ಬೆಂಗಳೂರು: 2023-24ನೇ ಸಾಲಿಗೆ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ, ವೈಬ್ರೆಂಟ್ ಇಂಡಿಯಾಗಾಗಿ ಪಿಎಂ ಅಚೀವರ್ಸ್ ಸ್ಕಾಲರ್‍ಶಿಪ್ ಪ್ರಶಸ್ತಿಗೆ ಅರ್ಜಿ ಅಹ್ವಾನಿಸಲಾಗಿದೆ.
ಅರ್ಹತೆ: ಇತರೆ ಹಿಂದುಳಿತ ವರ್ಗ, ಆರ್ಥಿಕವಾಗಿ ಹಿಂದುಳಿದ ವರ್ಗಗಳು ಮತ್ತು ಡಿ-ನೋಟಿಫೈಡ್, ಅಲೆಮಾರಿ ಮತ್ತು ಅರೆ ಅಲೆಮಾರಿ ಬಡಕಟ್ಟು ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಷೋಷಕರ ವಾರ್ಷಿಕ ಆದಾಯ ರೂ.2.50 ಲಕ್ಷಕ್ಕಿಂತ ಹೆಚ್ಚಿರಬಾರದು. 9 ಅಥವಾ 11 ನೇ ತರಗತಿಯಲ್ಲಿ ಉನ್ನತ ದರ್ಜೆಯ ಶಾಲೆಯಲ್ಲಿ ಓದುವುದು. 9 ಮತ್ತು 10 ನೇ ತರಗತಿಗೆ ರೂ.75000, 11 ಮತ್ತು 12 ತರಗತಿಗೆ, ರೂ.1.25.000 ಇದರಲ್ಲಿ ಶಾಲಾ ಬೋಧನಾ ಶುಲ್ಕ ಹಾಗೂ ಹಾಸ್ಟೆಲ್ ಶುಲ್ಕವನ್ನು ಒಳಗೊಂಡಿರುತ್ತದೆ. ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ನಡೆಸಿದ ಯಶಸ್ವಿ ಪ್ರರೀಕ್ಷೆ (YET) 2023 ರಲ್ಲಿ ಮರಿಟ್ ಮೂಲಕ ಆಯ್ಕೆ ಮಾಡಲಾಗುವುದು. ಪರೀಕ್ಷೆಯ ವಿಧಾನ ಪೇಪರ್ ಪೆನ್ (ಒಎಂಆರ್), 2023ರ ಆಗಸ್ಟ್ 10ರ ರಾತ್ರಿ 11.50 ರವರೆಗೆ ಅರ್ಜಿಗಳನ್ನು ಸಲ್ಲಸಬಹುದು. ಆಗಸ್ಟ್ 12 ರಿಂದ ಆಗಸ್ಟ್ 16 ರವರೆಗೆ ತಿದ್ದುಪಡಿ ವಿಂಡೋ ನಡೆಯಲಿದೆ. ಪ್ರವೇಶ ಕಾರ್ಡ್‍ಗಳ ಪ್ರದರ್ಶನ ಎನ್‍ಟಿಎ ವೆಬ್‍ಸೈಟ್ ಮೂಲಕ ನಂತರ ಪ್ರಕಟಿಸಲಾಗುವುದು. 2023ರ ಸೆಪ್ಟೆಂಬರ್ 29 ರಂದು ಪರೀಕ್ಷೆ ನಡೆಯಲಿದೆ. ಅರ್ಜಿ ಸಲ್ಲಿಸುವ ದಾಖಲೆಗಳು ವಿದ್ಯಾರ್ಥಿಯು ಮಾನ್ಯವಾದ ಕ್ರಿಯಾತ್ಮಕ ಮೊಬೈಲ್ ಸಂಖ್ಯೆ, ಆಧಾರ್ ಸಂಖ್ಯೆ (UIಆ), ಆಧಾರ್ ಲಿಂಕ್ ಮಾಡಿದ ಬ್ಯಾಂಕ್ ಖಾತೆ, ಆದಾಯ ಪ್ರಮಾಣಪತ್ರ ಮತ್ತು ಜಾತಿ ಪ್ರಮಾಣಪತ್ರವನ್ನು ಹೊಂದಿರಬೇಕು.
ಸ್ಕೀಮ್ ಮಾರ್ಗಸೂಚಿಗಳು, ವಿವರವಾದ ಅರ್ಹತಾ ಮಾನದಂಡಗಳು ಮತ್ತು ಇತರೆ ವಿವರಗಳನ್ನು https://yet.nta.ac.in ಮತ್ತು http://socialjustice.gov.in/ ವೆಬ್‍ಸೈಟ್‍ನಲ್ಲಿ ಲಬ್ಯವಿರುತ್ತದೆ ಎಂದು ಚಿತ್ರದುರ್ಗ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ತಿಳಿಸಿದ್ದಾರೆ.