ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಅವರ ಸಾಕು ತಾಯಿ ತಾಯಿ ರತ್ನಮ್ಮ (72) ಅನಾರೋಗ್ಯದಿಂದ ಕೊನೆಯುಸಿರೆಳೆದಿದ್ದಾರೆ. ಬಿಜೆಪಿಯ ಪ್ರಬಲ ನಾಯಕ ಹಾಗೂ ಮಾಜಿ ಸಚಿವ ಕೆ.ಸುಧಾಕರ್ ವಿರುದ್ಧ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿದು ಭರ್ಜರಿ ಗೆಲುವು ದಾಖಲಿಸುವ ಮೂಲಕ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಪ್ರದೀಪ್ ಈಶ್ವರ್ ಸರ್ಕಾರ ರಚನೆಯ ಸಂಭ್ರಮದಲ್ಲಿದ್ದರು. ತುಂಬಾ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ರತ್ನಮ್ಮ ಇಂದು (ಮೇ 20) ಬೆಳಗ್ಗೆ ಪೇರೇಸಂದ್ರ ಗ್ರಾಮದಲ್ಲಿ ಕೊನೆಯುಸಿರೆಳೆದಿದ್ದಾರೆ. ಸಾಕು ತಾಯಿ ಇನ್ನಿಲ್ಲ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಸಿದ್ದರಾಮಯ್ಯ ಪ್ರಮಾಣ ವಚನ ಕ್ರಾರ್ಯಕ್ರಮದಲ್ಲಿ ಭಾಗಿಯಾಗಲು ಬೆಂಗಳೂರಿಗೆ ಬಂದಿದ್ದ ಪ್ರದೀಪ್ ಈಶ್ವರ್ ವಾಪಸ್ ಪೇರೇಸಂದ್ರ ಗ್ರಾಮಕ್ಕೆ ಮರಳಿದ್ದು, ತಾಯಿಯ ಅಂತಿಮ ದರ್ಶನವನ್ನು ಪಡೆದು ವಿಧಿವಿಧಾನಗಳನ್ನು ನೆರವೇರಿಸಲಿದ್ದಾರೆ.
[vc_row][vc_column]
BREAKING NEWS
- ಮಂಗಳೂರು: 17 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿ ಅರೆಸ್ಟ್
- ಜಾತಿ ನಿಂದನೆ ಪ್ರಕರಣ: ಶಿಕ್ಷಣ ಸಂಯೋಜಕ ಸಿ.ಶಿವಾನಂದ ಸೇವೆಯಿಂದ ಅಮಾನತು
- ನಿನ್ನೆ ಸಿರಿಗೆರೆಯಲ್ಲಿ 23.8 ಮಿ.ಮೀ ಮಳೆ ಎಲ್ಲೆಲ್ಲಿ ಎಷ್ಟು ಮಿ.ಮಳೆ
- ಗುಡುಗು, ಸಿಡಿಲು ಬಡಿತ: ಸಾರ್ವಜನಿಕರಿಗೆ ಪ್ರಮುಖ ಸಲಹೆಗಳು
- 18 ಕೋಟಿ ವಂಚನೆ ಮಾಡಿದ ಯುವಕ; ಎಜುಕೇಶನ್ ಹೆಸರಲ್ಲಿ ಪಂಗನಾಮ
- ಸಿದ್ಧಗಂಗಾ ಮಠದ ವಸತಿ ನಿಲಯ ಕಾಮಾಗಾರಿ ಅನುದಾನ ಬಿಡುಗಡೆ.!
- ಅತ್ತೆ-ಸೊಸೆ ಜಗಳ: ಅತ್ತೆಯನ್ನು ಕೊಂದ ಸೊಸೆ.!
- ಕರೆಂಟ್ ಬಿಲ್ ಕಟ್ಟದಿದ್ರೆ ಪವರ್ ಕಟ್.!
- ಪ್ರೌಢಶಾಲೆಗಳ ಅತಿಥಿ ಶಿಕ್ಷಕರಿಗೆ ಗುಡ್ ನ್ಯೂಸ್.!
- ಉತ್ತರಾಖಂಡದಲ್ಲಿ ಭೂಕುಸಿತ: 300 ಮಂದಿ ಪ್ರಯಾಣಿಕರ ಪರದಾಟ