ದೆಹಲಿ: ವಿಶ್ವದ ಟಾಪ್ 10 ವಿಶ್ವವಿದ್ಯಾಲಯಗಳು ಯಾವವು ಅಂದ್ರೆ QS ವರ್ಲ್ಡ್ ಯೂನಿವರ್ಸಿಟಿ ಶ್ರೇಯಾಂಕ-2024ರ ಪ್ರಕಾರ, ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(MIT) ವಿಶ್ವದ ಅತ್ಯುತ್ತಮ ವಿಶ್ವವಿದ್ಯಾನಿಲಯವೆಂಬ ಸ್ಥಾನ ಪಡೆದಿದೆ.
ನಂತರದಲ್ಲಿ ಕೇಂಬ್ರಿಡ್ಜ್ ವಿವಿ, ಆಕ್ಸ್‌ಫರ್ಡ್ ವಿವಿ, ಹಾರ್ವರ್ಡ್ ವಿವಿ & ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯಗಳಿವೆ. ಇಂಪೀರಿಯಲ್ ಕಾಲೇಜ್ ಲಂಡನ್ 6ನೇ ಸ್ಥಾನದಲ್ಲಿದ್ದರೆ ETH ಜ್ಯೂರಿಚ್, ಸಿಂಗಾಪುರದ ರಾಷ್ಟ್ರೀಯ ವಿಶ್ವವಿದ್ಯಾಲಯ(NUS), ಲಂಡನ್ UCL & ಕ್ಯಾಲಿಫೋರ್ನಿಯಾ ವಿವಿ-ಬರ್ಕ್ಲಿ 10ರ ಪಟ್ಟಿಯಲ್ಲಿವೆ.