ತುಮಕೂರು: ಚುನಾವಣೆಯಲ್ಲಿ ಏನೆಲ್ಲ ತಂತ್ರಗಳ ಮೂಲಕ ಮತದಾರರನ್ನು ಸೆಳೆಯುವ ಪ್ರಯತ್ನ ನಡೆಸಲಾಗುತ್ತಿದೆ ಎನ್ನುವುದಕ್ಕೆ ಈ ಪ್ರಕರಣವೇ ಸಾಕ್ಷಿ.
ತುಮಕೂರಿನಲ್ಲಿ JDSನಿಂದ ಮತದಾರರು ಹಾಗೂ ಮುಖಂಡರಿಗೆ ಧರ್ಮಸ್ಥಳ ಸೇರಿ ಸುತ್ತಮುತ್ತಲಿನ ಪುಣ್ಯಕ್ಷೇತ್ರಗಳಿಗೆ ಪ್ರವಾಸದ ಭಾಗ್ಯ ಕಲ್ಪಿಸಲಾಗಿತ್ತು. ಈ ಟೂರ್ ಮುಗಿಸಿ ವಾಪಾಸ್ಸಾಗುತ್ತಿದ್ದಂತೆ ಚುನಾವಣಾಧಿಕಾರಿಗಳು 4 ಬಸ್‌ಗಳನ್ನು ಮಧುಗಿರಿಯ ಗಿಡದಾಗಲಹಳ್ಳಿ ಸಮೀಪ ಜಪ್ತಿ ಮಾಡಿಕೊಂಡಿದ್ದಾರೆ. JDSನ ವೀರಭದ್ರಯ್ಯ ಈ ಟೂರ್ ಆಯೋಜಿಸಿದ್ದರು ಎಂದು ತಿಳಿದುಬಂದಿದೆ.