ಬೆಂಗಳೂರು: ಎರಡು ದಿನಗಳ ಹಿಂದೆಯಷ್ಟೇ ಸಂಬಂಧಿಗಳ ಜೊತೆಯಲ್ಲಿಯೇ ಸ್ಪಂದನಾ ಬ್ಯಾಂಕಾಕ್ಗೆ ಹೋಗಿದ್ದರು. ವಿಜಯ್ ರಾಘವೇಂದ್ರ ಅವರ ಶೂಟಿಂಗ್ ಸಹ ಅಲ್ಲೇ ನಡೆಯುತ್ತಿತ್ತು. ಶೂಟಿಂಗ್ ಮುಗಿಸಿದ ನಂತರ ವಿಜಯ್ ರಾಘವೇಂದ್ರ ಸಹ ಸ್ಪಂದನಾ ಬಳಿ ಹೋಗಿದ್ದರು. ಆದರೆ ಮಲಗಿದ್ದ ಸ್ಪಂದನಾ ಎದ್ದಿಲ್ಲ. ಹೃದಯಾಘಾತದಿಂದ ಸ್ಪಂದನಾ ನಿಧನ ಆಗಿರೋದು ನಿಜ ಎಂದು ಸ್ಪಂದನಾ ದೊಡ್ಡಪ್ಪ, ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ. ನಾನೇ ಬ್ಯಾಂಕಾಕ್ಗೆ ಹೋಗುವ ಪ್ರಯತ್ನ ಮಾಡುತ್ತೇನೆ. ನಾಳೆ ಬೆಳಗ್ಗೆ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ತರಲು ಪ್ರಯತ್ನ ಮಾಡುತ್ತೇವೆ. ಮರಣೋತ್ತರ ಶವ ಪರೀಕ್ಷೆಯ ನಂತರವೇ ಸಾವಿಗೆ ಕಾರಣ ತಿಳಿಯಲಿದೆ. ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳು ಬೇಡ. ಮಗಳು ಸ್ವಲ್ಪ ವೀಕ್, ಆದ್ರೆ ಅನಾರೋಗ್ಯವೇನು ಇರಲಿಲ್ಲ. ಅಲ್ಲಿಯವರೆಗೆ ಯಾವುದೇ ಊಹಾಪೋಹ ಸುದ್ದಿಗಳನ್ನು ಬಿತ್ತರಿಸಬೇಡಿ. ವರದಿ ಬಂದ ನಂತರ ನೀವು ಸುದ್ದಿ ಪ್ರಕಟಿಸಿ ಎಂದು ಬಿಕೆ ಹರಿಪ್ರಸಾದ್ ಮನವಿ ಮಾಡಿಕೊಂಡರು. ಪುತ್ರ ಶೌರ್ಯ ಬೆಂಗಳೂರಿನಲ್ಲಿಯೇ ಇದ್ದಾನೆ. ಅಂತಿಮ ವಿಧಿವಿಧಾನಗಳ ಬಗ್ಗೆ ಕುಟುಂಬದ ಜೊತೆ ಚರ್ಚಿಸಿ ತಿಳಿಸಲಾಗುವುದು ಎಂದು ಹೇಳಿದರು.
[vc_row][vc_column]
BREAKING NEWS
- ಚಿಕ್ಕ ರೇವಣಸಿದ್ಧ ಶಿವಶರಣರು ಲಿಂಗೈಕ್ಯ.!
- ಸೆ. 29 ಮತ್ತು 30ರಂದು ಮುಂಬೈ ಲೋಕಮಾನ್ಯ ತಿಲಕ್-ಮಂಗಳೂರು ಜಂಕ್ಷನ್ ರೈಲಿಗೆ ಹೆಚ್ಚುವರಿ ಕೋಚ್ – ರೈಲ್ವೆ ಇಲಾಖೆಯಿಂದ ಅಧಿಕೃತ ಪ್ರಕಟಣೆ
- ಪ್ರಧಾನಿ ಮೋದಿ ಅವರ ಆಸ್ತಿ, ಸಾಲ ಎಷ್ಟಿದೆ ಗೊತ್ತೇ ? – ಕಳೆದ ಬಾರಿಗಿಂತ 15.69 ಶೇಕಡಾ ಆಸ್ತಿ ಏರಿಕೆ..!!
- ‘ಸಂವಿಧಾನಬದ್ದ ಹಕ್ಕುಗಳನ್ನು ರಕ್ಷಿಸುವ ಪಣ ತೊಡಿ’-ನೂತನ ಡಿವೈಎಸ್ ಪಿಗಳಿಗೆ ಸಿಎಂ ಕರೆ
- ಕರಿಬೆಕ್ಕು ಅಂತ ಕರಿ ಚಿರತೆ ಸಾಕಿದ ರಷ್ಯಾದ ಯುವತಿ
- ಪಿಎಫ್ ಐ ಕಾರ್ಯಕರ್ತರಿಂದ ಯೋಧನ ಕಿಡ್ನಾಫ್ ಮಾಡಿ ಹಲ್ಲೆ ಪ್ರಕರಣಕ್ಕೆ ಟ್ವೀಟ್ಸ್ : ತನಿಖೆಯಲ್ಲಿ ಸತ್ಯ ಬಯಲು
- ‘ಧಾರ್ಮಿಕ ಗ್ರಂಥಗಳಿಗೆ ಹಕ್ಕುಸ್ವಾಮ್ಯ ಇಲ್ಲ’- ಹೈಕೋರ್ಟ್
- ‘ಈಗ ಕರ್ನಾಟಕದಲ್ಲಿ ಪೊಲೀಸ್ ಸರ್ಕಾರ ಇದೆ’ – ಬೊಮ್ಮಾಯಿ ವಾಗ್ದಾಳಿ
- ಸಂಪೂರ್ಣ ಬದಲಾದ ಜಿಂಕೆ ಮರಿ ರೇಖಾ – ನಟಿ ಈಗಿನ ಸ್ಥಿತಿ ನೋಡಿ ಶಾಕ್ ಆದ ಅಭಿಮಾನಿಗಳು
- ಹೆಣ್ಣು ಮಗುವಿನ ತಾಯಿಯಾದ ನಟಿ ಸ್ವರಾ ಭಾಸ್ಕರ್