ಕೇರಳ; ಹಾಸ್ಯ ಪಾತ್ರಗಳಿಗೆ ಹೆಸರಾದ ಮಲಯಾಳಂ ನಟ ಕೊಲ್ಲಂ ಸುಧಿ ಸೋಮವಾರ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಸುಧಿ ಅವರು ಸಹ ಕಲಾವಿದರಾದ ಮಹೇಶ್, ಬಿನು ಅಡಿಮಾಲಿ ಮತ್ತು ಉಲ್ಲಾಸ್ ಅರೂರ್ ಅವರೊಂದಿಗೆ ಪ್ರಯಾಣಿಸುತ್ತಿದ್ದಾಗ ಅವರ ಕಾರು ತ್ರಿಶೂರ್ ಕಯ್ಪಮಂಗಲಂ ಪಣಾಂಬಿಕುನ್‌ನಲ್ಲಿ ಮುಂಜಾನೆ 4:30 ಕ್ಕೆ ಅಪಘಾತಕ್ಕೀಡಾಗಿದೆ ಎಂದು ಪೊಲೀಸರು ಪಿಟಿಐಗೆ ತಿಳಿಸಿದ್ದಾರೆ,
ಅಪಘಾತದ ಗಾಯಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು ಆದರೆ ಸುಧಿ ಅವರು ಪ್ರಾಣ ಕಳೆದುಕೊಂಡಿದ್ದಾರೆ. ಉಳಿದ ಮೂವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ.
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೂಡ ಸುಧಿ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಬೆಂಗಳೂರು: 4055 ಅತಿಥಿ ಉಪನ್ಯಾಸಕರ ನೇಮಕಾತಿ; ಯಾವ ಜಿಲ್ಲೆಗೆ ಎಷ್ಟು ಹುದ್ದೆಗಳು?
ಮೂವರು ಮಿಮಿಕ್ರಿ ಕಲಾವಿದರಾದ ಬಿನು ಆದಿಮಾಲು, ಉಲ್ಲಾಸ್ ಮತ್ತು ಮಹೇಶ್ ಗಾಯಗೊಂಡಿದ್ದಾರೆ ವರದಿ ತಿಳಿಸಿದೆ. ಕೇರಳದ ಕೈಪಮಂಗಲಂನಲ್ಲಿ ಸೋಮವಾರ ಮುಂಜಾನೆ 4.30 ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ.
ಅವರೆಲ್ಲರೂ ವಡಗರದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು ಮತ್ತು ಹಿಂತಿರುಗುತ್ತಿದ್ದಾಗ ಕಾರು ಪಿಕಪ್ ಗೆ ಮುಖಾಮುಖಿ ಢಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಸುಧಿ ತಲೆಗೆ ತೀವ್ರ ಪೆಟ್ಟಾಗಿದೆ. ಅವರನ್ನು ಕೊಡಂಗಲ್ಲೂರಿನ ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ವರದಿ ತಿಳಿಸಿದೆ. ಇನ್ನು ಮೂವರು ಕೊಡಂಗಲ್ಲೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.