್ಯ ಸರ್ಕಾರದಿಂದ ಆದೇಶ
ನೋಟುಗಳನ್ನು ಬದಲಾಯಿಸಲು ಈಗಾಗಲೇ ಬ್ಯಾಂಕ್ ಗಳಿಗೆ ಬರುವ ಅಗತ್ಯವಿಲ್ಲ.ಇದಕ್ಕಾಗಿ 4 ತಿಂಗಳ ಸುದೀರ್ಘ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದ್ದಾರೆ.