ನವದೆಹಲಿ: ಅರಬ್ಬೀ ಸಮುದ್ರದ ಕರಾವಳಿ ಭಾಗದಲ್ಲಿ ಭಾರೀ ಆತಂಕ ಮೂಡಿಸಿರುವ ಬಿಪರ್ಜೋಯ್ ಚಂಡಮಾರುತ ಮುಂದಿನ 24 ಗಂಟೆಗಳಲ್ಲಿ ಇನ್ನಷ್ಟು ತೀವ್ರಗೊಳ್ಳಲಿದ್ದು ಉತ್ತರ ಈಶಾನ್ಯದೆಡೆಗೆ ಚಲಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಶನಿವಾರ ತಿಳಿಸಿದೆ.
ಪ್ರಸ್ತುತ ಚಂಡಮಾರುತ ಗೋವಾದಿಂದ ಪಶ್ಚಿಮಕ್ಕೆ 690 ಕಿ.ಮೀ, ಮುಂಬೈನ ಪಶ್ಚಿಮ-ನೈಋತ್ಯಕ್ಕೆ 640 ಕಿ.ಮೀ ಹಾಗೂ ಪೋರಬಂದರ್‌ನಿಂದ ನೈಋತ್ಯಕ್ಕೆ 640 ಕಿ.ಮೀ ದೂರದಲ್ಲಿ ಇದ್ದು, ಗಂಟೆಗೆ 145 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದೆ. ಚಂಡಮಾರುತ ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರದ ಕರಾವಳಿ ಪ್ರದೇಶಗಳಲ್ಲಿ ಭಾರೀ ಮಳೆ ಹಾಗೂ ಬಲವಾದ ಗಾಳಿಯನ್ನು ಉಂಟುಮಾಡುತ್ತದೆ ಎಂದು ಐಎಂಡಿ ಎಚ್ಚರಿಕೆ ನೀಡಿದೆ.
ಧಾರವಾಡ ಕೃಷಿ ವಿವಿಯಿಂದ ವೃಕ್ಷಮಾತೆ ತುಳಸಿಗೌಡಗೆ ಗೌರವ ಡಾಕ್ಟರೇಟ್, ಜೂ.16ರಂದು ಪ್ರದಾನ
ಶನಿವಾರ ಹಾಗೂ ಭಾನುವಾರ ಬಿಪರ್ಜೋಯ್ ಚಂಡಮಾರುತದ ಅಬ್ಬರ ಜೋರಾಗಲಿದೆ. ಗುಜರಾತ್, ಮಹಾರಾಷ್ಟ್ರದ ಕರಾವಳಿಯಲ್ಲಿ ಉಬ್ಬರದ ಭೀತಿಯಿದೆ. ರಾಜ್ಯ ಕರಾವಳಿ ಜಿಲ್ಲೆಗಳಿಗೆ ಎಲ್ಲೋ ಅಲರ್ಟ್ ಘೋಷಿಸಲಾಗಿದೆ. ಉತ್ತರ ಮಹಾರಾಷ್ಟ್ರ ಹಾಗೂ ಗುಜರಾತ್ ಕರಾವಳಿ ಭಾಗಗಳಲ್ಲಿ ಹೆಚ್ಚಿನ ಪ್ರಭಾವ ಸಾಧ್ಯತೆಯಿದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.