ಮಂಗಳೂರು: ನಗರದ ಹಂಪನ್‌ಕಟ್ಟೆಯಲ್ಲಿ ಸರಣಿ ಅಪಘಾತ ನಡೆದಿದೆ. ಮಂಗಳೂರಿನ ಹಂಪನ್‌ಕಟ್ಟೆಯ ಜಂಕ್ಷನ್ ಲಕ್ಷ್ಮೀ ಸಾರೀಸ್ ಶೋರೂಂ ಮುಂಭಾಗದಲ್ಲಿ ಇಂದು ಮಧ್ಯಾಹ್ನ ಸುಮಾರು 11.30ಕ್ಕೆ ಈ ಸರಣಿ ದುರಂತ ನಡೆದಿದೆ.
ಸ್ಟೇಟ್ ಬ್ಯಾಂಕಿನಿಂದ ಕುಂಜತ್ತಬೈಲ್‌ಗೆ ಹೊರಟಿದ್ದ 13 ನಂಬ್ರದ ಶಿವಕೃಪಾ ಹೆಸರಿನ ಖಾಸಗಿ ಬಸ್ಸು ತಲಪಾಡಿಗೆ ಹೋಗುತ್ತಿದ್ದ 42 ನಂಬ್ರದ ಮರೋಳಿ ಬಸ್ಸಿಗೆ ಹಿಂಭಾಗದಿಂದ ಬಂದು ಬಡಿದಿದೆ.
ಈ ಡಿಕ್ಕಿ ರಭಸಕ್ಕೆ ಅದು ಮುಂಭಾಗದಲ್ಲಿದ್ದ 21 ನಂಬ್ರದ ನೀರುಮಾರ್ಗ ತೆರಳುವ ರೋಶನಿ ಹೆಸರಿನ ಬಸ್ಸಿಗೆ ಬಡಿದಿದೆ. ಡಿಕ್ಕಿ ರಭಸಕ್ಕೆ ಮೂರು ಬಸ್ಸುಗಳಿಗೂ ಹಾನಿ ಉಂಟಾಗಿದ್ದು, ಗಾಜುಗಳು ಪುಡಿಪುಡಿಯಾಗಿವೆ.
7 ತಿಂಗಳ ಬಳಿಕ ಮೊದಲ ಬಾರಿಗೆ ಮಗಳ ಮುಖವನ್ನು ರಿವೀಲ್ ಮಾಡಿದ ಧ್ರುವ ಸರ್ಜಾ
ಶಿವಕೃಪಾ ಬಸ್ಸಿನಲ್ಲಿದ್ದ ಚಾಲಕ ಹಾಗೂ ಚಾಲಕನ ಪಕ್ಕದ ಅಡ್ಡ ಸೀಟಿನಲ್ಲಿ ಕುಳಿತ್ತಿದ್ದ ಮಹಿಳೆಯೊಬ್ಬರು ಗಂಭೀರ ಗಾಯಗೊಂಡಿದ್ದು, ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂಚಾರಿ ಪೊಲೀಸರು ಆಗಮಿಸಿ ಬಸ್ಸುಗಳನ್ನು ತೆರವುಗೊಳಿಸುವ ಮೂಲಕ ಸಂಚಾರ ಸುಗಮಗೊಳಿಸಿದರು.