ಬೆಳ್ತಂಗಡಿ: ಖ್ಯಾತ ಚಲನಚಿತ್ರ ನಟ ವಿಜಯರಾಘವೇಂದ್ರ ಅವರ ಪತ್ನಿ ಸ್ಪಂದನಾ ನಿಧನರಾದ ಸುದ್ದಿ ತಿಳಿದು ಖೇದವಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಸಂತಾಪ ವ್ಯಕ್ತಪಡಿಸಿದ್ದಾರೆ. ಸ್ಪಂದನಾ ನಮ್ಮ ಕ್ಷೇತ್ರದ ಭಕ್ತರೂ, ಆತ್ಮೀಯರೂ ಆಗಿದ್ದರು. ಹಲವು ಬಾರಿ ಸಕುಟುಂಬಿಕರಾಗಿ ಧರ್ಮಸ್ಥಳಕ್ಕೆ ಬಂದು ದೇವರ ದರ್ಶನ ಪಡೆದಿದ್ದಾರೆ. ಅವರ ಸರಳ ವ್ಯಕ್ತಿತ್ವ, ಕಲಾಭಿಮಾನ ಹಾಗೂ ಕಲಾ ಪ್ರೌಢಿಮೆ ಸ್ತುತ್ಯಾರ್ಹವಾಗಿದೆ. ಆದರೆ ಅವರ ದಿಢೀರ್ ಸಾವು ನಮಗೆ ಆಘಾತವನ್ನುಂಟುಮಾಡಿದೆ. ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತೇನೆ. ಅವರ ಅಕಾಲಿಕ ನಿಧನದಿಂದ ಎಲ್ಲರಿಗೂ ಬಹಳ ನೋವಾಗಿದೆ. ಕುಟುಂಬವರ್ಗದವರಿಗೂ, ಅಭಿಮಾನಿಗಳಿಗೂ ಉಂಟಾದ ದುಃಖವನ್ನು ಸಹಿಸುವ ಶಕ್ತಿ-ತಾಳ್ಮೆಯನ್ನಿತ್ತು ಶ್ರೀ ಮಂಜುನಾಥ ಸ್ವಾಮಿ ಹರಸಲೆಂದು ಪ್ರಾರ್ಥಿಸುತ್ತೇನೆ ಎಂದು ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಹೇಳಿದ್ದಾರೆ.
[vc_row][vc_column]
BREAKING NEWS
- ಚಿಕ್ಕ ರೇವಣಸಿದ್ಧ ಶಿವಶರಣರು ಲಿಂಗೈಕ್ಯ.!
- ಸೆ. 29 ಮತ್ತು 30ರಂದು ಮುಂಬೈ ಲೋಕಮಾನ್ಯ ತಿಲಕ್-ಮಂಗಳೂರು ಜಂಕ್ಷನ್ ರೈಲಿಗೆ ಹೆಚ್ಚುವರಿ ಕೋಚ್ – ರೈಲ್ವೆ ಇಲಾಖೆಯಿಂದ ಅಧಿಕೃತ ಪ್ರಕಟಣೆ
- ಪ್ರಧಾನಿ ಮೋದಿ ಅವರ ಆಸ್ತಿ, ಸಾಲ ಎಷ್ಟಿದೆ ಗೊತ್ತೇ ? – ಕಳೆದ ಬಾರಿಗಿಂತ 15.69 ಶೇಕಡಾ ಆಸ್ತಿ ಏರಿಕೆ..!!
- ‘ಸಂವಿಧಾನಬದ್ದ ಹಕ್ಕುಗಳನ್ನು ರಕ್ಷಿಸುವ ಪಣ ತೊಡಿ’-ನೂತನ ಡಿವೈಎಸ್ ಪಿಗಳಿಗೆ ಸಿಎಂ ಕರೆ
- ಕರಿಬೆಕ್ಕು ಅಂತ ಕರಿ ಚಿರತೆ ಸಾಕಿದ ರಷ್ಯಾದ ಯುವತಿ
- ಪಿಎಫ್ ಐ ಕಾರ್ಯಕರ್ತರಿಂದ ಯೋಧನ ಕಿಡ್ನಾಫ್ ಮಾಡಿ ಹಲ್ಲೆ ಪ್ರಕರಣಕ್ಕೆ ಟ್ವೀಟ್ಸ್ : ತನಿಖೆಯಲ್ಲಿ ಸತ್ಯ ಬಯಲು
- ‘ಧಾರ್ಮಿಕ ಗ್ರಂಥಗಳಿಗೆ ಹಕ್ಕುಸ್ವಾಮ್ಯ ಇಲ್ಲ’- ಹೈಕೋರ್ಟ್
- ‘ಈಗ ಕರ್ನಾಟಕದಲ್ಲಿ ಪೊಲೀಸ್ ಸರ್ಕಾರ ಇದೆ’ – ಬೊಮ್ಮಾಯಿ ವಾಗ್ದಾಳಿ
- ಸಂಪೂರ್ಣ ಬದಲಾದ ಜಿಂಕೆ ಮರಿ ರೇಖಾ – ನಟಿ ಈಗಿನ ಸ್ಥಿತಿ ನೋಡಿ ಶಾಕ್ ಆದ ಅಭಿಮಾನಿಗಳು
- ಹೆಣ್ಣು ಮಗುವಿನ ತಾಯಿಯಾದ ನಟಿ ಸ್ವರಾ ಭಾಸ್ಕರ್