ಬೆಂಗಳೂರು: ಮಧ್ಯಾಹ್ನ ಮೂರು ಗಂಟೆಯ ಹೊತ್ತಿಗೆ ಬೆಂಗಳೂರಿನ ಕಾರ್ಪೊರೇಷನ್ ಹತ್ತಿರದ ಎಸಿಎಂಎಂ ನ್ಯಾಯಾಲಯಕ್ಕೆ ಕಿಚ್ಚ ಸುದೀಪ್ ಆಗಮಿಸಿ ನಿರ್ಮಾಪಕ ಕುಮಾರ್ ವಿರುದ್ಧ ಕ್ರಿಮಿನಲ್ ಮಾನನಷ್ಟ ಪ್ರಕರಣ ಹೂಡಿದ್ದಾರೆ.
ಕೋರ್ಟ್ ಹಾಲ್ 13 ರಲ್ಲಿ ಸುದೀಪ್ ಹಾಜರಾಗಿದ್ದರು. ನ್ಯಾಯಾಲಯವು ಮುಂದಿನ ವಿಚಾರಣೆಯನ್ನು 17.08.2023ಕ್ಕೆ ನಿಗದಿ ಮಾಡಿದೆ. ಈ ಹಿಂದೆ ಕುಮಾರ್ ಅವರಿಗೆ ಸುದೀಪ್ ಲೀಗಲ್ ನೋಟಿಸ್ ನೀಡಿದ್ದರು. ಹತ್ತು ದಿನಗಳ ಗಡುವು ಕೂಡ ನೀಡಿದ್ದರು. ಕುಮಾರ್ ಬಹಿರಂಗ ಕ್ಷಮೆ ಕೇಳದೇ ಇದ್ದರೆ, ಕ್ರಿಮಿನಲ್ ಡಿಪಾಮೇಷನ್ ಹಾಕುವುದಾಗಿಯೂ ನೋಟಿಸ್ ನಲ್ಲಿ ತಿಳಿಸಿದ್ದರು. ಕುಮಾರ್ ಯಾವುದೇ ಪ್ರತಿಕ್ರಿಯೆ ನೀಡದೇ ಇರುವ ಕಾರಣಕ್ಕಾಗಿ ಕಾನೂನು ಹೋರಾಟ ನಡೆಸಲು ಸುದೀಪ್ ಮುಂದಾಗಿದ್ದಾರೆ.
ಅಮೆಜಾನ್ ಕಾಡಿನಲ್ಲಿ ಪತ್ತೆಯಾಗಿದ್ದ ನಾಲ್ಕು ಮಕ್ಕಳು ಆಸ್ಪತ್ರೆಯಿಂದ ಬಿಡುಗಡೆ
ಸುದೀಪ್ ಅವರು ತಮ್ಮಿಂದ ಹಣ ಪಡೆದು, ವಂಚಿಸಿದ್ದಾರೆ ಎಂದು ಕುಮಾರ್ ಈ ಹಿಂದೆ ಆರೋಪ ಮಾಡಿದ್ದರು. ಕಾಲ್ ಶೀಟ್ ಕೊಡದೇ ತಮಗೆ ಸತಾಯಿಸುತ್ತಿದ್ದಾರೆ ಎಂದು ಅವರು ಸುದೀಪ್ ಮೇಲೆ ಆರೋಪ ಮಾಡಿದ್ದರು. ಅದು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಈ ಮಾತಿನ ಹಿನ್ನೆಲೆ ಸುದೀಪ್ ಕಾನೂನು ಮೊರೆ ಹೋಗಿದ್ದಾರೆ.