ವಾಷಿಂಗ್ಟನ್ : ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅಲ್ಲಿನ ಸಿಇಒ, ವೈದ್ಯರು, ಶಿಕ್ಷಣ ತಜ್ಞರನ್ನು ಭೇಟಿ ಮಾಡಿ ಚರ್ಚೆಯನ್ನು ನಡೆಸಿದ್ದಾರೆ. ಇದರ ಜತೆಗೆ ಈ ಬಾರಿ ವಿಶ್ವ ಯೋಗ ದಿನವನ್ನು ಅಮೆರಿಕದಲ್ಲಿ ಆಚರಿಸಿದ್ದಾರೆ. ಇದೀಗ ಪ್ರಧಾನಿ ಮೋದಿ ವಾಷಿಂಗ್ಟನ್‌ನಲ್ಲಿ ಜನರಲ್ ಎಲೆಕ್ಟ್ರಿಕ್ ಅಧ್ಯಕ್ಷ ಎಚ್ ಲಾರೆನ್ಸ್ ಕಲ್ಪ್ ಜೂನಿಯರ್ ಭೇಟಿಯಾದ ಕೆಲವೇ ಗಂಟೆಗಳ ನಂತರ ಒಂದು ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಬಹುರಾಷ್ಟ್ರೀಯ ಸಮೂಹದ ಏರೋಸ್ಪೇಸ್ ವಿಭಾಗವು ಭಾರತೀಯ ವಾಯುಪಡೆಗೆ ಫೈಟರ್ ಜೆಟ್ ಎಂಜಿನ್‌ಗಳನ್ನು ಉತ್ಪಾದಿಸಲು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಜಿಇ ಏರೋಸ್ಪೇಸ್ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ, ಪ್ರಧಾನಿ ಮೋದಿಯವರ ಯುಎಸ್ ಪ್ರವಾಸದ ನಡುವೆ ಒಂದು ಮಹತ್ವದ ಒಪ್ಪಂದಕ್ಕೆ ಸಹಿ ಮಾಡಿದ್ದಾರೆ. ಇದು ವಾಯುಪಡೆಯಲ್ಲಿ ಒಂದು ಪ್ರಮುಖ ಮೈಲಿಗಲ್ಲು ಮತ್ತು ಎರಡೂ ದೇಶಗಳ ನಡುವಿನ ರಕ್ಷಣಾ ಸಹಕಾರವನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರವಹಿಸಲಿದೆ ಎಂದು ಹೇಳಿದೆ. US ಏರೋಸ್ಪೇಸ್ ಕಂಪನಿಯ ಪ್ರಕಾರ, ಈ ಒಪ್ಪಂದವು ಭಾರತದಲ್ಲಿ GE ಏರೋಸ್ಪೇಸ್‌ನ F414 ಎಂಜಿನ್‌ಗಳ ಸಂಭಾವ್ಯ ಜಂಟಿ ಉತ್ಪಾದನೆಯನ್ನು ಒಳಗೊಂಡಿದೆ. ಜತೆಗೆ ಇದನ್ನು ರಫ್ತು ಮಾಡುವ ಅಧಿಕಾರವನ್ನು ಪಡೆಯಲು ಯುಎಸ್ ಸರ್ಕಾರದೊಂದಿಗೆ ಮಾತುಕತೆ ನಡೆಸಿ ಎಂದು ವಿಮಾನ ಎಂಜಿನ್ ಪೂರೈಕೆದಾರರು ಹೇಳಿದ್ದಾರೆ. ಈ ಒಪ್ಪಂದದಿಂದ ಭಾರತೀಯ ವಾಯುಪಡೆಯ ಲಘು ಯುದ್ಧ ವಿಮಾನ Mk2ವಿನ ಪ್ರಮುಖ ಭಾಗವಾಗಿ ಕಾರ್ಯನಿರ್ವಹಿಸಲಿದೆ.
[vc_row][vc_column]
BREAKING NEWS
- ‘ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ನ ಲೆಕ್ಕಾಚಾರದ ತಂತ್ರಗಳು ಕೆಲಸ ಮಾಡುವುದಿಲ್ಲ’- ಬಿಎಸ್ವೈ
- ಬೆಳಗಾವಿ : ಮಂತ್ರಿಗಳೆಲ್ಲ ತೆಲಂಗಾಣಕ್ಕೆ ಹೋಗಿ ಅಲ್ಲಿನ ಎಂಎಲ್ಎ ಗಳ ಸೇವೆ ಮಾಡ್ತಿದ್ದಾರೆ – ವಿಪಕ್ಷ ನಾಯಕ ಆರ್ ಅಶೋಕ ಕಿಡಿ
- 10 ಮಂದಿ ಬಿಜೆಪಿ ಸಂಸದರು ಸಂಸತ್ ಸ್ಥಾನಗಳಿಗೆ ರಾಜೀನಾಮೆ
- ಸರಕಾರಿ ಹುದ್ದೆಗಳ ನೇಮಕಾತಿ ಅಕ್ರಮ ತಡೆಗಟ್ಟಲು ವಿಧೇಯಕ ಮಂಡನೆ
- ಉಧಂಪುರ ದಾಳಿ ಸಂಚುಕೋರ, 26/11 ಮಾಸ್ಟರ್ ಮೈಂಡ್ ಹಫೀಜ್ ಸಯೀದ್ನ ಸಹಾಯಕ ಪಾಕ್ನಲ್ಲಿ ಹತ್ಯೆ
- ಕೊನೆಗೂ ಉರ್ಫಿ ಜಾವೇದ್ ಇನ್ಸ್ಟಾಗ್ರಾಮ್ ಅಕೌಂಟ್ ಡಿಲೀಟ್
- ‘ತೊಡೆಯ ಮೇಲೆ ಕೂರಿಸಿಕೊಂಡು ಮುದ್ದಾಡುತ್ತಿದ್ದವರು ಈಗ ಮುಸ್ಲಿಂ ದ್ವೇಷಿ’- ಹೆಚ್ಡಿಕೆಗೆ ದಿನೇಶ್ ಗುಂಡೂರಾವ್ ಟಾಂಗ್
- ಕೊಳವೆ ಬಾವಿಗೆ ಬಿದ್ದ ಬಾಲಕಿ ಚಿಕಿತ್ಸೆ ಫಲಿಸದೆ ಮೃತ್ಯು
- ಗುರಿ ತಪ್ಪಿದ ಸೇನಾ ಡ್ರೋನ್ ದಾಳಿ; 85 ಮಂದಿ ನಾಗರಿಕರು ಮೃತ್ಯು
- ಪ್ಯಾಕಿಂಗ್ ಆಹಾರ ಉತ್ಪನ್ನಗಳಿಂದ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆ ಹೆಚ್ಚಾಗಿ ಕಾಣಿಸುತ್ತದೆ – ಏಮ್ಸ್ ವರದಿ