ತನ್ನ ರೈತ-ಉತ್ಪಾದಕರ ಸಂಸ್ಥೆ (ಎಫ್‌ಪಿಒ) ತಯಾರಿಸಿದ ಸೇಬಿನ ಚಟ್ನಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಳುಹಿಸಿದ 40 ವರ್ಷದ ಮಹಿಳೆಗೆ ದೆಹಲಿಯ ಕೆಂಪು ಕೋಟೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸಲು ಆಹ್ವಾನಿಸಲಾಗಿದೆ. 162 ಗ್ರಾಮಸ್ಥರನ್ನು ಒಟ್ಟುಗೂಡಿಸಿ ಎಫ್‌ಪಿಒ ರೂಪಿಸಿದ ಉತ್ತರಾಖಂಡದ ಸುನೀತಾ ರೌಟೇಲಾ ಅವರನ್ನು ವಿಶೇಷ ಅತಿಥಿಯಾಗಿ ಆಹ್ವಾನಿಸಲಾಯಿತು. ಸರ್ಕಾರದ ಯೋಜನೆಯು FPOಯು UNDP ನೆರವು ಪಡೆಯಲು ಸಹಾಯ ಮಾಡಿತು. ಸುನೀತಾ ರೌಟೇಲಾ ಉತ್ತರಕಾಶಿಯ ಹಳ್ಳಿಯೊಂದರ ಸೇಬು ಬೆಳೆಗಾರರಾಗಿದ್ದಾರೆ. ಅವರು ಕಳೆದ ವರ್ಷ ಮೇ ತಿಂಗಳಲ್ಲಿ ತಮ್ಮ ಪತಿಯ ಸಹಾಯದಿಂದ ರೈತ ಉತ್ಪಾದಕರ ಸಂಸ್ಥೆಯನ್ನು ಸ್ಥಾಪಿಸಿದರು. ಉತ್ತರಕಾಶಿ ಜಿಲ್ಲೆಯ ಝಾಲಾದ 162 ಗ್ರಾಮಸ್ಥರೊಂದಿಗೆ ಅವರು ಉಪ್ಲಾ ಟಕ್ನೋರ್ ಫಾರ್ಮರ್ ಪ್ರೊಡ್ಯೂಸರ್ ಆರ್ಗನೈಸೇಶನ್ ಅನ್ನು ಆರಂಭಿಸಿದರು. ಸಂಸ್ಥೆಯು ಸೇಬು ಚಟ್ನಿ ಮತ್ತು ಜಾಮ್ ಮಾಡಲು ಪ್ರಾರಂಭಿಸಿತು. ಈ ವರ್ಷದ ಮಾರ್ಚ್‌ನಲ್ಲಿ ಸುನೀತಾ ಅವರು ಪ್ರಧಾನಿ ಮೋದಿಗೆ ಚಟ್ನಿ ಕಳುಹಿಸಿದ್ದರು. ಸುಮಾರು ಎರಡು ತಿಂಗಳ ನಂತರ ಅಂದರೆ ಮೇ ತಿಂಗಳಿನಲ್ಲಿ ಗ್ರಾಮದ ಮುಖ್ಯಸ್ಥ ಹರೀಶ್ ರಾಣಾ ಅವರಿಗೆ ಪಿಎಂಒದಿಂದ ಪತ್ರ ಬಂದಿತ್ತು. ಇದರಲ್ಲಿ ಸುನೀತಾ ಅವರ ಉಪ್ಪಿನಕಾಯಿ ಮತ್ತು ಅವರ ಪ್ರಯತ್ನವನ್ನು ಪ್ರಧಾನಿ ಮೋದಿ ಶ್ಲಾಘಿಸಿದರು. ಇದಾದ ನಂತರ ಇಡೀ ಪ್ರದೇಶದಲ್ಲಿ ಸುನೀತಾ ಚರ್ಚೆ ಶುರುವಾಯಿತು.
[vc_row][vc_column]
BREAKING NEWS
- ಉದ್ಯೋಗಿಯಿಂದ ಮಹಾನ್ ಎಡವಟ್ಟು – ಮೈಕ್ರೋಸಾಫ್ಟ್ ನ 32ಟಿಬಿ ಮಾಹಿತಿ ಸೋರಿಕೆ
- ವಂಚನೆ ಪ್ರಕರಣ – ಚೈತ್ರಾ ಸೇರಿ 7 ಮಂದಿಗೆ ಅ. 6ರ ವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ
- ನಿಂಜಾ ಪ್ರಶಸ್ತಿ ಪಡೆದ 71 ವರ್ಷದ ಮಹಿಳೆಯ ಗಿನ್ನಿಸ್ ದಾಖಲೆ!
- ಹೊಸ ಐಫೋನ್ ಖರೀದಿಗೆ ಮುಗಿಬಿದ್ದ ಜನ – ಈ ಫೋನ್ ನಲ್ಲಿ ಅಂಥಾದ್ದೇನಿದೆ?
- ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಕುರಿತ ಸ್ಪೋಟಕ ಮಾಹಿತಿ ಬಹಿರಂಗ?
- ಸನಾತನ ಧರ್ಮದ ಬಗ್ಗೆ ಮಾತನಾಡಿದ್ದಕ್ಕೆ ಚಿಕ್ಕಮಗುವನ್ನು ಬೇಟೆಯಾಡುತ್ತಿದ್ದಾರೆ -ಕಮಲ್ ಹಾಸನ್
- ಮುಂಬೈ ಜಿಎಸ್ ಬಿ ಗಣೇಶೋತ್ಸವದಲ್ಲಿ ಪಾಲ್ಗೊಂಡ ಕರಾವಳಿ ಬೆಡಗಿ ನಟಿ ಪೂಜಾ ಹೆಗ್ಡೆ
- ಎತ್ತಿನಹೊಳೆ ಯೋಜನೆ Out dated subject – ಮಾಜಿ ಸಿಎಂ ವೀರಪ್ಪ ಮೊಯಿಲಿ..!
- ಬೆಂಗಳೂರಿನಲ್ಲಿ ಮೊದಲ ಬಾರಿಗೆ ಕಂಬಳ – ಅಶೋಕ್ ರೈ ನೇತೃತ್ವದಲ್ಲಿ ಸ್ಥಳ ಪರಿಶೀಲನೆ
- ಮುದ್ರಾಂಕ ಇಲಾಖೆಯ ವೆಬ್ಸೈಟ್ಗೆ ಕನ್ನ – ಎಇಪಿಎಸ್ ಮೂಲಕ ಒಂದು ಲಕ್ಷ ರೂ. ವಂಚನೆ?