Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

BREAKING NEWS

[/vc_column][/vc_row]

ಪ್ರಧಾನಿ ಮೋದಿ ಅಮೇರಿಕಾ ಪ್ರವಾಸ-ನ್ಯೂಯಾರ್ಕ್ ತಲುಪಿದ ಮೋದಿ

0

ನ್ಯೂಯಾರ್ಕ್: ಪ್ರಧಾನಿ ನರೇಂದ್ರ ಮೋದಿ ನ್ಯೂಯಾರ್ಕ್ ತಲುಪಿದ್ದು, 3 ದಿನಗಳ ಅಮೇರಿಕಾ ಪ್ರವಾಸವನ್ನು ಆರಂಭಿಸಿದ್ದಾರೆ.

ಅಮೇರಿಕಾ-ಭಾರತದ ದ್ವಿಪಕ್ಷೀಯ ಸಂಬಂಧ ಪ್ರಜಾಪ್ರಭುತ್ವ, ವೈವಿಧ್ಯತೆ ಹಾಗೂ ಸ್ವಾತಂತ್ರ್ಯದ ಮೌಲ್ಯಗಳ ಆಧಾರವನ್ನು ಹೊಂದಿದೆ ಹಾಗೂ ಉಭಯ ರಾಷ್ಟ್ರಗಳು ಜಾಗತಿಕ ಸವಾಲುಗಳನ್ನು ಎದುರಿಸಲು ಜೊತೆಯಾಗಿ ನಿಂತಿವೆ ಎಂದು ಮೋದಿ ಅಮೇರಿಕಾ ಪ್ರವಾಸಕ್ಕೂ ಮುನ್ನ ಹೇಳಿದ್ದರು.

ಪ್ರಧಾನಿ ನರೇಂದ್ರ ಮೋದಿ ನ್ಯೂಯಾರ್ಕ್ ಗೆ ಆಗಮಿಸುತ್ತಿದ್ದಂತೆಯೇ, ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಅನಿವಾಸಿ ಭಾರತೀಯರ ಸಮೂಹ, ಮೋದಿ, ಮೋದಿ ಘೋಷಣೆಗಳೊಂದಿಗೆ ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಿತು.

ನ್ಯೂಯಾರ್ಕ್ ನಲ್ಲಿ ಪ್ರಧಾನಿ ಮೋದಿ ಉದ್ಯಮ, ಕಲೆ, ಥಿಂಕ್ ಟ್ಯಾಂಕ್ ಸಮುದಾಯ, ಆರೋಗ್ಯ, ವಿಜ್ಞಾನ ಸೇರಿದಂತೆ ಹಲವು ಕ್ಷೇತ್ರಗಳಲ್ಲಿರುವ ಜನರನ್ನು ಭೇಟಿ ಮಾಡಲಿದ್ದಾರೆ. ಟೆಸ್ಲಾದ ಸಿಇಒ, ಸ್ಪೇಸ್ ಎಕ್ಸ್ ಹಾಗೂ ಟ್ವಿಟರ್ ನ ಅಧ್ಯಕ್ಷ ಎಲಾನ್ ಮಸ್ಕ್, ಖಗೋಳ ಭೌತಶಾಸ್ತ್ರಜ್ಞ ನೀಲ್ ಡಿಗ್ರಾಸ್ ಟೈಸನ್, ಗ್ರ್ಯಾಮಿ ಪ್ರಶಸ್ತಿ ವಿಜೇತ ಭಾರತೀಯ-ಅಮೆರಿಕನ್ ಗಾಯಕ ಫಾಲು (ಫಲ್ಗುಣಿ ಶಾ), ನಿಕೋಲಸ್ ನಾಸಿಮ್ ತಾಲೆಬ್, ರೇ ಡಾಲಿಯೊ, ಜೆಫ್ ಸ್ಮಿತ್, ಮೈಕೆಲ್ ಫ್ರೊಮಾನ್ ಡೇನಿಯಲ್ ರಸ್ಸೆಲ್, ಎಲ್ಬ್ರಿಡ್ಜ್ ಕಾಲ್ಬಿ, ಪೀಟರ್ ಆಗ್ರೆ, ಸ್ಟೀಫನ್ ಕ್ಲಾಸ್ಕೊ ಮತ್ತು ಚಂದ್ರಿಕಾ ಟಂಡನ್ ಅವರನ್ನು ಪ್ರಧಾನಿ ಮೋದಿ ಭೇಟಿ ಮಾಡಲಿದ್ದಾರೆ.

ಬುಧವಾರ ಬೆಳಿಗ್ಗೆ (ಪೂರ್ವ ದೇಶಗಳ ಸಮಯ) ವಿಶ್ವಸಂಸ್ಥೆಯಲ್ಲಿ ನಡೆಯಲಿರುವ 9 ನೇ ಅಂತಾರಾಷ್ಟ್ರಿಯ ಯೋಗ ದಿನಾಚರಣೆಯಲ್ಲಿ ಪ್ರಧಾನಿ ಮೋದಿ ಭಾಗಿಯಾಗಲಿದ್ದಾರೆ.

ಯೋಗ ದಿನಾಚರಣೆಯಲ್ಲಿ ಭಾಗಿಯಾದ ಬಳಿಕ ಪ್ರಧಾನಿ ವಾಷಿಂಗ್ ಟನ್ ಡಿಸಿಗೆ ತೆರಳಲಿದ್ದು, ಅಲ್ಲಿ ಶ್ವೇತ ಭವನದಲ್ಲಿ ಪ್ರಧಾನಿ ಮೋದಿ ಅವರಿಗೆ ವಿಧ್ಯುಕ್ತ ಸ್ವಾಗತ ಏರ್ಡಾಗಿದೆ. ಈ ಬಳಿಕ ಬೈಡನ್ ಸರ್ಕಾರ ಆಯೋಜಿಸಿರುವ ಔತಣ ಕೂಟ ಹಾಗೂ ಉಪಾಧ್ಯಕ್ಷರು ಆಯೋಜಿಸಿರುವ ಉಪಹಾರ ಕೂಟದಲ್ಲಿ ಮೋದಿ ಭಾಗವಹಿಸಲಿದ್ದಾರೆ. ಈ ಬಳಿಕ ಮೋದಿ ಅಮೇರಿಕಾ ಕಾಂಗ್ರೆಸ್ ನ ಜಂಟಿ ಸದನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ನಂತರ ಅನಿವಾಸಿ ಭಾರತೀಯರನ್ನುದ್ದೇಶಿಸಿ ಮೋದಿ ಭಾಷಣ ಮಾಡಲಿದ್ದಾರೆ

Leave A Reply

Your email address will not be published.