Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

BREAKING NEWS

[/vc_column][/vc_row]

ಬೆಂಗಳೂರು: “ಉಚಿತ ಯಾನ” ಪಿಂಕ್ ಕಲರ್ ಟಿಕೆಟ್ ಅನಾವರಣ

0

ಬೆಂಗಳೂರು: ಇಂದು ಶಕ್ತಿ ಯೋಜನೆ ಜಾರಿ ಹಿನ್ನೆಲೆಯಲ್ಲಿ ಮೆಜೆಸ್ಟಿಕ್ ಕಡೆ ಕೆಎಸ್ ಆರ್ ಟಿಸಿ ಬಸ್ ಗಳು ಬಂದಿದ್ದು, ಮಹಿಳೆಯರಿಗೆ ವಿಶೇಷ ಪಿಂಕ್ ಕಲರ್ ಟಿಕೆಟ್ ರೆಡಿಯಾಗಿದೆ. ವಿದ್ಯುತ್ ಯಂತ್ರ ಕೆಟ್ಟೊದಾಗ ಮಾತ್ರ ‌ಕೊಡುವಂತಹ ಟಿಕೆಟ್ ಇದಾಗಿದೆ. ಕೆಎಸ್ ಆರ್ ಟಿಸಿಯಿಂದ ಈ ಟಿಕೆಟ್ ಅನಾವರಣಗೊಂಡಿದೆ. ಕೆಎಸ್ ಆರ್ ಟಿಸಿಯಲ್ಲಿ ಲಾಂಗ್ ರೂಟ್ ಬಸಗಳಿಗೆ ಮಾತ್ರ ಈ ಟಿಕೆಟ್ ಅನ್ವಯವಾಗಲಿದೆ. ಮೆಜೆಸ್ಟಿಕ್ ನಲ್ಲಿ ಕೆಎಸ್ ಆರ್ ಟಿಸಿ ಬಸ್ ಗಳ‌ ಮುಂದೆ ಸಿಬ್ಬಂದಿ ರಂಗೋಲಿ ಹಾಕುತ್ತಿದ್ದಾರೆ. ವಿವಿಧ ಸಾಂಸ್ಕೃತಿಕ ಕಲಾ ತಂಡಗಳಿಂದ ಮೆರುಗು ತುಂಬಿ ಕೊಂಡಿದೆ. ಚೆಂಡೆ, ನಾನಾ ತರಹದ ವಾದ್ಯ, ನಾದಸ್ವರಗಳಿಂದ ಸ್ಥಳದಲ್ಲಿ ಹಬ್ಬದ ವಾತಾವರಣ ಕಂಡುಬಂದಿದೆ.‌

Leave A Reply

Your email address will not be published.