Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

[/vc_column][/vc_row]

ಬಾಕಿ ವಿದ್ಯುತ್ ಬಿಲ್​​ ಕಟ್ಟುವಂತೆ ಮೊಬೈಲ್‌ಗೆ ಲಿಂಕ್‌ – 5.48 ಲಕ್ಷ ರೂ. ಡ್ರಾ ಮಾಡಿದ ವಂಚಕರು

0

ಮೈಸೂರು: ದೂರವಾಣಿ ಕರೆ ಮಾಡಿ ಬಾಕಿ ವಿದ್ಯುತ್ ಬಿಲ್ ಕಟ್ಟುವಂತೆ ಹೇಳಿ ವ್ಯಕ್ತಿಯೊಬ್ಬರ ಖಾತೆಯಿಂದ​ ಬರೋಬ್ಬರಿ 5.48 ಲಕ್ಷ ರೂ. ದೋಚಿರುವ ಘಟನೆ ಮೈಸೂರಿನ ಯಾದವಗಿರಿ ಬಡಾವಣೆಯಲ್ಲಿ ಬೆಳಕಿಗೆ ಬಂದಿದೆ.

ಕಣ್ಣನ್ ಎಂಬುವರಿಗೆ ವಂಚಕರು ದೂರವಾಣಿ ಕರೆ ವಿದ್ಯುತ್ ಬಿಲ್ ಬಾಕಿ ಇದ್ದು, ಲಿಂಕ್​ ಮೂಲಕ ಪಾವತಿಸುವಂತೆ ಸೂಚಿಸಿದ್ದಾರೆ.

ಇನ್ನು ಕರೆ ಕಡಿತಗೊಳಿಸಿದ ಬಳಿಕ ಕಣ್ಣನ್ ಅವರ ಫೋನ್​ಗೆ ಲಿಂಕ್ ಕಳುಹಿಸಿ ಹಣ ಪಾವತಿಸುವಂತೆ ಹೇಳಿದ್ದಾರೆ. ಅದರಂತೆ ಕಣ್ಣನ್ ಅವರು ಸಹ ವಂಚಕರು ಕಳುಹಿಸಿದ್ದ ಲಿಂಕ್​ ಮೇಲೆ ಕ್ಲಿಕ್​ ಮಾಡಿದ್ದಾರೆ. ಬಳಿಕ ವಂಚಕರು ಲಿಂಕ್ ಮೂಲಕ ಸಂಪೂರ್ಣ ಮಾಹಿತಿ ಪಡೆದು ಖಾತೆಯಿಂದ 5,48,149 ರೂ. ಡ್ರಾ ಮಾಡಿಕೊಂಡಿದ್ದಾರೆ.

ಹಣ ಡ್ರಾ ಆಗಿರುವ ಮೆಸೇಜ್ ನೋಡಿ ಕಣ್ಣನ್​ ಅವರು ಕೂಡಲೇ ಮೈಸೂರು ಸೈಬರ್ ಪೊಲೀಸ್ ಠಾಣೆಗೆ ತೆರೆಳಿ ದೂರು ದಾಖಲಿಸಿದ್ದಾರೆ.

Leave A Reply

Your email address will not be published.