ನ್ಯೂಯಾರ್ಕ್: ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕ ಐತಿಹಾಸಿಕ ಪ್ರವಾಸದ ಬಳಿಕ ಎರಡು ದೇಶಗಳ ನಡುವಿನ ಬಾಂಧವ್ಯ ಮತ್ತಷ್ಟು ವೃದ್ದಿಸಿದ್ದು, ಇದೀಗ ಅಮೆರಿಕದ ಅಧಿಕಾರಿಗಳು ಭಾರತಕ್ಕೆ ಸೇರಿದ ಅತ್ಯಮೂಲ್ಯವಾದ 105 ಪ್ರಾಚೀನ ಕಲಾಕೃತಿಗಳನ್ನು ಹಿಂದಿರುಗಿಸಿದ್ದಾರೆ.
ಆ ಕಲಾಕೃತಿಗಳು ಕ್ರಿ.ಶ 2, 3ನೇ ಶತಮಾನದಿಂದ ಹಿಡಿದು 18- 19ನೇ ಶತಮಾನದ ಅವಧಿಯದ್ದಾಗಿದ್ದು, ನ್ಯೂಯಾರ್ಕ್‌ನ ಭಾರತೀಯ ಕಾನ್ಸುಲೇಟ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮ್ಯಾನ್‌ಹಟನ್ ಜಿಲ್ಲಾ ಅಟಾರ್ನಿ ಕಚೇರಿಯ ಅಧಿಕಾರಿಗಳು ಭಾರತದ ರಾಯಭಾರಿ ತರಣ್‌ಜಿತ್ ಸಿಂಗ್ ಸಂಧು, ಕಾನ್ಸುಲ್ ಜನರಲ್ ರಂಧಿರ್ ಜೈಸ್ವಾಲ್ ಅವರಿಗೆ ಕಲಾಕೃತಿಗಳನ್ನು ಹಸ್ತಾಂತರಿಸಿದರು. ಒಟ್ಟು 105 ಪ್ರಾಚೀನ ಕಲಾಕೃತಿಗಳ ಪೈಕಿ 47 ಪೂರ್ವ ಭಾರತ, 27 ದಕ್ಷಿಣ ಭಾರತ, 22 ಮಧ್ಯ ಭಾರತ, 6 ಉತ್ತರ ಭಾರತ ಮತ್ತು 3 ಪಶ್ಚಿಮ ಭಾರತಕ್ಕೆ ಸೇರಿವೆ ಎಂದು ಕಾನ್ಸುಲೇಟ್ ಕಚೇರಿಯ ಪ್ರಕಟಣೆ ತಿಳಿಸಿದೆ.