ಡ್ರೋನ್ಗಳ ಮೂಲಕ ಭಾರತ ಹಾಗೂ ಗಡಿಯಾಚೆಗಿನ ಮಾದಕವಸ್ತು ಕಳ್ಳಸಾಗಣೆ ಜಾಲವನ್ನು ಭೇದಿಸಿರುವುದಾಗಿ ಪಾಕಿಸ್ತಾನದ ಮಾದಕ ದ್ರವ್ಯ ನಿಗ್ರಹ ಪಡೆ ಮಾಹಿತಿ ನೀಡಿದೆ. ಪಾಕಿಸ್ತಾನದ ಪೊಲೀಸರ ಪ್ರಕಾರ, ಕಳೆದ ವಾರ ಪಾಕಿಸ್ತಾನದ ರೇಂಜರ್ಗಳು ಮಾದಕದ್ರವ್ಯಗಳು, ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ಕಳ್ಳಸಾಗಣೆ ಮಾಡಲು ಯತ್ನಿಸಿದ ಆರು ಭಾರತೀಯ ಪ್ರಜೆಗಳನ್ನು ಪಾಕಿಸ್ತಾನದಲ್ಲಿ ಬಂಧಿಸಲಾಗಿದೆ.
ಲಾಹೋರ್, ಆಗಸ್ಟ್ 31: ಡ್ರೋನ್ಗಳ ಮೂಲಕ ಭಾರತ ಹಾಗೂ ಗಡಿಯಾಚೆಗಿನ ಮಾದಕವಸ್ತು ಕಳ್ಳಸಾಗಣೆ ಜಾಲವನ್ನು ಭೇದಿಸಿರುವುದಾಗಿ ಪಾಕಿಸ್ತಾನದ ಮಾದಕ ದ್ರವ್ಯ ನಿಗ್ರಹ ಪಡೆ ಮಾಹಿತಿ ನೀಡಿದೆ. ಪಾಕಿಸ್ತಾನದ ಪೊಲೀಸರ ಪ್ರಕಾರ, ಕಳೆದ ವಾರ ಪಾಕಿಸ್ತಾನದ ರೇಂಜರ್ಗಳು ಮಾದಕದ್ರವ್ಯಗಳು, ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ಕಳ್ಳಸಾಗಣೆ ಮಾಡಲು ಯತ್ನಿಸಿದ ಆರು ಭಾರತೀಯ ಪ್ರಜೆಗಳನ್ನು ಪಾಕಿಸ್ತಾನದಲ್ಲಿ ಬಂಧಿಸಲಾಗಿದೆ
ಗುರ್ಮೀತ್ ಸಿಂಗ್ , ಶಿಂದರ್ ಸಿಂಗ್, ಜೋಗಿಂದರ್ ಸಿಂಗ್ ಹಾಗೂ ವಿಶಾಲ್ ಜಗ್ಗ ಸೇರಿದಂತೆ ನಾಲ್ವರು ಕಳ್ಳಸಾಗಣೆದಾರರು ಭಾರತದ ಫಿರೋಜ್ಪುರದವರು ಮತ್ತು ರತನ್ಪಾಲ್ ಹಾಗೂ ಗರ್ವೇಂದರ್ ಸಿಂಗ್ ಜಲಂಧರ್ ಹಾಗೂ ಲುಧಿಯಾನದವರು ಎಂದು ಹೇಳಿದ್ದಾರೆ.
ಆದರೆ ಸತ್ಯವೇ ಬೇರೆ, ಪಂಜಾಬ್ ಪೊಲೀಸರ ಮಾಹಿತಿ ಪ್ರಕಾರ, ಲಾಹೋರ್ ಆ್ಯಂಟಿ-ನಾರ್ಕೋಟಿಕ್ ಸೆಲ್ನ ಮುಖ್ಯಸ್ಥ ಮಝರ್ ಇಕ್ಬಾಲ್, ಡ್ರಗ್ಸ್ ವಿಶೇಷವಾಗಿ ಹೆರಾಯಿನ್ ಅನ್ನು ಡ್ರೋನ್ಗಳ ಮೂಲಕ ಭಾರತಕ್ಕೆ ಕಳ್ಳಸಾಗಣೆ ಮಾಡಿದ ಆರೋಪ ಹೊತ್ತಿದ್ದಾರೆ. ಅವರನ್ನು ಬಂಧಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.