ಮಂಗಳೂರು : ವೆನ್ಲಾಕ್ ಆಸ್ಪತ್ರೆಯಿಂದ ಚಿಕಿತ್ಸೆಯಲ್ಲಿದ್ದ ವೇಳೆ ಪರಾರಿಯಾಗಿದ್ದ ವಿಚಾರಣಾಧೀನ ಕೈದಿಯನ್ನು ಮಂಗಳೂರು ದಕ್ಷಿಣ ಪೊಲೀಸರು ಬಂಧಿಸಿದ್ದಾರೆ. ಬಂಟ್ವಾಳದ ಸಜೀವನಡು ನಿವಾಸಿ ಎಸ್.ಎಮ್ ನೌಫಾಲ್(32) ಬಂಧಿತ ಆರೋಪಿ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎನ್ಡಿಪಿಎಸ್ ಪುಕರಣಕ್ಕೆ ಸಂಬಂಧಿಸಿದಂತೆ ಎಸ್.ಎಮ್ ನೌಫಾಲ್ ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿದ್ದನು. ಅನಾರೋಗ್ಯದ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ಈತನನ್ನು ಪೊಲೀಸ್ ಭದ್ರತೆಯಲ್ಲಿ ಸರ್ಕಾರಿ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ನೌಫಾಲ್ ಆಗಸ್ಟ್ 16ರಂದು 5.06ಕ್ಕೆ ವೆನ್ಲಾಕ್ ಆಸ್ಪತ್ರೆಯಿಂದ ಪೊಲೀಸ್ ಭದ್ರತೆಯಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದನು. ಈ ಬಗ್ಗೆ ಆರೋಪಿಯ ಗಾರ್ಡ್ ಕರ್ತವ್ಯದಲ್ಲಿದ್ದ ಸಚಿನ್ ಕೆ.ಎಸ್ ನೀಡಿದ ದೂರಿನಂತೆ ಮಂಗಳೂರು ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆಗಸ್ಟ್ 19ರಂದು ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ಪಿ.ಎಸ್.ಐ ಮನೋಹರ್ ಪ್ರಸಾದ್ ಹಾಗೂ ಸಿಬ್ಬಂದಿ ಆರೋಪಿಯನ್ನು ದಸ್ತಗಿರಿ ಮಾಡಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.
[vc_row][vc_column]
BREAKING NEWS
- ಮದುವೆಯಲ್ಲಿ ಕೈತಪ್ಪಿ ಅತಿಥಿಗಳ ಮೇಲೆ ಬಿದ್ದ ಮುಸುರೆ ತಟ್ಟೆಗಳು – ವೇಟರ್ನನ್ನು ಕೊಂದು, ಪೊದೆಗೆ ಎಸೆದ ಪಾಪಿಗಳು ಅರೆಸ್ಟ್
- ಬಿಜೆಪಿ ಮುಖಂಡ ಮಣಿಕಂಠ ರಾಥೋಡ್ ಸುದ್ದಿಗೋಷ್ಠಿಗೂ ಮುನ್ನ ಪೊಲೀಸ್ ವಶಕ್ಕೆ
- ಯುನೆಸ್ಕೋದ ಸಾಂಸ್ಕೃತಿಕ ಪರಂಪರೆಯ ಪಟ್ಟಿಗೆ ಸೇರಿದ ಗಾರ್ಬಾ ನೃತ್ಯ
- ‘ಗೊಡ್ಡು ಬೆದರಿಕೆಗಳಿಗೆ ಹೆದರುವ ಪಕ್ಷ ಬಿಜೆಪಿ ಅಲ್ಲ’- ಬಿ.ವೈ.ವಿಜಯೇಂದ್ರ
- ಲಾರಿ – ಟಾಟಾ ಏಸ್ ನಡುವೆ ಭೀಕರ ಅಪಘಾತ-ನಾಲ್ವರು ಸಾವು
- ಜೈನಮುನಿ ಹತ್ಯೆ ಪ್ರಕರಣ-500ಕ್ಕೂ ಹೆಚ್ಚು ಪುಟಗಳ ಚಾರ್ಜ್ಶೀಟ್ ನ್ಯಾಯಾಲಯಕ್ಕೆ ಸಲ್ಲಿಕೆ
- ದೈವಾರಾಧನೆ ನಮ್ಮ ನೆಲದ ಸಂಸ್ಕೃತಿ ಅದಕ್ಕೆ ಅವಮಾನ ಮಾಡಬೇಡಿ –ರಿಷಬ್ ಶೆಟ್ಟಿ
- ವರದಕ್ಷಿಣೆ ದಾಹಕ್ಕೆ ಬಲಿಯಾದರೆ ಯುವ ವ್ಯದ್ಯೆ ?
- ನಿಮ್ಮ ಪ್ಯಾನ್ ಕಾರ್ಡ್ ಕಳೆದು ಹೋಗಿದ್ಯಾ..? ಡೂಪ್ಲಿಕೇಟ್ ಕಾರ್ಡ್ ಪಡೆಯಲು ಹೀಗೆ ಮಾಡಿ
- ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಡಿಸೆಂಬರ್ 9ರಂದು ದೇವರ ದರ್ಶನ ಸಮಯದಲ್ಲಿ ಬದಲಾವಣೆ