ಕಾಠ್ಮಂಡು: ನೇಪಾಳ ಅಧ್ಯಕ್ಷ ರಾಮ್ ಚಂದ್ರ ಪೌಡೆಲ್ (Nepal President Ram Chandra Paudel) ಮಂಗಳವಾರ ರಾತ್ರಿ ಹೃದಯಾಘಾತಕ್ಕೊಳಗಾಗಿದ್ದಾರೆ.
ತೀವ್ರ ಅಸ್ವಸ್ಥರಾದ ಅವರನ್ಜು ತಲ್ಷಣ ಕಾಠ್ಮಂಡುವಿನ ಶಹೀದ್ ಗಂಗಾಲಾಲ್ ನ್ಯಾಷನಲ್ ಹಾರ್ಟ್ ಸೆಂಟರ್‌ಗೆ ದಾಖಲಿಸಲಾಗಿದ್ದು, ಆಂಜಿಯೋಪ್ಲಾಸ್ಟಿ ಚಿಕಿತ್ಸೆ ನೀಡಲಾಯಿತು ಎಂದು ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ರಾಮ್ ಚಂದ್ರ ಅವರಿಗೆ 78 ವರ್ಷ ವಯಸ್ಸಾಗಿದ್ದು, ಮಂಗಳವಾರ ಎದೆನೋವು ಕಾಣಿಸಿಕೊಂಡಿತ್ತು. ಅವರ ಆರೋಗ್ಯ ತಪಾಸಣೆ ಮಾಡಿದ ವೈದ್ಯರ ತಂಡ, ಅವರಿಗೆ ಮಯೋಕಾರ್ಡಿಯಲ್ ಇನ್‌ಫ್ರಾಕ್ಷನ್ ಆಗಿದ್ದನ್ನು ಖಚಿತಪಡಿಸಿದ್ದಾರೆ.