ಉತ್ತರಪ್ರದೇಶ: ಮದುವೆಯ ಹಿಂದಿನ ದಿನ ಮನೆಬಿಟ್ಟು ತನ್ನ ಪ್ರಿಯಕರನೊಂದಿಗೆ ಪರಾರಿಯಾಗುವಾಗ ಅಪಘಾತಕ್ಕೀಡಾಗಿ ಜೋಡಿ ಸೇರಿ ಮೂವರು ಮೃತಪಟ್ಟಿರುವ ದುರಂತ ಘಟನೆ ಉತ್ತರ ಪ್ರದೇಶದ ಮಿರ್ಜಾಪುರ್ನಲ್ಲಿ ನಡೆದಿದೆ.
ಮೃತರನ್ನು ಮಿರ್ಜಾಪುರ ಮೂಲದ ರಾಣಿ (21), ಕರಣ್ (21) ಮತ್ತು ವಿಕಾಸ್ (21) ಎಂದು ಗುರುತಿಸಲಾಗಿದೆ.
ರಾಣಿಯ ವಿವಾಹವು ಪ್ರಯಾಗ್‌ರಾಜ್‌ನ ವ್ಯಕ್ತಿಯೊಂದಿಗೆ ನಿಶ್ಚಯವಾಗಿತ್ತು. ಪೊಲೀಸರ ಪ್ರಕಾರ, ಮಹಿಳೆ ತನ್ನ ಸೋದರಸಂಬಂಧಿಯ ಸ್ನೇಹಿತನಾಗಿದ್ದ ಸ್ಥಳೀಯ ಹುಡುಗನನ್ನು ಪ್ರೀತಿಸುತ್ತಿದ್ದಳು.ಆದರೆ,ಇದಕ್ಕೆ ಮನೆಯವರ ವಿರೋಧವಿತ್ತು. ಬಲವಂತದ ಮದುವೆ ಇಷ್ಟವಿಲ್ಲದಿದ್ದರಿಂದ ಸೋದರಸಂಬಂಧಿಯ ಸಹಾಯದಿಂದ ಇಬ್ಬರೂ ಪರಾರಿಗೆ ಯತ್ನಿಸಿದ್ದರು.
ಪೋಲೀಸರ ಪ್ರಕಾರ ಮದುವೆಯ ಹಿಂದಿನ ದಿನ ರಾಣಿಯ ಪ್ರಿಯಕರ ಮತ್ತು ಸೋದರಸಂಬಂಧಿ ಬೈಕ್ನಲ್ಲಿ ಆಕೆಯ ಮನೆಗೆ ತಲುಪಿದರು. ಮದುವೆಯ ಸಿದ್ಧತೆಯಲ್ಲಿ ನಿರತರಾಗಿದ್ದ ಸಂಬಂಧಿಕರ ಕಣ್ಣು ತಪ್ಪಿಸಿ, ಅಲ್ಲಿಂದ ಎಸ್ಕೇಪ್ ಆಗಿದ್ದರು.
ಮದುವೆ ಮನೆಯಿಂದ ತಪ್ಪಿಸಿ ತೆರಳುವಾಗ ಕೇವಲ ಒಂದು ಕಿಲೋಮೀಟರ್ ದೂರದಲ್ಲೇ ಅಪಘಾತವಾಗಿದ್ದು, ಮೂವರು ಕೂಡ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ.
ಘಟನೆಯಿಂದ ಮದುವೆ ಮನೆಯಲ್ಲಿ ಶೂತಕದ ಛಾಯೆ ಮೂಡಿದೆ.