ವಿಟ್ಲ : ವ್ಯಕ್ತಿಯೋರ್ವರು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಬಂಟ್ವಾಳ ತಾಲೂಕು ಮಾಣಿ ಗ್ರಾಮದ ಸೂರಿಕುಮೇರು ಕಾಯರಡ್ಕ ಎಂಬಲ್ಲಿ ನಡೆದಿದೆ.
ರಿಜಿ ಜಾನ್ (50) ಮೃತರು. ರಿಜಿ ಜಾನ್ ರವರು ಬಂಟ್ವಾಳ ತಾಲೂಕು ಮಾಣಿ ಗ್ರಾಮದ ಸೂರಿಕುಮೇರು ಕಾಯರಡ್ಕ ಎಂಬಲ್ಲಿರುವ ವಾಲ್ಟರ್ ಡಿಸೋಜ್ ರವರು ರೈಟರ್ ಆಗಿ ಕೆಲಸ ಮಾಡುವ ತೋಟದಲ್ಲಿ ಸುಮಾರು 4 ವರ್ಷಗಳಿಂದ ಕೆಲಸ ಮಾಡಿಕೊಂಡಿದ್ದು, ವಿಪರೀತ ಅಮಲು ಪದಾರ್ಥ ಸೇವನೆ ಮಾಡುತ್ತಿದ್ದರು.
2615 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರ: ಮತ ಎಣಿಕೆ ಪ್ರಕ್ರಿಯೆ ಆರಂಭ
ಮೇ.2 ರಂದು ವಾಲ್ಟರ್ ರವರು ಕಾಯರಡ್ಕದ ರಬ್ಬರ್ ತೋಟಕ್ಕೆ ಹೋಗಿ ರಿಜಿ ಅವರಿಗೆ ಸಂಬಳವನ್ನು ನೀಡಿದ್ದು, ತದನಂತರದಲ್ಲಿ ವಾಲ್ಟರ್ ರವರು ರಿಜಿ ರನ್ನು ಭೇಟಿಯಾಗುವುದಾಗಲಿ., ಪೋನ್ ಕರೆ ಮಾಡುವುದಾಗಲಿ ಮಾಡಿರುವುದಿಲ್ಲ. ಮೇ.12 ರಂದು ಕಾಯರಡ್ಕದ ತೋಟದಲ್ಲಿರುವ ರಿಜಿ ವಾಸಿಸುತ್ತಿದ್ದ ಮನೆಯ ಬಳಿ ಬಂದಾಗ ಮನೆ ಒಳಗಿನಿಂದ ವಿಪರೀತ ವಾಸನೆ ಬರುತ್ತಿದ್ದು, ಮನೆಯ ಮುಂದಿನ ಬಾಗಿಲು ಮೂಲಕ ಇಣುಕಿ ನೋಡಿದಾಗ ರಿಜಿಜಾನ್ ಮೃತದೇಹವು ಕೊಳೆತ ಸ್ಥಿತಿಯಲ್ಲಿ ಕಂಡು ಬಂದಿರುತ್ತದೆ. ರಿಜಿಜಾನ್ ರವರು ವಿಪರೀತ ಮದ್ಯೆ ಸೇವನೆಯ ಚಟವನ್ನು ಹೊಂದಿದ್ದ ಕಾರಣ ಅಸೌಖ್ಯದಿಂದಲೋ ಅಥವಾ ಇನ್ಯಾವುದೋ ಕಾರಣದಿಂದ ಮೃತಪಟ್ಟಿರುವುದಾಗಿದೆ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಕಲಂ:174 ಸಿಆರ್‌ಪಿಸಿ ರಂತೆ ಪ್ರಕರಣ ದಾಖಲಾಗಿದೆ.