Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

BREAKING NEWS

[/vc_column][/vc_row]

ಪ್ರತಿ ಮನೆಗೆ ಶುದ್ದವಾದ ಕುಡಿಯುವ ನೀರು ಪೂರೈಸುತ್ತಿರುವುದು ಇತಿಹಾಸ: ಎಂ.ಚಂದ್ರಪ್ಪ.!

0

 

ಹೊಳಲ್ಕೆರೆ : ಹಿರಿಯೂರಿನ ವಾಣಿವಿಲಾಸ ಸಾಗರದಿಂದ ನೇರವಾಗಿ ನೀರು ತಂದು ತಾಲ್ಲೂಕಿನಾದ್ಯಂತ ಪ್ರತಿ ಮನೆ ಮನೆಗೆ ಶುದ್ದವಾದ ಕುಡಿಯುವ ನೀರು ಪೂರೈಸುತ್ತಿರುವುದು ಇತಿಹಾಸವಿರುವ ತನಕ ಯಾರು ಮರೆಯುವಂತಿಲ್ಲ ಎಂದು ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ಬಿಜೆಪಿ. ಅಭ್ಯರ್ಥಿ ಎಂ.ಚಂದ್ರಪ್ಪ ಹೇಳಿದರು.

ಹೊಳಲ್ಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹೆಚ್.ಡಿ.ಪುರದಲ್ಲಿ ಗ್ರಾಮಸ್ಥರು, ಮುಖಂಡರು ಹಾಗೂ ಪಕ್ಷದ ಕಾರ್ಯಕರ್ತರ ಸಭೆ ನಡೆಸಿ ಮಾತನಾಡಿದರು.

ದೇಶಕ್ಕೆ ಸ್ವಾತಂತ್ರ್ಯ ಬಂದು ಎಪ್ಪತ್ತೈದು ವರ್ಷಗಳಾದರೂ ಇಲ್ಲಿಯವರೆಗೂ ಯಾರು ಹೊಳಲ್ಕೆರೆ ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲಿಲ್ಲ. ರೈತರಿಗೆ ದಿನಕ್ಕೆ ಒಂದು ಗಂಟೆ ಮಾತ್ರ ವಿದ್ಯುತ್ ಇರುತ್ತಿತ್ತು. ಈಗ ದಿನಕ್ಕೆ ಐದು ಗಂಟೆಗಳ ಕಾಲ ರೈತರಿಗೆ ವಿದ್ಯುತ್ ನೀಡುತ್ತಿದ್ದೇನೆ. ಘಟ್ಟಿಹೊಸಹಳ್ಳಿ ಬಳಿ ಗುಡ್ಡದ ಮೇಲೆ ಎಪ್ಪತ್ತು ಕೋಟಿ ರೂ.ವೆಚ್ಚದಲ್ಲಿ ಫಿಲ್ಟರ್ ಅಳವಡಿಸಿ ಬಿಸ್ಲರಿಗಿಂತ ಶುದ್ದವಾದ ನೀರನ್ನು ಪ್ರತಿ ಮನೆ ಮನೆಗೆ ಪೂರೈಸಲು ಪೈಪ್ಲೈನ್ ಅಳವಡಿಸಲಾಗಿದೆ. ಕೆರೆ, ಕಟ್ಟೆ, ಶಾಲೆ, ಹೈಟೆಕ್ ಆಸ್ಪತ್ರೆಗಳನ್ನು ನಿರ್ಮಿಸಿದ್ದೇನೆ. 493 ಹಳ್ಳಿಗಳಲ್ಲಿ ಗುಣಮಟ್ಟದ ರಸ್ತೆಯಾಗಿದೆ. ಚುನಾವಣೆಯಲ್ಲಿ ಮತ ಹಾಕುವುದು ಒಂದು ನಿಮಿಷದ ಕೆಲಸ. ಯಾರು ಅಭಿವೃದ್ದಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತಾರೆನ್ನುವುದನ್ನು ಆಲೋಚಿಸಿ ಓಟು ಹಾಕಿ ಎಂದು ಕ್ಷೇತ್ರದ ಜನತೆಯಲ್ಲಿ ಮನವಿ ಮಾಡಿದರು.

ನಾನು ಚುನಾವಣೆಯಲ್ಲಿ ಗೆದ್ದು ಹಗಲು-ರಾತ್ರಿ ಕ್ಷೇತ್ರದ ಅಭಿವೃದ್ದಿಗೆ ದುಡಿದಿದ್ದೇನೆ. ಕಳ್ಳನಂತೆ ಓಡಿ ಹೋಗಲಿಲ್ಲ. ಎಲ್ಲಿ ಹೋದರೂ ಮಣ್ಣಿನ ರಸ್ತೆಯಿತ್ತು. ಈಗ ಎಲ್ಲಾ ಕಡೆ ಟಾರ್ ಹಾಗೂ ಸಿಮೆಂಟ್ ರಸ್ತೆಗಳಾಗಿದೆ. ಭರಮಸಾಗರದ 93 ಹಳ್ಳಿಗಳಲ್ಲಿ ಒಂದು ಓಟೂ ಆಕಡೆ ಈಕಡೆ ಹೋಗದಂತೆ ನನಗೆ ಮತ ಹಾಕುತ್ತಾರೆ. ಕ್ಷೇತ್ರದಲ್ಲಿ ಜನ ನೆಮ್ಮದಿಯಿಂದ ಬಾಳಿ ಬದುಕುವ ಅವಕಾಶ ಮಾಡಿಕೊಟ್ಟಿದ್ದೇನೆ. ಎಲ್ಲಿಯೂ ಗದ್ದಲ ಗಲಾಟೆಯಿಲ್ಲ. ಯಾರ ಮೇಲೂ ಜಾತಿ ನಿಂದನೆ ಕೇಸು ಹಾಕಿಸಿಲ್ಲ. ಪೊಲೀಸ್ ಠಾಣೆಯಲ್ಲಿ ನೊಣ ಹೊಡೆಯುವಂತೆ ಮಾಡಿದ್ದೇನೆ. ಇಲ್ಲಿಂದ ಗೆದ್ದು ಐದು ವರ್ಷಗಳ ಕಾಲ ಮಂತ್ರಿಯಾಗಿದ್ದ ಹೆಚ್.ಆಂಜನೇಯ ಇದುವರೆವಿಗೂ ಎಲ್ಲಿ ಹೋಗಿದ್ದಪ್ಪ. ಈಗ ಚುನಾವಣೆಗೆ ಬಂದು ನಿಂತರೆ ಯಾರು ಮತ ಹಾಕುವುದಿಲ್ಲ. ಹುಷಾರ್ ಎಂದು ಎಚ್ಚರಿಸಿದರು.

ರಾಜಪ್ಪ, ರಾಜಣ್ಣ, ಎಲೆ ರಾಜಪ್ಪ, ಪ್ರವೀಣ್, ಅಣ್ಣಪ್ಪ, ಜಗದೀಶ್, ಪ್ರಸನ್ನ, ನಾಗರಾಜ್, ಸತೀಶ್, ಶಿವಸ್ವಾಮಿ, ಗ್ರಾಮದ ಹಿರಿಯರು ಸಭೆಯಲ್ಲಿ ಹಾಜರಿದ್ದರು.

Leave A Reply

Your email address will not be published.