ಬೆಳ್ತಂಗಡಿ: ಉಜಿರೆ ಟೆಲಿಪೋನ್ ಎಕ್ಸ್ ಚೇಂಜ್ ಟರ್ ಬಳಿ ವ್ಯಕ್ತಿಯೊಬ್ಬರ ಮೃತದೇಹದ ಪಕ್ಕದಲ್ಲಿದ್ದ ಚೀಲದಲ್ಲಿ 6.65 ಲಕ್ಷ ನಗದು ಪತ್ತೆಯಾಗಿದೆ.
ತಮ್ಮಯ್ಯ (55) ಮಡಿಕೇರಿಯ ಕುಶಾಲನಗರ ಮೂಲದ ವ್ಯಕ್ತಿಯಾಗಿದ್ದು, ಇವರು ಹಲವು ವರ್ಷಗಳಿಂದ ಉಜಿರೆಯಲ್ಲಿ ವಾಸಿಸುತ್ತಿದ್ದರು. ಅವರು ಬಸ್ ನಿಲ್ಡಾಣ, ಅಂಗಡಿಗಳು ಮುಚ್ಚಿದಾಗ ಅವುಗಳ ಮುಂಭಾಗದಲ್ಲಿ, ಬಿಎಸ್ಎನ್ಎಲ್ ಕಚೇರಿ ಪಕ್ಕದಲ್ಲಿ ವಸತಿ ಹೂಡಿ ದಿನ ಕಳೆಯುತ್ತಿದ್ದರು.
ಈ ಘಟನೆ ಬಗ್ಗೆ ಕುಟುಂಬದಲ್ಲಿ ಯಾರಿಗೂ ತಿಳಿದಿಲ್ಲ. ಇವರ ಮೃತದೇಹ ಟೆಲಿಪೋನ್ ಎಕ್ಸ್ ಚೇಂಜ್ ಟರ್ ಬಳಿ ಪತ್ತೆಯಾಗಿದ್ದು, ಈ ಬಗ್ಗೆ ಉಜಿರೆ ಬೆಳಾಲು ಘಟಕದ ಶೌರ್ಯ ವಿಪತ್ತು ತಂಡ ತಕ್ಷಣ ಬೆಳ್ತಂಗಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
GT vs SRH, IPL 2023: ಐಪಿಎಲ್ನಲ್ಲಿಂದು ಗುಜರಾತ್-ಹೈದರಾಬಾದ್ ಮುಖಾಮುಖಿ
ಪೊಲೀಸರು ಕುಟುಂಬದವರ ಪತ್ತೆಗಾಗಿ ಹುಡುಕಾಡುತ್ತಿದ್ದಾರೆ. ಅಲ್ಲದೇ ವ್ಯಕ್ತಿಯ ಮೃತದೇಹದ ಬಳಿ ಇದ್ದ ಚೀಲವನ್ನು ಪರಿಶೀಲಿಸಿದಾಗ ಅದರಲ್ಲಿ ಸುಮಾರು 6.65 ಲಕ್ಷ ರೂ. ಹಣ ಕಂಡುಬಂದಿದ್ದು, ಹಣವನ್ನು ಪೊಲೀಸ್ ಇಲಾಖೆಗೆ ಹಸ್ತಾಂತರಿಸಲಾಗಿದ್ದು, ಅವರು ಮುಂದಿನ ಪ್ರಕ್ರಿಯೆ ನಡೆಸಲಿದ್ದಾರೆ. ವ್ಯಕ್ತಿಯು ಕೂಲಿ ಕೆಲಸ ಮಾಡಿ ಸಂಗ್ರಹಿಸಲಾಗಿದ್ದ ಮೊತ್ತವಾಗಿರಬಹುದು ಎಂದು ಅಂದಾಜಿಸಲಾಗಿದೆ. ಮೃತ ವ್ಯಕ್ತಿಯ ಕುಟುಂಬಸ್ಥರನ್ನು ಸಂಪರ್ಕಿಸುವಂತೆ ಬೆಳ್ತಂಗಡಿ ಆರಕ್ಷಕ ಠಾಣೆಗೆ ಪೊಲೀಸರು ತಿಳಿಸಿದ್ದಾರೆ.