ಬೆಂಗಳೂರು : ನಿನ್ನೆಯ ಮಹಾಮಳೆಗೆ ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ದುರಂತ ಸಂಭವಿಸಿದೆ. ರಾಜಕಾಲುವೆಯಲ್ಲಿ ಕೊಚ್ಚಿಹೋಗಿ ಯುವಕನೊಬ್ಬ ಸಾವನ್ನಪ್ಪಿರೋ ಘಟನೆ ಕೆಪಿ ಅಗ್ರಹಾರದಲ್ಲಿ ನಡೆದಿದೆ.
27 ವರ್ಷದ ಲೋಕೇಶ್ ಸಾವನ್ನಪ್ಪಿದ ಯುವಕನಾಗಿದ್ದು, ಜೋರು ಮಳೆ ವೇಳೆ ಕೆಪಿ ಅಗ್ರಹಾರದ ರಾಜಕಾಲುವೆಯಲ್ಲಿ ಲೋಕೇಶ್ ಕೊಚ್ಚಿಹೋಗಿದ್ದ. ಇಂದು ಲೋಕೇಶ್‌ನ ಮೃತದೇಹ ಬ್ಯಾಟರಾಯನಪುರದ ರಾಜಕಾಲುವೆ ಬಳಿ ಪತ್ತೆಯಾಗಿದ್ದು, ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಮೃತದೇಹ ರವಾನೆಯಾಗಿದೆ. ಅವೈಜ್ಞಾನಿಕ ರಾಜಕಾಲುವೆ ಕಾಮಗಾರಿಯಿಂದ ಕೊಚ್ಚಿಹೋಗಿರೋ ಆರೋಪ ಕೇಳಿ ಬಂದಿದ್ದು, ಕೆಪಿ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.