ಬಾರಾಮುಲ್ಲಾ: ಕಾಶ್ಮೀರ ಪೊಲೀಸರು ಕಾರ್ಯಾಚರಣೆ ನಡೆಸಿ ನಿಷೇಧಿತ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಬಾದ ಭಯೋತ್ಪಾದಕ ಸಹಚರನನ್ನು ಬಾರಾಮುಲ್ಲಾ ಜಿಲ್ಲೆಯ ನಾಗಬಲ್ ಚಂದೂಸಾ ಪ್ರದೇಶದಲ್ಲಿ ಬಂಧಿಸಿದ್ದಾರೆ.
ಭಯೋತ್ಪಾದಕನನ್ನು ಬಾರಾಮುಲ್ಲಾದ ಲಾರಿದೂರ ಚಂದೂಸಾ ನಿವಾಸಿ ಮೊಹಮ್ಮದ್ ಅಶ್ರಫ್ ಮಿರ್ ಎಂದು ಗುರುತಿಸಲಾಗಿದೆ. ಆತನಿಗಾಗಿ ಹುಡುಕಾಟ ನಡೆಸಿದ ಸಮಯದಲ್ಲಿ ಪೊಲೀಸರು ಅವನ ಬಳಿ ಇದ್ದ ಗ್ರೆನೇಡ್ ಅನ್ನು ವಶಪಡಿಸಿಕೊಂಡರು. ಈತನ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ಕಾಯ್ದೆ ಮತ್ತು ಶಸ್ತ್ರಾಸ್ತ್ರ ಕಾಯ್ದೆ ಅಡಿಯಲ್ಲಿ ಪ್ರಕರಣ ಚಂದೂಸಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಕಾರ್ಕಳ: ಜೋಕಾಲಿ ಆಟವಾಡುತ್ತಿದ್ದಾಗ ಕುತ್ತಿಗೆಗೆ ಸೀರೆ ಸಿಲುಕಿ ಬಾಲಕಿ ಸಾವು
ಬಾರಾಮುಲ್ಲಾ ಪೊಲೀಸರು ಮತ್ತು 52 ರಾಷ್ಟ್ರೀಯ ರೈಫಲ್ಸ್ ಪಡೆಗಳು ಬಾರಾಮುಲ್ಲಾದ ನಾಗಬಾಲ್ ಚಂದೋಸಾ ಗ್ರಾಮದಲ್ಲಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದು,”ಕಾರ್ಯಾಚರಣೆಯ ಸಮಯದಲ್ಲಿ, ಶ್ರುಂಜ್‌ನಿಂದ ನಾಗಬಾಲ್ ಚಂದೂಸಾ ಕಡೆಗೆ ಬರುತ್ತಿದ್ದ ಒಬ್ಬ ಶಂಕಿತ ವ್ಯಕ್ತಿಯು ಜಂಟಿ ನಾಕಾ ಪಾರ್ಟಿಯನ್ನು ಗಮನಿಸಿ ಓಡಿಹೋಗಲು ಪ್ರಯತ್ನಿಸಿದನು ಆದರೆ ಪೊಲೀಸರು ಜಾಣ್ಮೆಯಿಂದ ಆರೋಪಿಯನ್ನು ಬಂಧಿಸಿದ್ದಾರೆ.