ಉತ್ತರ ಪ್ರದೇಶ: ಗಂಡ ಹೆಂಡತಿ ಜಗಳ ಉಂಡು ಮಲಗೋ ತನಕ ಎನ್ನುತ್ತಾರೆ. ಆದರೆ ಒಲ್ಲೊಂದು ಪ್ರಕರಣದಲ್ಲಿ ನವವಿವಾಹಿತೆಯೊಬ್ಬಳು ತನ್ನ ಗಂಡ ತನ್ನ ಜೊತೆ ಸಂಸಾರ ಮಾಡುತ್ತಿಲ್ಲ ಎಂದು ಆರೋಪಿಸಿ ಗಂಡನ ಮೇಲೆ ದೂರು ದಾಖಲಿಸಿದ್ದಾಳೆ.
ಒಂದು ವೇಳೆ ಬಾಕಿ ಇರುವ 5 ಲಕ್ಷ ಹಣವನ್ನು ತಂದುಕೊಡದಿದ್ದರೆ ಈ ಅಶ್ಲೀಲ ವಿಡಿಯೋ, ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಬೇಕಾಗುತ್ತದೆ ಎಂದು ಆರೋಪಿ ಪತ್ನಿಗೆ ಬೆದರಿಕೆ ಹಾಕಿದ್ದಾನೆ. ಇದರಿಂದ ಹೆದರಿದ ಮಹಿಳೆ ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾಳೆ.
ಪತಿ ಅಶ್ಲೀಲ ವಿಡಿಯೋ ಮಾಡಿ ಬೆದರಿಕೆ ಹಾಕುತ್ತಿದ್ದರೆ, ಇತ್ತ ಆಕೆಯ ಅತ್ತೆ ಕೂಡ ನಿರಂತರವಾಗಿ ವರದಕ್ಷಿಣೆ ಹಣಕ್ಕಾಗಿ ಕಿರುಕುಳ ನೀಡಿದ್ದಾರೆ. ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ ಎಂದು ಸಂತ್ರಸ್ತೆ ದೂರಿನಲ್ಲಿ ವಿವರಿಸಿದ್ದಾಳೆ. ಈ ದೂರಿನ ಮೇರೆಗೆ ಆರೋಪಿ ಪತಿ ವಿರುದ್ಧ ಹಲ್ಲೆ, ನಿಂದನೆ ಹಾಗೂ ವರದಕ್ಷಿಣೆಗೆ ಕಿರುಕುಳ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿ ನರೇಶ್ ತ್ಯಾಗಿ ಮಾಹಿತಿ ನೀಡಿದ್ದಾರೆ.
20 ಲಕ್ಷ ಖರ್ಚು ಮಾಡಿ ಅದ್ದೂರಿ ಮದುವೆ: ಫೆಬ್ರವರಿ 6, 2023ರಂದು ಯುವತಿಯ ಮನೆಯವರು ಸುಮಾರು 20 ಲಕ್ಷ ಖರ್ಚು ಮಾಡಿ ಅದ್ದೂರಿಯಾಗಿ ವಿವಾಹ ಮಾಡಿಕೊಟ್ಟಿದ್ದರು. ಜೊತೆಗೆ 15 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ಸಂತ್ರಸ್ತೆಯ ಕುಟುಂಬ ಸದಸ್ಯರು ಹೇಳಿದ್ದಾರೆ.
ಅದ್ದೂರಿಯಾಗಿ ಮದುವೆಯಾದ ಬಳಿಕ ಅಳಿಯ ತಮ್ಮ ಮಗಳ ಹತ್ತಿರಕ್ಕೆ ಹೋಗುತ್ತಿಲ್ಲ ಎಂಬ ಮಾಹಿತಿ ತಿಳಿದ ಯುವತಿಯ ಪೋಷಕರು ಅಳಿಯನ ಜೊತೆ ಮಾತನಾಡಿದ್ದಾರೆ. ಏನಾದರೂ ಆರೋಗ್ಯ ಸಮಸ್ಯೆ ಇದ್ದರೆ, ಚಿಕಿತ್ಸೆ ಕೊಡಿಸುವುದಾಗಿಯೂ ಹೇಳಿದ್ದಾರೆ. ಆದರೆ ಆತ ಮಾತ್ರ 10 ಲಕ್ಷ ಹಣಕ ಬೇಕೆಂದು ಹೇಳಿದ್ದಾನೆ. 5 ಲಕ್ಷ ಕೊಟ್ಟರೂ ಆತ ತಮ್ಮ ಮಗಳ ಜೊತೆಗೆ ಲೈಂಗಿಕವಾಗಿ ಸೇರದೆ ಹಿಂಸೆ ಕೊಟ್ಟಿದ್ದಾನೆ. ಇದರಿಂದ ನೊಂದ ಯುವತಿ ಹಾಗೂ ಕುಟುಂಬಸ್ತರು ಪೊಲೀಸರಿಗೆ ದೂರು ನೀಡಿದ್ದಾರೆ.