Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

BREAKING NEWS

[/vc_column][/vc_row]

ಬೆಳ್ತಂಗಡಿಯಲ್ಲಿ ಹರೀಶ್ ಪೂಂಜ ​ಗೆಲುವು, ಕಾಂಗ್ರೆಸ್​​ ಸೋಲು

0

ಮಂಗಳೂರು: ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ನಡೆದಿದ್ದ ಚುನಾವಣೆಯ (Karnataka Assembly Elections) ಫಲಿತಾಂಶ ಪ್ರಕಟಗೊಂಡಿದ್ದು, ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ( Belthangady Assembly Constituency) ಕಾಂಗ್ರೆಸ್​​ ಮತ್ತು ಬಿಜೆಪಿಗೆ ಈ ಬಾರಿ ಪೈಪೋಟಿ ನಡೆದಿದ್ದು ಇದೀಗ ಬಿಜೆಪಿಯಿಂದ ಹರೀಶ್ ಪೂಂಜ ಭರ್ಜರಿ ಗೆಲುವು ಸಾಧಿಸಿದ್ದಾರೆ.

ಹರೀಶ್ ಪೂಂಜ ಅವರಿಗೆ ಭಾರಿ ಪೈಪೋಟಿ ನೀಡಿದ್ದು ರಕ್ಷಿತ್​ ಶಿವರಾಂ ಅವರು ಸೋತಿದ್ದಾರೆ. ಹರೀಶ್ ಪೂಂಜ ಅವರು ಭಾರಿ ಮತಗಳಿಂದ ಗೆಲುವು ಸಾಧಿಸಿದ್ದಾರೆ. ದಕ್ಷಿಣ ಕನ್ನಡ ಚುನಾವಣೆ ವಿಧಾನ ಸಭಾ ಕ್ಷೇತ್ರವಾದ ಬೆಳ್ತಂಗಡಿಯಲ್ಲಿ ಗೆಲುವು ಸಾಧಿಸಿದ್ದಾರೆ.

ಮಂಗಳೂರು: ಬಿಜೆಪಿ ಅಭ್ಯರ್ಥಿ ವೇದವ್ಯಾಸ್ ಕಾಮತ್ ಗೆಲುವು, ಕಾಂಗ್ರೆಸ್​​ ಸೋಲು

ಇನ್ನೂ ಹರೀಶ್​​ ಪೂಂಜಾ​​ ಅವರಿಗೆ ಪ್ರಬಲ ಪೈಪೋಟಿ ನೀಡಿದ್ದು ರಕ್ಷಿತ್​ ಶಿವರಾಂ​​ ಸೋತಿದ್ದಾರೆ. ರಕ್ಷಿತ್​ ಶಿವರಾಮ್​​ ಅವರು ಬೆಳ್ತಂಗಡಿಯ ಕಾಂಗ್ರೆಸ್​​ ಅಭ್ಯರ್ಥಿಯಾಗಿದ್ದು. ಈ ಬಾರಿ ಪ್ರಬಲ ಅಭ್ಯರ್ಥಿಯಾಗಿದ್ದರು. ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಸಹೋದರ ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ.ಶಿವರಾಂ ಪುತ್ರ ರಕ್ಷಿತ್ ಶಿವರಾಂ ಕಡಿಮೆ ಅಂತರದಲ್ಲಿ ಸೋತಿದ್ದಾರೆ.

ಈ ಮಧ್ಯೆ ಎಸ್.ಡಿ.ಪಿ.ಐ. ಯಿಂದ ಅಕ್ಬರ್ ಸೋತಿದ್ದಾರೆ. ತುಳುನಾಡ ಪಕ್ಷದ ಅಭ್ಯರ್ಥಿಯಾಗಿ ಶೈಲೇಶ್ ಆರ್.ಜೆ, ರ್ವೋದಯ ಕರ್ನಾಟಕ ಪಕ್ಷವೂ ಆದಿತ್ಯ ನಾರಾಯಣ ಕಲ್ಲಾಜೆ ಕೂಡ ಸೋತಿದ್ದಾರೆ. ಇನ್ನೂ ಜೆಡಿಎಸ್​​ನಿಂದ ಅಶ್ರಫ್ ಅಲಿ ಕುಯ್ ಸೋತಿದ್ದಾರೆ.

 

Leave A Reply

Your email address will not be published.