ಕೊಡಗು: ಮರದಿಂದ ಕೆಳಗೆ ಬಿದ್ದು ಮಾಜಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಗನ್ ಮ್ಯಾನ್ ಮೃತಪಟ್ಟಿರುವ ಘಟನೆ ಕೊಡಗು ಜಿಲ್ಲೆ ಕುಶಾಲನಗರ ತಾಲೂಕಿನ ಕಾನ್ಬೈಲ್ ಗ್ರಾಮದಲ್ಲಿ ನಡೆದಿದೆ. ಕುಶಾಲನಗರ ತಾಲೂಕಿನ ಕಾನ್ಬೈಲು ಗ್ರಾಮದ ಲೋಕೇಶ್ (40) ಮೃತ ದುರ್ದೈವಿ. ಲೋಕೇಶ್ ಅವರು ಮಾವಿನ ಮರ ಕಸಿಮಾಡಲು ಮರ ಏರಿದ್ದ ಸಮಯದಲ್ಲಿ ರಕ್ತದೊತ್ತಡ (ಬಿಪಿ) ಕಡಿಮೆಯಾಗಿ, ತಲೆ ತಿರುಗಿ ಮರದಿಂದ ಕಾಂಕ್ರೀಟ್ ರೋಡ್ ಮೇಲೆ ಬಿದ್ದಿದ್ದಾರೆ. ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತದೇಹವನ್ನು ಮಡಿಕೇರಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಅಪ್ಪಚ್ಚು ರಂಜನ್ ಹಾಗೂ ಮಾಜಿ ಸ್ಪೀಕರ್ ಕೆ.ಜಿ ಬೋಪಯ್ಯ ಅವರು ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ್ದಾರೆ. ಲೋಕೇಶ್ ಅವರು ಅಪ್ಪಚ್ಚು ರಂಜನ್ ಅವರಿಗೆ 10 ವರ್ಷಗಳಿಂದ ಗನ್ ಮ್ಯಾನ್ ಆಗಿದ್ದರು. ಲೋಕೇಶ್ ನಿಧನಕ್ಕೆ ಅಪ್ಪಚ್ಚು ರಂಜನ್ ಕಣ್ಣೀರು ಹಾಕಿದ್ದಾರೆ. ಈ ಸಂಬಂಧ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಬಗ್ಗೆ ಇನ್ನಷ್ಟು ಮಾಹಿತಿ ತಿಳಿದುಬರಬೇಕಿದೆ.
[vc_row][vc_column]
BREAKING NEWS
- ವೀರಶೈವ ಲಿಂಗಾಯತರು ಸ್ವಯಂ ಉದ್ಯೋಗ, ಶೈಕ್ಷಣಿಕ, ಕಾರು ಖರೀದಿ ಸಾಲಕ್ಕೆ ಅರ್ಜಿ ಆಹ್ವಾನ.!
- ಕರ್ನಾಟಕ ಡಿ.ಎಸ್.ಟಿ. ಪಿ.ಹೆಚ್.ಡಿ ಶಿಷ್ಯವೇತನಕ್ಕೆ ಅರ್ಜಿ ಆಹ್ವಾನ
- ಉದ್ಯಮಶೀಲತಾ ಅಭಿವೃದ್ದಿ ತರಬೇತಿ ಕಾರ್ಯಕ್ರಮ.!
- ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿಗೆ ರಾಷ್ಟ್ರಮಟ್ಟದಲ್ಲಿ 2ನೇ ಬಹುಮಾನ- ಡಿ. ಸುಧಾಕರ್
- ಮಾರಕ ಕಾಯಿಲೆ ಡೆಂಗ್ಯೂ ಬಗ್ಗೆ ಈ ಲಕ್ಷಣಗಳು ಕಂಡುಬಂದರೆ.?
- ಈ ಕಾರಣಕ್ಕೆ ಈ ಪರ್ವತ ಚಾರಣಕ್ಕೆ ನಿಷೇಧ.. !
- ಇಂದು ಮತ್ತೊಮ್ಮೆ ಎಮರ್ಜೆನ್ಸಿ ಅಲರ್ಟ್.. ! ಏನದು.?
- ಪುಷ್ಪಗಳಿಂದ ಶತ್ರುನಾಶ ತಂತ್ರ ಈ ಒಂದೇ ಒಂದು ಪುಷ್ಪದಿಂದ ಎಂತಹ ಶತ್ರು ಇದ್ದರೂ ಕೂಡ ನಾಶ ಮಾಡಿ ನಿಮ್ಮಂತೆ ಶರಣಾಗತಿಯಾಗುವತರ ಮಾಡಬಹುದು!
- — –ದಾಸೋಹದ ಸಂಗಣ್ಣ ಅವರ ವಚನ .!
- ನೇಪಾಳದಲ್ಲಿ ಭೂಕಂಪನ: ದೆಹಲಿ, ಎನ್ ಸಿಆರ್ ನಲ್ಲೂ ಕಂಪಿಸಿದ ಭೂಮಿ