ಜೂ.1ರಿಂದ ಜುಲೈ 30ರವರೆಗೆ ಮೀನುಗಳ ವಂಶಾಭಿವೃದ್ಧಿ ಚಟುವಟಿಕೆ ನಡೆಯುವ ಹಿನ್ನೆಲೆ ಕರಾವಳಿಯಲ್ಲಿ ಸಮುದ್ರದಲ್ಲಿ ಮೀನಿಗಾರಿಕೆಗೆ ನಿಷೇಧ ಮಾಡಲಾಗಿದೆ. ಕರಾವಳಿ ಅಂದರೇ ಸಾಕು ನೆನಪಾಗೋದೇ ಮೀನು, ಹೌದು ದಕ್ಷಿಣ ಕನ್ನಡ ಉಡುಪಿ ಈ ಭಾಗದಲ್ಲಿ ಮೀನು ಯತ್ತೇಚ್ಚವಾಗಿದೆ ಬಳಕೆ ಮಾಡಲಾಗುತ್ತದೆ.
ಮೀನು ಹಲವು ಪೋಷಕಾಂಶಗಳಿಂದ ಸಂವೃದ್ಧವಾಗಿದೆ. ಕರಾವಳಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮೀನುಗಾರಿಕೆ ದೊಡ್ಡ ಉದ್ಯಮ ಕ್ಷೇತ್ರ. ಮೀನುಗಾರಿಕೆ ಮಾಡುವ ಮೂಲಕ ಸಾವಿರಾರು ಜನರ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ.
ಹಾಲು ಉತ್ಪಾದಕರಿಗೆ ಶಾಕ್ : ಹಾಲಿನ ಪ್ರೋತ್ಸಾಹ ಧನ ಲೀಟರ್ಗೆ 1.50 ರೂ. ಕಡಿತ.!
ಮೀನುಗಾರಿಕಾ ಋತುವಿನಲ್ಲಿ ಸಾವಿರಾರು ಕೋಟಿ ವಹಿವಾಟು ನಡೆಯುವ ಈ ಉದ್ಯಮದಲ್ಲಿ ವರ್ಷದಲ್ಲಿ ಎರಡು ತಿಂಗಳ ರಜಾ ಅವಧಿ ಇರುತ್ತದೆ. ಪ್ರತಿ ವರ್ಷ ಜೂನ್ ತಿಂಗಳು ಆರಂಭವಾದೊಡನೆ ಕರಾವಳಿಯಲ್ಲಿ ಸಮುದ್ರದಲ್ಲಿ ಮೀನಿಗಾರಿಕೆಗೆ ನಿಷೇಧ ಹೇರಲಾಗುತ್ತದೆ. ಅದರಂತೆ ಈ ವರ್ಷವೂ ಸಹ ಜೂನ್ 1ರಂದು ಜುಲೈ 31ರ ವರೆಗೆ 61 ದಿನಗಳ ಕಾಲ ಮೀನಿಗಾರಿಕೆಗೆ ನಿಷೇಧ ಇರಲಿದೆ.