ಅಮೃತಸರ(ಪಂಜಾಬ್): ಅಟ್ಟಾರಿ – ವಾಘಾ ಗಡಿಯಲ್ಲಿ ಮಾದಕವಸ್ತುಗಳನ್ನು ಸಾಗಿಸುತ್ತಿದ್ದ ಪಾಕಿಸ್ತಾನ ಮೂಲದ ಡ್ರೋನ್ ಅನ್ನು ಭಾರತೀಯ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಹೊಡೆದುರುಳಿಸಿದೆ.
ಮೂಲಗಳ ಪ್ರಕಾರ, ರತನ್ ಖುರ್ದ್ ಪ್ರದೇಶದಲ್ಲಿ ಭಾನುವಾರ ರಾತ್ರಿ 9.45ರ ಸುಮಾರಿಗೆ ಪಾಕಿಸ್ತಾನದ ಡ್ರೋನ್ ಭಾರತದ ಗಡಿ ಪ್ರದೇಶವನ್ನು ದಾಟಿ ಒಳನುಗ್ಗಲು ಯತ್ನಿಸಿತ್ತು . ಇದನ್ನು ಗಮನಿಸಿದ ಗಡಿ ಭದ್ರತಾ ಪಡೆಯ ಬೆಟಾಲಿಯನ್ 22ರ ಸಿಬ್ಬಂದಿ ಡ್ರೋನ್ ಹೊಡೆದುರುಳಿಸಿದ್ದಾರೆ.
ಕುಸ್ತಿಪಟುಗಳ ಪ್ರತಿಭಟನೆ ಅಂತ್ಯ : ಅಮಿತ್ ಶಾ ಸಂಧಾನದ ಬಳಿಕ ಸಾಕ್ಷಿ, ಬಜರಂಗ್, ವಿನೇಶಾ ಕೆಲಸಕ್ಕೆ ಹಾಜರು
ಈ ಡ್ರೋನ್‌ನಲ್ಲಿ 3.2 ಕೆಜಿ ಮಾದಕ ವಸ್ತು ಪತ್ತೆಯಾಗಿದ್ದು, ಅದನ್ನು ವಶಪಡಿಸಿಕೊಳ್ಳಲಾಗಿದೆ. ಒಂದು ವಾರದ ಹಿಂದಷ್ಟೇ ಅಮೃತಸರದಲ್ಲಿ ಗಡಿ ಭದ್ರತಾ ಪಡೆ ಪಾಕಿಸ್ತಾನದ ಡ್ರೋನ್ ಅನ್ನು ವಿಫಲಗೊಳಿಸಿ ಸಾಗಾಟ ಮಾಡಲಾಗುತ್ತಿದ್ದ ಮಾದಕ ವಸ್ತವನ್ನು ವಶಪಡಿಸಿಕೊಳ್ಳಲಾಗಿತ್ತು.