Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

[/vc_column][/vc_row]

ನಟಿ ಪರಿಣಿತಿ ಚೋಪ್ರಾ, ಆಪ್ ನಾಯಕ ರಾಘವ್ ಚಡ್ಡಾರೊಂದಿಗೆ ನಿಶ್ಚಿತಾರ್ಥ

0

ಮುಂಬೈ:ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಹಾಗೂ  ರಾಜಕೀಯ ನಾಯಕ ಮತ್ತು ಆಮ್ ಆದ್ಮಿ ಪಕ್ಷದ ಸಂಸದ ರಾಘವ್ ಚಡ್ಡಾ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು, ಮೇ 13ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ನಿಶ್ಚಿತಾರ್ಥದ ಫೋಟೋವನ್ನು ಚೋಪ್ರಾ ಹಾಗೂ ರಾಘವ್ ಚಡ್ಡಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳಿಂದ ಈ ಮುದ್ದಾದ ಜೋಡಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

ಉತ್ತರ ಪ್ರದೇಶ ಸ್ಥಳೀಯ ಸಂಸ್ಥೆ ಚುನಾವಣೆ: 813 ಪಾಲಿಕೆ ಸ್ಥಾನ ಗೆದ್ದ ಬಿಜೆಪಿ

ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಮತ್ತು ಗಾಯಕ ನಿಕ್ ಜೋನಾಸ್, ವಸ್ತ್ರವಿನ್ಯಾಸಕ ಮನೀಶ್ ಮಲ್ಹೋತ್ರ ಸೇರಿದಂತೆ ಅನೇಕರು ನಿಶ್ಚಿತಾರ್ಥದಲ್ಲಿ ಪಾಲ್ಗೊಂಡಿದ್ದರು.

ಇನ್ನು ಈ ಜೋಡಿ ಮೊದಲ ಬಾರಿಗೆ ಲಂಡನ್ ನಲ್ಲಿ  ಕಾಣಿಸಿದ್ದು ಅಲ್ಲದೇ  ಮುಂಬೈ ಹೋಟೆಲ್ ವೊಂದರಲ್ಲಿ ಕ್ಯಾಮರಾ ಕಣ್ಣಿಗೆ  ಸೆರೆಯಾಗಿದ್ದರು. ದೆಹಲಿ ಹಾಗೂ ಮುಂಬೈ ನ ಏರ್ಪೋರ್ಟ್ ಲ್ಲಿಯೂ ಕಾಣಿಸಿಕೊಂಡಿದ್ದರು. ಇದ್ದರಿಂದ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಅನುಮಾನಕ್ಕೆ ಬ್ರೇಕ್ ನೀಡಿದ್ದಾರೆ.

Leave A Reply

Your email address will not be published.