Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

BREAKING NEWS

[/vc_column][/vc_row]

ದೇಹದ ಭಾಗವನ್ನು ತುಂಡು ಮಾಡಿ ಕುಕ್ಕರ್‌ನಲ್ಲಿ ಬೇಯಿಸಿದ ಪ್ರಿಯಕರ..!

0

ಮುಂಬೈ: ವ್ಯಕ್ತಿಯೊಬ್ಬ ತನ್ನ ಲಿವ್-ಇನ್ ಸಂಗಾತಿಯನ್ನು ಹತ್ಯೆಗೈದು, ದೇಹದ ಭಾಗವನ್ನು ತುಂಡು ಮಾಡಿ ಅದನ್ನು ಕುಕ್ಕರ್ ನಲ್ಲಿ ಬೇಯಿಸಿರುವ ಘಟನೆ ಮುಂಬಯಿಯಲ್ಲಿ ನಡೆದಿದೆ.

ಮನೋಜ್ ಸಹಾನಿ (36) ಕಳೆದ ಮೂರು ವರ್ಷಗಳಿಂದ ಸರಸ್ವತಿ ವೈದ್ಯ (36) ಎಂಬುವವರೊಂದಿಗೆ ವಾಸವಾಗಿದ್ದರು.

ಬುಧವಾರ ಸಂಜೆ ಫ್ಲಾಟ್‌ ನ ಇತರೆ ಸದಸ್ಯರು ಮನೋಜ್‌ ಅವರ ನಿವಾಸದಿಂದ ಕೆಟ್ಟ ವಾಸನೆ ಬರುತ್ತಿರುವುದರಿಂದ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಇನ್ನು ಪೊಲೀಸರು ಬಂದು ನೋಡಿದಾಗ 3-4 ದಿನಗಳ ಹಿಂದೆ ಕೊಲೆಯಾಗಿರುವ ಮಹಿಳೆಯೊಬ್ಬರ ದೇಹದ ಭಾಗಗಳು ಕುಕ್ಕರ್‌ ನಲ್ಲಿ ಬೇಯುತ್ತಿರುವುದನ್ನು ಪೊಲೀಸರು ನೋಡಿದ್ದಾರೆ.

ಕೆಲವು ವಿಷಯಕ್ಕೆ ಇಬ್ಬರ ನಡುವೆ ಜಗಳವಾಗಿದ್ದು, ಇದೇ ವಿಚಾರಕ್ಕೆ ಈ ಕೃತ್ಯ ನಡೆದಿರಬಹುದು. ಆಕೆಯ ದೇಹವನ್ನು ಮರ ಕಟ್‌ ಮಾಡುವ ಮಿಷನ್‌ ನಿಂದ ತುಂಡು ಮಾಡಲಾಗಿದೆ. ನಾವು ಮನೆಗೆ ತಲುಪಿ ಬಾಗಿಲು ತೆರೆದಾಗ, ಇದು ಕೊಲೆಯ ಪ್ರಕರಣ ಎಂದು ನಮಗೆ ಗೊತ್ತಾಗಿದೆ. ಶಂಕಿತ ಆರೋಪಿ ಸಾಕ್ಷ್ಯವನ್ನು ಮರೆಮಾಡಲು ಪ್ರಯತ್ನಿಸುವ ಸಲುವಾಗಿ ಈ ರೀತಿ ದೇಹದ ಭಾಗವನ್ನು ಕುಕ್ಕರ್‌ ನಲ್ಲಿ ಬೇಯಿಸಿರಬಹುದು ಎಂದು ಪೊಲೀಸ್ ಉಪ ಆಯುಕ್ತ ಜಯಂತ್ ಬಜ್ಬಲೆ ಅವರು ಹೇಳಿದ್ದಾರೆ.

Leave A Reply

Your email address will not be published.