ಮಂಗಳೂರು: ಕೈಯಲ್ಲಿ ಧರಿಸಿದ್ದ ಬ್ರಾಸ್‌ಲೆಟ್ ಅನ್ನು ಆಸ್ಫತ್ರೆ ಅವರಣದಲ್ಲಿ ಕಸಿದು ಪರಾರಿ – ಪರಿಚಿತರ ಕೃತ್ಯ, ದೂರು ದಾಖಲು
ಮಂಗಳೂರು: ನಗರದ ಜಿಎಚ್‌ಎಸ್ ರಸ್ತೆಯ ಖಾಸಗಿ ಕ್ಲಿನಿಕ್‌ನ ಬಳಿ ಸತೀಶ್ ರಾವ್ ಅವರ ಕೈಯಲ್ಲಿದ್ದ ಚಿನ್ನದ ಬ್ರಾಸ್ ಲೆಟ್ ಅನ್ನು ಪರಿಚಿತರೇ ಸುಲಿಗೆ ಮಾಡಿರುವ ಬಗ್ಗೆ ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೇ 12ರಂದು ಸತೀಶ್ ತನ್ನ ಮಗ ರಿಶಬ್ ಸೂರ್ಯನ್ನು ಚಿಕಿತ್ಸೆಗಾಗಿ ಜಿಎಚ್‌ಎಸ್ ರಸ್ತೆಯಲ್ಲಿರುವ ಕ್ಲಿನಿಕ್‌ಗೆ ರಾತ್ರಿ 7:30ಕ್ಕೆ ಕರೆದುಕೊಂಡು ಹೋಗಿ ಹೊರರೋಗಿ ವಿಭಾಗದಿಂದ ಮರಳುವಾಗ ಪರಿಚಿತ ಗೋವಿಂದ್ ರಾಜ್ ನಾಯಕ್ ಮತ್ತು ಅವರ ಮಗ ಗಿರೀಶ್ ನಾಯಕ್ ಅವರು ಸತೀಶ್ ಅವರ ಬಲಗೈಯಲ್ಲಿದ್ದ ಸುಮಾರು 22.50 ಗ್ರಾಂ ತೂಕದ ಚಿನ್ನದ ಬ್ರಾಸ್‌ಲೈಟನ್ನು ಬಲವಂತವಾಗಿ ಕಿತ್ತುಕೊಂಡು ಹೋಗಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಮುಂದಿನ ಜನಾಂಗ ಮೂಕಾಂಬಿಕಾ ದರ್ಶನಕ್ಕೆ ಬರಬೇಕಂದ್ರೆ “ದಿ ಕೇರಳ ಸ್ಟೋರಿ” ನೋಡಿ, ಪೋಸ್ಟರ್ ವೈರಲ್
ಇದರ ಬೆಲೆ ಸುಮಾರು 1.35 ಲಕ್ಷ ರೂ. ಆಗಿದ್ದು, ಸುಲಿಗೆ ಮಾಡುವ ದೃಶ್ಯವು ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಈ ಘಟನೆಯಿಂದ ತನಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.