Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

BREAKING NEWS

[/vc_column][/vc_row]

ಬೆಂಗಳೂರು: ಬೋಟ್ ಮೂಲಕ ಭಾರತಕ್ಕೆ ಬಂದಿದ್ದ ಶ್ರೀಲಂಕಾದ ಸುಪಾರಿ ಕಿಲ್ಲರ್ಸ್ ಬೆಂಗಳೂರಿನಲ್ಲಿ ಅರೆಸ್ಟ್

0

ಬೆಂಗಳೂರು: ನಗರದ ಸಿಸಿಬಿ ಪೊಲೀಸರು ಶಂಕಿತ ಉಗ್ರರ ಬಂಧನದ ಪ್ರಕರಣದ ನಂತರ ಮತ್ತೊಂದು ಅಂತರರಾಷ್ಟ್ರೀಯ ಮಟ್ಟದ ಪ್ರಕರಣವನ್ನು ಪತ್ತೆ ಮಾಡಿದ್ದಾರೆ. ಶ್ರೀಲಂಕಾದ ಸೀರಿಯಲ್ ಕಿಲ್ಲರ್ಸ್ ಗಳನ್ನು ಸಿಸಿಬಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಈ ಮೂಲಕ ನಗರದಲ್ಲಿ ನಡೆಯಬಹುದಾಗಿದ್ದ ದೊಡ್ದದೊಂದು ಅನಾಹುತ ತಪ್ಪಿದಂತಾಗಿದೆ ಎನ್ನಬಹುದು. ಇನ್ನು ಶ್ರೀಲಂಕಾದ ಮೂವರು ಸುಪಾರಿ ಕಿಲ್ಲರ್ಸ್ ಬೆಂಗಳೂರಿಗೆ ಬಂದಿದ್ಯಾಕೆ? ಇವರನ್ನ ಇಲ್ಲಿಗೆ ಕರೆಸೋ ಉದ್ದೇಶ ಏನಾಗಿತ್ತು? ಅನ್ನೋದು ತನಿಖೆಯಿಂದಷ್ಟೇ ಗೊತ್ತಾಗಬೇಕಿದೆ. ಆದ್ರೆ ಸಿಟಿಯಲ್ಲಿ ಈ ಕಿಲ್ಲರ್ಸ್ ಗೆ ರೌಡಿ ಶೀಟರ್ ಜೈ ಪರಮೇಶ್ ಆಶ್ರಯ ನೀಡಿದ್ದ. ವೀಸಾ ಪಾಸ್‌ಪೋರ್ಟ್ ಇಲ್ಲದೆ ಬೋಟ್ ಮೂಲಕ ಭಾರತದ ಗಡಿ ಪ್ರವೇಶಿಸಿರೋ ಶ್ರೀಲಂಕಾ ಆರೋಪಿಗಳು ಸೇಲಂನಿಂದ ಬೆಂಗಳೂರು ತಲುಪಿದ್ದಾರೆ. ರೌಡಿಶೀಟರ್ ಮನೆ ಮೇಲೆ ಸಿಸಿಬಿ ಅಧಿಕಾರಿಗಳಿ ದಾಳಿ ನಡೆಸಿ ಸದ್ಯ ನಾಲ್ವರನ್ನ ಬಂಧಿಸಿದ್ದಾರೆ. ರೌಡಿಶೀಟರ್ ಜೈ ಪರಮೇಶ್ ಹಾಗೂ ಶ್ರೀಲಂಕಾ ಪ್ರಜೆಗಳಾದ ಕಸನ್ ಕುಮಾರ ಸನಕ, ಅಮಿಲಾ ನೂವಾನ್ ಮತ್ತು ರಂಗಪ್ರಸಾದ್ ಬಂಧಿತ ಆರೋಪಿಗಳಾಗಿದ್ದಾರೆ. ಕಳೆದ 20 ದಿನಗಳ ಹಿಂದೆ ಭಾರತಕ್ಕೆ ನುಸುಳಿದ್ದ ಶ್ರೀಲಂಕಾ ಪ್ರಜೆಗಳು ಯಲಹಂಕ ಠಾಣಾ ವ್ಯಾಪ್ತಿಯ ಬಾಗಲೂರು ಕ್ರಾಸ್ ಬಳಿಯ ಅಪಾರ್ಟ್ಮೆಂಟ್ ನಲ್ಲಿ ವಾಸ್ತವ್ಯ ಪಡೆದಿದ್ದರು. ಶ್ರೀಲಂಕಾದಲ್ಲಿ ಮೂವರ ಮೇಲೆ ಸರಣಿ ಕೊಲೆ ಪ್ರಕರಣ ಇದ್ದು, ಸಿಸಿಬಿಯ ಪ್ರಾಥಮಿಕ ವಿಚಾರಣೆ ವೇಳೆ ತಮ್ಮ ಅಪರಾಧ ಹಿನ್ನಲೆಯನ್ನ ಆರೋಪಿಗಳು ಬಿಚ್ಚಿಟ್ಟಿದ್ದಾರೆ. ಕಸನ್ ಕುಮಾರ ಸನಕ ಮೇಲೆ ನಾಲ್ಕು ಕೊಲೆ ಕೇಸ್, ಅಮಿಲಾ ನೂವಾನ್ ಮೇಲೆ ಐದು ಕೊಲೆ ಕೇಸ್ ಹಾಗೂ ರಂಗಪ್ರಸಾದ್ ಮೇಲೆ ಎರಡು ಕೊಲೆ ಮತ್ತೆ ಎರಡು ಹಲ್ಲೆ ಪ್ರಕರಣ ದಾಖಲಾಗಿವೆ. ಸಿಸಿಬಿ ದಾಳಿ ವೇಳೆ 13 ಮೊಬೈಲ್ ಫೋನ್, ಶ್ರೀಲಂಕಾ ವಿಳಾಸದ ವೀಸಿಟಿಂಗ್ ಕಾರ್ಡ್, ಬಸ್ ಟಿಕೆಟ್, ಪೇಪರ್ ಕಟ್ಟಿಂಗ್ಸ್, ಹಲವು ಮಂದಿಯ ಆಧಾರ್ ವೋಟರ್ ಐಡಿಯ ಜೆರಾಕ್ಸ್ ಪ್ರತಿಗಳು ಪತ್ತೆಯಾಗಿದ್ದು, ಆರೋಪಿಗಳು ನಗರದಲ್ಲಿ ಕಾನೂನು ಬಾಹಿರ ಕೃತ್ಯ ಎಸಗಲು ಸಂಚು ರೂಪಿಸಿದ್ರಾ? ಅನ್ನೋ ಆತಂಕ ಮೂಡಿದೆ. ಸದ್ಯ ರೌಡಿಶೀಟರ್ ಜೈ ಪರಮೇಶ್ ಹಾಗೂ ಮೂವರು ಶ್ರೀಲಂಕಾ ಪ್ರಜೆಗಳು ಸಿಸಿಬಿ ಪೊಲೀಸರ ವಿಚಾರಣೆ ನಡೆಸುತ್ತಿದ್ದಾರೆ. ಲಂಕಾ ಆರೋಪಿಗಳಿಗೆ ಸಿನ್ಹಲ ಭಾಷೆ ಮಾತಾನಾಡ್ತಿದ್ದು, ಹಿಂದಿ ಇಂಗ್ಲೀಷ್ ಬಾರದಿರೋದು ವಿಚಾರಣೆಗೆ ತೊಡಕಾಗಿದೆ. ಇನ್ನು ರೌಡಿ ಶೀಟರ್ ಜೈ ಪರಮೇಶ್ ಗೂ ಸಿನ್ಹಲ ಭಾಷೆ ಬರೋಲ್ಲ. ಆದ್ರೆ ಮೂರನೇ ವ್ಯಕ್ತಿ ಅಣತಿ ಮೇರೆಗೆ ಮೂವರನ್ನ ಸೇಲಂನಿಂದ ಕರೆತಂದಿದ್ದ ಜೈಪರಮೇಶ ಇಲ್ಲಿ ಆಶ್ರಯ ನೀಡಿದ್ದ ಎಂದು ತಿಳಿದು ಬಂದಿದೆ. ಆ ಮೂರನೇ ವ್ಯಕ್ತಿ ಫೋನ್ ಸ್ವಿಟ್ಚ್ ಆಫ್ ಮಾಡಿ ಎಸ್ಕೇಪ್ ಆಗಿದ್ದು ಸಿಸಿಬಿ ಪೊಲೀಸ್ರು ಆತನ ಪತ್ತೆಗೆ ಬಲೆ ಬೀಸಿದ್ದಾರೆ. ಸದ್ಯ ಲಂಕಾ ಆರೋಪಿಗಳ ವಿಚಾರಣೆಗೆ ಸಿನ್ಹಲ‌ ಭಾಷೆ ತರ್ಜುಮೆಗಾರರಿಗೆ ಸಿಸಿಬಿ ಹುಡುಕಾಟ ನಡೆಸಿದ್ದಾರೆ. ‌ಇನ್ನೂ ಘಟನೆ ಸಂಬಂಧ ಯಲಹಂಕ ಠಾಣೆಯಲ್ಲಿ ದೂರು ದಾಖಲಾಗಿದ್ದು ತನಿಖೆ ನಂತರ ಯಾವೆಲ್ಲ ಸಂಗತಿ ಹೊರಬರುತ್ತೆ ಅನ್ನೋದನ್ನ ಕಾದು ನೋಡಬೇಕು.

Leave A Reply

Your email address will not be published.