Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

BREAKING NEWS

[/vc_column][/vc_row]

ಬೆಂಗಳೂರು: ಕೆಆರ್ ಸರ್ಕಲ್​​​ ​​ಅಂಡರ್​ ಪಾಸ್‌​ ಜಲಾವೃತ- ಕಾರು ಮುಳುಗಿ ಓರ್ವ ಯುವತಿ ಸಾವು

0

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು ವರುಣನ ಜೋರಾಗಿದ್ದು, ಸಂಪೂರ್ಣ ಜಲಾವೃತವಾಗಿರುವ ಕೆ.ಆರ್​​ ಸರ್ಕಲ್​​ ಅಂಡರ್​​ ಪಾಸ್‌ನಲ್ಲಿ ಕಾರು ಸಿಲುಕಿ ಓರ್ವ ಯುವತಿ ಸಾವನ್ನಪ್ಪಿದ್ದಾಳೆ. ಮೃತ ಯುವತಿಯನ್ನು ಭಾನು ಎಂದು ಗುರುತಿಸಲಾಗಿದೆ. ಹೈದರಾಬಾದ್​​ನಿಂದ ಫ್ಯಾಮಿಲಿಯೊಂದು ರಜೆ ಮೇಲೆ ಬೆಂಗಳೂರಿಗೆ ಬಂದಿತ್ತು. ಬೆಂಗಳೂರಿನಲ್ಲಿ ತಿರುಗಾಡಲು ಮಹೀಂದ್ರಾ XUV 500 ಕಾರ್​ ಬುಕ್​ ಮಾಡಿದ್ದರು. ಈ ಕಾರಿನಲ್ಲಿ ಬರುವಾಗ ಈ ದುರ್ಘಟನೆ ನಡೆದಿದೆ. ವಿಧಾನಸೌಧದಿಂದ ಕಾರ್ಪೋರೇಷನ್​​ ಕಡೆಗೆ ಬರುವಾಗ ಕಾರು ಜಲಾವೃತಗೊಂಡ ಕೆ.ಆರ್​ ಸರ್ಕಲ್​​​ ಅಂಡರ್​​ ಪಾಸ್​​ನಲ್ಲಿ ಮುಳುಗಡೆಯಾಗಿದೆ. ಹೀಗಾಗಿ ಕಾರಿನಲ್ಲಿದ್ದ ನಾಲ್ವರ ಕುಟುಂಬವೊಂದು ಮಳೆ ನೀರಿಗೆ ಸಿಲುಕಿ ಸಾವಿನ ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದರು. ಈ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ರಕ್ಷಣಾ ಕಾರ್ಯ ಆರಂಭಿಸಿದರು. ನಾಲ್ವರ ಪೈಕಿ ಅಸ್ವಸ್ಥಗೊಂಡಿದ್ದ ಯುವತಿಯನ್ನು ರಕ್ಷಣೆ ಮಾಡಿ ನೃಪತುಂಗಾ ರಸ್ತೆಯಲ್ಲಿರೋ ಸೆಂಟ್​ ಮಾರ್ಥಾಸ್​ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಯುವತಿ ಸಾವನ್ನಪ್ಪಿದ್ದಾಳೆ.

Leave A Reply

Your email address will not be published.