Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

BREAKING NEWS

[/vc_column][/vc_row]

ಬ್ಯಾಂಕ್‍ಗೆ ನಷ್ಟ ಮಾಡಿದ್ದ ಆರೋಪ; ನಾಲ್ವರು ನೌಕರರಿಗೆ ಜೈಲು ಶಿಕ್ಷೆ..!

0

ಬೆಂಗಳೂರು: ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾಗೆ 18.34 ಕೋಟಿ ರೂ.ನಷ್ಟ ಮಾಡಿದ್ದ ನಾಲ್ವರು ಆರೋಪಿಗಳಿಗೆ ಸಿಬಿಐ ವಿಶೇಷ ಕೋರ್ಟ್, ಜೈಲುಶಿಕ್ಷೆ ಮತ್ತು 23.02ಕೋಟಿ ರೂ.ದಂಡ ವಿಧಿಸಿದೆ.

ಖಾಸಗಿ ಕಂಪೆನಿ ನಿರ್ದೇಶಕ ಜಿ.ಧನಂಜಯರೆಡ್ಡಿಗೆ 4 ವರ್ಷ ಶಿಕ್ಷೆ ಮತ್ತು 10 ಕೋಟಿ ರೂ.ದಂಡ, ಕೆ.ಸತ್ಯನಾರಾಯಣ ಎಂಬಾತನಿಗೆ 4 ವರ್ಷ ಶಿಕ್ಷೆ ಮತ್ತು 12 ಕೋಟಿ ರೂ.ದಂಡ, ಖಾಸಗಿ ಕಂಪೆನಿ ವ್ಯವಸ್ಥಾಪಕ ನಿರ್ದೇಶಕಿ ಜಿ.ನಿರ್ಮಲಾಗೆ 1 ವರ್ಷ ಶಿಕ್ಷೆ ಮತ್ತು 1 ಲಕ್ಷ ರೂ.ದಂಡ, ಖಾಸಗಿ ಕಂಪೆನಿ ನಿರ್ದೇಶಕ ದಿನೇಶ್ ಕಾವೂರು ಎಂಬಾತನಿಗೆ 1 ವರ್ಷ ಶಿಕ್ಷೆ ಮತ್ತು 1 ಲಕ್ಷ ರೂ.ದಂಡ, ಯುನೈಟೆಡ್ ಬ್ಯಾಂಕ್ ಇಂಡಿಯಾದ ಕಂಟೋನ್ಮೆಂಟ್ ಶಾಖೆ ಎಜಿಎಂ ಆಗಿದ್ದ ರಾಜೇಶ್‍ಕುಮಾರ್ ಮಾದವ್‍ಗೆ 1 ವರ್ಷ ಶಿಕ್ಷೆ ಮತ್ತು 50 ಸಾವಿರ ರೂ.ದಂಡ ವಿಧಿಸಲಾಗಿದೆ.

ನೆಕ್ಸಾಫ್ಟ್ ಇನ್ಫೋಟೆಲ್ ಲಿಮಿಟೆಡ್ ಕಂಪೆನಿಗೆ 1 ಕೋಟಿ ರೂ.ದಂಡ ವಿಧಿಸಿ ತೀರ್ಪು ನೀಡಿದೆ. ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾದ ಕಂಟೋನ್ಮೆಂಟ್ ಶಾಖೆಯಲ್ಲಿ ದುಬೈ ಮೂಲದ ಕಂಪೆನಿಯಿಂದ ಸಾಫ್ಟ್‍ವೇರ್ ಆಮದು ಮಾಡಿಕೊಳ್ಳಲು 16 ಕೋಟಿ ರೂ.ಸಾಲ ಪಡೆದಿದ್ದರು.

1 ಎಕರೆ 30 ಗುಂಟೆ ಜಮೀನನ್ನು ಮೇಲಾಧಾರ ಭದ್ರತೆ ಒದಗಿಸಿದ್ದರು. ಆದರೆ, ಭದ್ರತಾ ನಿಧಿಯನ್ನು ಬೇರೆಡೆಗೆ ವರ್ಗಾವಣೆ ಮಾಡಿದ್ದರು. ಇದರಿಂದ, ಈ ಸಾಲ ಎನ್‍ಪಿಎ ಆಗಿತ್ತು. ಈ ಹಿನ್ನೆಲೆಯಲ್ಲಿ 2013ರ ಮೇ 1ರಂದು ಸಿಬಿಐನಲ್ಲಿ ಪ್ರಕರಣ ದಾಖಲಾಗಿತ್ತು.

Leave A Reply

Your email address will not be published.