Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

BREAKING NEWS

[/vc_column][/vc_row]

ಮದುವೆ ಮನೆಯಲ್ಲಿ ಸ್ಫೋಟಗೊಂಡ ಗ್ಯಾಸ್ ಸಿಲಿಂಡರ್ – ಮೂರು ಮಕ್ಕಳು ಸಜೀವ ದಹನ

0

ಮಧ್ಯಪ್ರದೇಶ: ವಿವಾಹ ಸಮಾರಂಭದ ವೇಳೆ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದ್ದು, ಮೂವರು ಅಪ್ರಾಪ್ತ ಮಕ್ಕಳು ಸಜೀವ ದಹನಗೊಂಡಿರುವ ಘಟನೆ ಮಧ್ಯಪ್ರದೇಶದ ಭಿಂದ್ ಜಿಲ್ಲೆಯಲ್ಲಿ ಶನಿವಾರ ನಡೆದಿದೆ.

ಮೃತರನ್ನು ಕಾರ್ತಿಕ್(4 ), ಭಾವನಾ(6 ) ಮತ್ತು ಪರಿ(5) ಎಂದು ಗುರುತಿಸಲಾಗಿದೆ.

ಜೂ.17ರಂದು ನಡೆಯಬೇಕಿದ್ದ ಮದುವೆ ಮೆರವಣಿಗೆಗೆ ಮನೆಯವರು ಸಿದ್ಧತೆ ನಡೆಸಿದ್ದು, ಈ ವೇಳೆ ಅಡುಗೆ ಅನಿಲ ಸಿಲಿಂಡರ್ ಒಂದಕ್ಕೆ ಬೆಂಕಿ ತಗುಲಿ ಭಾರೀ ಸ್ಫೋಟ ಸಂಭವಿಸಿದೆ.

ಇನ್ನು ಗ್ಯಾಸ್ ಸಿಲಿಂಡರ್ ಸ್ಫೋಟದಲ್ಲಿ, ಗ್ಯಾಸ್ ಸಿಲಿಂಡರ್‌ನಿಂದ ಹೊರಹೊಮ್ಮಿದ ಭಾರಿ ಜ್ವಾಲೆಯಿಂದಾಗಿ ಮಕ್ಕಳು ಸಜೀವ ದಹನವಾಗಿದ್ದಾರೆ.

ಈ ದುರ್ಘಟನೆಯಲ್ಲಿ ಕುಟುಂಬದ ಮುಖ್ಯಸ್ಥ ಅಖಿಲೇಶ್ ಕಡರೆ ಕೂಡ ಗಾಯಗೊಂಡಿದ್ದು, ಅವರನ್ನು ಗ್ವಾಲಿಯರ್‌ಗೆ ದಾಖಲಿಸಲಾಗಿದ್ದು, ಅಖಿಲೇಶ್ ಅವರ ಪತ್ನಿ ವಿಮಲಾ ಮತ್ತು ಪುತ್ರಿ ಪೂಜಾ ಮತ್ತು ಕುಟುಂಬದ ಮತ್ತೊಬ್ಬ ಸದಸ್ಯ ಮೀರಾ ಗೋರ್ಮಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Leave A Reply

Your email address will not be published.