ಹೊಳಲ್ಕೆರೆ: ಕ್ಷೇತ್ರದಲ್ಲಿಕೆರೆ ಹೂಳೆತ್ತುವ ಕಾಮಗಾರಿ, ರಸ್ತೆಅಭಿವೃದ್ಧಿ ಹೆಸರಲ್ಲಿಆಗಿರುವಕೋಟ್ಯಾಂತರರೂಪಾಯಿಅವ್ಯವಹಾರಕ್ಕೆ ಸಂಬಂಧಪಟ್ಟಂತೆ ದಾಖಲೆಗಳಿದ್ದು, ಈ ಸಂಬಂಧ ಜಿಲ್ಲಾಡಳಿತ ತನಿಖೆ ನಡೆಸಿದರೆ ಇನ್ನಷ್ಟು ಭ್ರಷ್ಟಾಚಾರ ಬಯಲಿಗೆ ಬರಲಿದೆಎಂದು ಮಾಜಿ ಸಚಿವಎಚ್.ಆಂಜನೇಯ ಹೇಳಿದರು.
ಹೊಳಲ್ಕೆರೆ ಪಟ್ಟಣ ಹಾಗೂ ಸುತ್ತಮುತ್ತಲ ಹಳ್ಳಿಗಳಲ್ಲಿ ಸೋಮವಾರ ಕೊನೇ ದಿನ ಮನೆ ಮನೆ ಭೇಟಿ ನೀಡಿ ಮತಯಾಚನೆ ನಡೆಸಿದ ಸಂದರ್ಭ ಮಾತನಾಡಿದರು.
300 ಕೆರೆ ಅಭಿವೃದ್ಧಿಗೊಳಿಸಿದ್ದೇನೆ ಎಂದು ಪದೇ ಪದೆ ಸುಳ್ಳು ಹೇಳುವ ಚಂದ್ರಪ್ಪ, ಭರಮಸಾಗರಕೆರೆಗೆಏತನೀರಾವರಿ ಮೂಲಕ ನೀರು ಹರಿಸುವಯೋಜನೆಜಾರಿ ಹಾಗೂ ಹೊಳಲ್ಕೆರೆ ತಾಲೂಕು ಭದ್ರಾ ಮೇಲ್ದಂಡೆಯೋಜನೆ ವ್ಯಾಪ್ತಿಗೆ ಸೇರಿದ್ದು ಸಿದ್ದರಾಮಯ್ಯ ನೇತೃತ್ವದಕಾಂಗ್ರೆಸ್ ಸರ್ಕಾರದಅವಧಿಯಲ್ಲಿ.ಈ ವಿಷಯದಲ್ಲಿ ಸಿರಿಗೆರೆ ಮಠದಡಾ.ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳ ಇಚ್ಛಾಶಕ್ತಿ ಪ್ರಮುಖಕಾರಣಆಗಿದೆ.ಆದರೆ, ಚಂದ್ರಪ್ಪ ಮಾತ್ರಎಲ್ಲವನ್ನೂ ನಾನೇ ಮಾಡಿದ್ದೇನೆಎಂದು ಸುಳ್ಳು ಹೇಳಿಕೊಂಡು ಪ್ರಚಾರ ಪಡೆಯುತ್ತಿರುವುದು ಸರಿಯಲ್ಲಎಂದರು.
ಸಾರಿಗೆ ನಿಗಮದಅಧ್ಯಕ್ಷರಾಗಿರುವ ಶಾಸಕ ಚಂದ್ರಪ್ಪ, ಕ್ಷೇತ್ರಕ್ಕೆ ಏನು ಕೊಡುಗೆ ನೀಡಿದ್ದಾರೆಎಂಬುದನ್ನು ಸ್ವತಃ ಪ್ರಶ್ನೇ ಮಾಡಿಕೊಳ್ಳಬೇಕು.ನಾನು ಸಚಿವನಾಗಿದ್ದ ಸಂದರ್ಭದಲ್ಲಿ ಹೊಳಲ್ಕೆರೆ ಪಟ್ಟಣದಲ್ಲಿ ಸಾರಿಗೆ ನಿಗಮದತರಬೇತಿಕೇಂದ್ರ, ಅನೇಕ ಶಿಕ್ಷಣ ಸಂಸ್ಥೆ, ಸಮುದಾಯ ಭವನಗಳನ್ನು ನಿರ್ಮಿಸಲಾಗಿತ್ತು.ನಮ್ಮಅವಧಿಯಲ್ಲಿಆಗಿದ್ದಅಭಿವೃದ್ಧಿ ಕೆಲಸಗಳನ್ನು ಉದ್ಘಾಟಿಸಿರುವುದೇ ಚಂದ್ರಪ್ಪನ ಸಾಧನೆಎಂದು ಹೇಳಿದರು.
ನನ್ನ ಹಾಗೂ ಶಾಸಕ ಚಂದ್ರಪ್ಪನಅವಧಿಯಲ್ಲಿಆಗಿರುವಅಭಿವೃದ್ಧಿ ಹಾಗೂ ಅವರಕಾಲದಲ್ಲಿಆಗಿರುವಅವ್ಯವಹಾರಕುರಿತು ಬಹಿರಂಗಚರ್ಚೆಗೆ ನಾನು ಸಿದ್ಧನಿದ್ದೇನೆ. ಸಮಯ, ದಿನಾಂಕ, ಸ್ಥಳವನ್ನೇ ಅವರೇ ನಿಗದಿ ಮಾಡಲಿ.ಅಂದು ನಾನು ಹಾಜರಾಗುತ್ತೇನೆಎಂದು ಸವಾಲು ಹಾಕಿದಆಂಜನೇಯ, 2012ರಲ್ಲಿ ತಾಲೂಕುಕಚೇರಿಎದುರು ಶಾಮಿಯಾನ ಹಾಕಿ ಚರ್ಚೆಗೆ ವೇದಿಕೆ ಸಿದ್ಧಪಡಿಸಿದ್ದ ಸಂದರ್ಭ, ಚಂದ್ರಪ್ಪಗೈರಾಗಿದ್ದರು.ಆದರೆ, ಈ ಬಾರಿ ಆ ರೀತಿ ಮಾಡದೆಜನರಿಗೆ ಸತ್ಯಾಸತ್ಯತೆ ತಿಳಿಸಲು ಚರ್ಚೆಗೆಚಂದ್ರಪ್ಪ ಬರಬೇಕುಎಂದು ಒತ್ತಾಯಿಸಿದರು.
ಮಾಜಿ ಶಾಸಕ ಎ.ವಿ.ಉಮಾಪತಿ ಮಾತನಾಡಿ, ಕಾಡುಗೊಲ್ಲ ಸಮುದಾಯವನ್ನುಜಾತಿ ಪಟ್ಟಿಗೆ ಸೇರಿಸಲು ಶ್ರಮಿಸಿದ್ದು ಆಂಜನೇಯಅವರು. ಜತೆಗೆಕಾಡುಗೊಲ್ಲರನ್ನುಎಸ್‍ಟಿಗೆ ಸೇರಿಲುಕೇಂದ್ರ ಶಿಫಾರಸ್ಸು, ಕಾಡುಗೊಲ್ಲ ಸಮುದಾಯದಕುರಿಗಾಹಿ ಮಹಿಳೆ ಜಯಮ್ಮ ಬಾಲರಾಜ್‍ಅವರನ್ನುಎಂಎಲ್ಸಿ ಮಾಡಿದ್ದು, ಸಮುದಾಯದ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ಹೀಗೆ ಕಾಡುಗೊಲ್ಲ ಸಮುದಾಯಕ್ಕೆ ಹೆಚ್ಚು ಮನ್ನಣೆ ನೀಡಿದ್ದು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮತ್ತುಆಂಜನೇಯ.ಈ ಋಣವನ್ನುತೀರಿಸುವ ಸಮಯ ಈಗ ಬಂದಿದ್ದು, ಆಂಜನೇಯಅವರನ್ನು ಹೆಚ್ಚು ಮತಗಳ ಅಂತರದಲ್ಲಿಗೆಲ್ಲಿಸಬೇಕುಎಂದರು.
ವಾಲ್ಮೀಕಿ, ಕುಂಚಿಟಿಗ, ಲಿಂಗಾಯತ ಹೀಗೆ ಎಲ್ಲ ಸಮುದಾಯದ ಬಡವರಿಗೆ ಕೊಳವೆಬಾವಿ ಕೊರೆಯಿಸಿ ಅವರ ಜಮೀನುಗಳನ್ನು ತೋಟವನ್ನಾಗಿ ಪರಿವರ್ತಿಸಿದ ಕೀರ್ತಿಆಂಜನೇಯಅವರಿಗೆ ಸಲ್ಲುತ್ತದೆ.ಜೊತೆಗೆಆಂಜನೇಯಅವರು ಮಂಜೂರು ಮಾಡಿದ್ದ ಸಾವಿರಾರು ಕೊಳವೆಗಳ ಸೌಲಭ್ಯಕ್ಕೆದ್ವೇಷದರಾಜಕೀಯಕಾರಣಕ್ಕಾಗಿತಡೆ ಹಾಕಿ, ಬಡಜನರಿಗೆ ಸಮಸ್ಯೆ ಮಾಡಿದಕುಖ್ಯಾತಿ ಶಾಸಕ ಚಂದ್ರಪ್ಪನಿಗೆ ಸಲ್ಲುತ್ತದೆಎಂದು ಹೇಳಿದರು.
ಬ್ಲಾಕ್‍ಕಾಂಗ್ರೆಸ್‍ಅಧ್ಯಕ್ಷ ಎಸ್.ಟಿ.ಹನುಮಂತಪ್ಪ, ನಗರಘಟಕದಅಧ್ಯಕ್ಷ ಮಜರ್‍ಉಲ್ಲಾಖಾನ್, ಕಾಂಗ್ರೆಸ್ ಪುರಸಭೆ ಸದಸ್ಯರಾದ ವಸಂತರಾಜಪ್ಪ, ವಿಜಯಸಿಂಹ ಖಾಟ್ರೋತ್, ಮನ್ಸೂರ್, ವಿಜಯ್, ಮುಖಂಡರಾದ ಪುರುಷೋತ್ತಮ್ ಮತಿತರರಿದ್ದರು.