ಬೆಂಗಳೂರು: ಸಾರಿಗೆ ಇಲಾಖೆಯಿಂದ ಮಹತ್ವದ ಆದೇಶ ಹೊರಡಿಸಲಾಗಿದೆ. ಸಾಂದರ್ಭಿಕ ಒಪ್ಪಂದದ ಮೇಲೆ KSRTC ಬಸ್ ಕರೆದೊಯ್ಯುವವರಿಗೆ ಬಿಗ್ ಶಾಕ್ ನೀಡಿದೆ. ಒಪ್ಪಂದದ ಮೇಲೆ ಕೊಂಡೊಯ್ಯುವ ಬಸ್‌ಗಳ ಕಿ.ಮೀ ದರ ಹೆಚ್ಚಳ ಮಾಡಲಾಗಿದೆ .ಶಕ್ತಿ ಯೋಜನೆಯ ಅನುಷ್ಠಾನದ ಬಳಿಕ ಸಾಮಾನ್ಯ, ವೇಗದೂತ ಹಾಗೂ ನಗರ ಸಾರಿಗೆ ವಾಹನಗಳಿಗೆ ಬೇಡಿಕೆ ಹೆಚ್ಚಾಗಿದೆ. ಇತ್ತೀಚಿನ ದಿನಗಳಲ್ಲಿ ನಿರ್ವಹಣಾ ವೆಚ್ಚ ಹೆಚ್ಚಾಗಿದ್ದರಿಂದಾಗಿ ದರ ಹೆಚ್ಚಳವಾಗಿದೆ. ನೂತನ ಸಾರಿಗೆ ಬಸ್ ಸಾಂದರ್ಭಿಕ ಒಪ್ಪಂದದ ಪರಿಷ್ಕೃತ ದರ ಕರ್ನಾಟಕ ಸಾರಿಗೆಯಲ್ಲಿ 55, 47, 49 ಆಸನಗಳ ಸಂಖ್ಯೆಗಳ ಬಸ್‌ಗಳಿಗೆ 350 ಕನಿಷ್ಠ ಕಿಲೋಮೀಟರ್ ನಿಗದಿಪಡಿಸಲಾಗಿದೆ. ರಾಜ್ಯದೊಳಗೆ ಪ್ರತಿ ಕಿಲೋಮೀಟರ್‌ಗೆ 47 ರೂಪಾಯಿ ಇದ್ದು, ವಾರದ ಎಲ್ಲಾ ದಿನ ನಿಗದಿಪಡಿಸಲಾಗಿದೆ. ಅಂತರರಾಜ್ಯ ಸಾಂದರ್ಭಿಕ ಒಪ್ಪಂದಕ್ಕೆ ರೂ.50 ಅನ್ನು ನಿಗದಿ ಪಡಿಸಲಾಗಿದೆ.ರಾಜಹಂಸ ಎಕ್ಸಿಕ್ಯೂಟಿವ್ 36 ಆಸನಗಳ ಬಸ್ಸಿಗೆ ದಿನಕ್ಕೆ 350 ಕಿಲೋಮೀಟರ್ ನಿಗದಿ ಪಡಿಸಿ, ರಾಜ್ಯದೊಳಗೆ ಪ್ರತಿ ಕಿಲೋಮೀಟರ್‌ಗೆ ರೂ.48, ಅಂತರರಾಜ್ಯಗಳಿಗೆ ರೂ.53 ನಿಗದಿ ಪಡಿಸಿದೆ. ರಾಜಹಂಸ 39 ಆಸನದ ಬಸ್‌ಗಳಿಗೆ ದಿನವೊಂದಕ್ಕೆ 350 ಕನಿಷ್ಠ ಕಿ.ಮೀ ಮಿತಿ ಹೇರಿದೆ. ಪ್ರತಿ ಕಿಲೋಮೀಟರ್‌ಗೆ ರಾಜ್ಯದೊಳಗೆ ರೂ.51, ರಾಜ್ಯದ ಹೊರಗೆ ರೂ.55 ಅನ್ನು ನಿಗದಿ ಪಡಿಸಲಾಗಿದೆ. ರಾಜಹಂಸ 12 ಮೀಟರ್ ಚಾಸಿಸ್ 44 ಆಸನಗಳ ಬಸ್ ಗಳಿಗೆ 350 ಕನಿಷ್ಠ ಕಿ.ಮೀ ಮಿತಿ ಹೇರಲಾಗಿದೆ.ಪ್ರತಿ ಕಿ.ಮೀಗಳಿಗೆ 53 ರೂ ರಾಜ್ಯದೊಳಗೆ, 57 ರೂ ಅಂತರರಾಜ್ಯಗಳಿಗೆ ಕಿಲೋಮೀಟರ್ ಮಿತಿಯನ್ನು ಹೇರಲಾಗಿದೆ.ಮೈಸೂರು ನಗರ ಸಾರಿಗೆ ಸೆಮಿ ಲೋಪ್ಲೋರ್ 42 ಆಸನದ ಬಸ್ಸುಗಳಿಗೆ 300 ಕನಿಷ್ಠ ಕಿಲೋಮೀಟರ್ ದಿನವೊಂದಕ್ಕೆ ನಿಗದಿ ಪಡಿಸಲಾಗಿದೆ. ರಾಜ್ಯದೊಳಗೆ ಪ್ರತಿ ಕಿಲೋಮೀಟರ್ ಗೆ ರೂ.45 ನಿಗದಿ ಪಡಿಸಲಾಗಿದೆ.ರಾಜ್ಯದೊಳಗೆ ಪ್ರತಿ ಕಿಲೋಮೀಟರ್ ಗೆ ರೂ.45 ನಿಗದಿ ಪಡಿಸಲಾಗಿದೆ. ಮಿಡಿ ಬಸ್ಸುಗಳಿಗೆ ಪ್ರತಿ ಕಿಲೋಮೀಟರ್ ಗೆ ರೂ.40 ನಿಗದಿಪಡಿಸಲಾಗಿದೆ.ನಾನ್ ಎಸಿ ಸ್ಲೀಪರ್ 32 ಆಸನದ ಬಸ್‌ಗಳಿಗೆ ಕನಿಷ್ಠ ದಿನಕ್ಕೆ 400 ಕಿಲೋಮೀಟರ್ ಮಿತಿ ನೀಡಿ, ರಾಜ್ಯದೊಳಗೆ ಪ್ರತಿ ಕಿಲೋಮೀಟರ್‌ಗೆ ರೂ.55, ರಾಜ್ಯದೊರೆಗೆ 60 ರೂ ನಿಗದಿ ಪಡಿಸಲಾಗಿದೆ.ಇನ್ನೂ ಮೈಸೂರು ನಗರದಲ್ಲಿ ಗಂಟೆಗಳ ಆಧಾರದಲ್ಲಿ ವಾಹನಗಳನ್ನು ಒದಗಿಸುವ ವ್ಯವಸ್ಥೆಯನ್ನು ರದ್ದುಪಡಿಸಲಾಗಿದೆ.ಈ ಪರಿಷ್ಕೃತ ದರಗಳು ದಿನಾಂಕ 01-08-2023ರಿಂದ ಜಾರಿಗೆ ಬರಲಿದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಸುತ್ತೋಲೆ ಹೊರಡಿಸಿದೆ.
[vc_row][vc_column]
BREAKING NEWS
- ಉದ್ಯೋಗಿಯಿಂದ ಮಹಾನ್ ಎಡವಟ್ಟು – ಮೈಕ್ರೋಸಾಫ್ಟ್ ನ 32ಟಿಬಿ ಮಾಹಿತಿ ಸೋರಿಕೆ
- ವಂಚನೆ ಪ್ರಕರಣ – ಚೈತ್ರಾ ಸೇರಿ 7 ಮಂದಿಗೆ ಅ. 6ರ ವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ
- ನಿಂಜಾ ಪ್ರಶಸ್ತಿ ಪಡೆದ 71 ವರ್ಷದ ಮಹಿಳೆಯ ಗಿನ್ನಿಸ್ ದಾಖಲೆ!
- ಹೊಸ ಐಫೋನ್ ಖರೀದಿಗೆ ಮುಗಿಬಿದ್ದ ಜನ – ಈ ಫೋನ್ ನಲ್ಲಿ ಅಂಥಾದ್ದೇನಿದೆ?
- ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಕುರಿತ ಸ್ಪೋಟಕ ಮಾಹಿತಿ ಬಹಿರಂಗ?
- ಸನಾತನ ಧರ್ಮದ ಬಗ್ಗೆ ಮಾತನಾಡಿದ್ದಕ್ಕೆ ಚಿಕ್ಕಮಗುವನ್ನು ಬೇಟೆಯಾಡುತ್ತಿದ್ದಾರೆ -ಕಮಲ್ ಹಾಸನ್
- ಮುಂಬೈ ಜಿಎಸ್ ಬಿ ಗಣೇಶೋತ್ಸವದಲ್ಲಿ ಪಾಲ್ಗೊಂಡ ಕರಾವಳಿ ಬೆಡಗಿ ನಟಿ ಪೂಜಾ ಹೆಗ್ಡೆ
- ಎತ್ತಿನಹೊಳೆ ಯೋಜನೆ Out dated subject – ಮಾಜಿ ಸಿಎಂ ವೀರಪ್ಪ ಮೊಯಿಲಿ..!
- ಬೆಂಗಳೂರಿನಲ್ಲಿ ಮೊದಲ ಬಾರಿಗೆ ಕಂಬಳ – ಅಶೋಕ್ ರೈ ನೇತೃತ್ವದಲ್ಲಿ ಸ್ಥಳ ಪರಿಶೀಲನೆ
- ಮುದ್ರಾಂಕ ಇಲಾಖೆಯ ವೆಬ್ಸೈಟ್ಗೆ ಕನ್ನ – ಎಇಪಿಎಸ್ ಮೂಲಕ ಒಂದು ಲಕ್ಷ ರೂ. ವಂಚನೆ?