Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

BREAKING NEWS

[/vc_column][/vc_row]

ಮಾಸ್ಟರ್​ ಆನಂದ್​ ಪುತ್ರಿ ವಂಶಿಕಾ ಹೆಸರಲ್ಲಿ ಲಕ್ಷಾಂತರ ಹಣ ವಂಚನೆ; ಯುವತಿಯ ಬಂಧನ

0

ನಟ, ನಿರ್ದೇಶಕ ಮಾಸ್ಟರ್ ಆನಂದ್ ಅವರ ಪುತ್ರಿಯಾದ ಬಾಲನಟಿ ವಂಶಿಕಾ ಹೆಸರಿನಲ್ಲಿ ವಂಚನೆ ಎಸಗಿರುವ ಪ್ರಕರಣ ಸಂಬಂಧ ಸದಾಶಿವನಗರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿ ನಿಶಾ ನರಸಪ್ಪ ಎಂಬುವರನ್ನು ಪೊಲೀಸರು ವಶಕ್ಕೆ ಪಡೆದಿರುವುದಾಗಿ ವರದಿಯಾಗಿದೆ.

ವಂಚನೆ ಬಗ್ಗೆ ವಂಶಿಕಾ ತಾಯಿ ಯಶಸ್ವಿನಿ ದೂರು ನೀಡಿದ್ದಾರೆ. ಯಶಸ್ವಿನಿ ಅವರಿಗೆ ಇನ್ ಸ್ಟಾಗ್ರಾಂ ಮೂಲಕ ಆರೋಪಿ ನಿಶಾ ಎಂಬಾಕೆಯ ಪರಿಚಯವಾಗಿತ್ತು. ಕಾರ್ಯಕ್ರಮವೊಂದಕ್ಕೆ ತಾಯಿ–ಮಗಳನ್ನು ಆರೋಪಿ ಆಹ್ವಾನಿಸಿದ್ದರು. ಇದರಿಂದ ಮತ್ತಷ್ಟು ಹತ್ತಿರವಾಗಿದ್ದರು. ಒಂದಷ್ಟು ಇವೆಂಟ್‌ಗಳಲ್ಲಿ ಜೊತೆಯಾಗಿ ಕೆಲಸ ಮಾಡಿದ್ದೇವೆ. ಆಕೆ ಗ್ರೂಪ್‌ನಲ್ಲಿ ಅವರೊಬ್ಬರೇ ಗೊತ್ತಿತ್ತು. ಮೊದಲು ಆಕೆ ಕೆಲಸಗಳು ಜನ್ಯೂನ್ ಆಗಿತ್ತು. ಆರೇಳು ತಿಂಗಳ ಬಳಿಕ ಒಂದಷ್ಟು ಸಮಸ್ಯೆ ಆಗಿತ್ತು. ನಿಶಾ ಜೊತೆ ಕೆಲಸ ಮಾಡಿದವರೆಲ್ಲಾ ನೆಗೆಟಿವ್ ಕಾಮೆಂಟ್ ಮಾಡುತ್ತಿದ್ದರು. ಇದನ್ನು ನಿಶಾ ಗಮನಕ್ಕೆ ತಂದಿದ್ದೆ, ಹಾಗಾಗಿ ಆಕೆ ನನ್ನ ಬಳಿ ಮಾತಾನಾಡೋದನ್ನ ನಿಲ್ಲಿಸಿದರು. ಇನ್​ಸ್ಟಾಗ್ರಾಂ ಲೈವ್​ಗೆ ಬಂದು ಈ ಸಂಬಂದ ವಂಶಿಕಾ ತಾಯಿ ಯಶಸ್ವಿನಿ ಸ್ಪಷ್ಟನೆ ನೀಡಿದ್ದಾರೆ. ನಿಶಾ ನರಸಪ್ಪ ನಮಗೆ ಇನ್​ಸ್ಟಾಗ್ರಾಂ ಮೂಲಕ ಪರಿಚಯ. ಅವರು ಮಕ್ಕಳ ಪ್ರತಿಭೆ ಪ್ರೋತ್ಸಾಹಿಸಲು ಎಸ್​ಎನ್​ ಪ್ರೊಡಕ್ಷನ್​ ಆರಂಭಿಸಿದ್ದಾಗಿ ಹೇಳಿದ್ದರು. ನಾವು ಮಕ್ಕಳ ಪ್ರತಿಭೆಗೆ ವೇದಿಕೆ ಕಲ್ಪಿಸುತ್ತಿರುವ ಈ ವೇದಿಕೆ ಸಾಥ್​ ನೀಡಿದ್ದೆವು.

ಸಿದ್ದರಾಮಯ್ಯನವರ ಯೋಜನೆಗಳಿಗೆ ವೀರೇಂದ್ರ ಹೆಗ್ಡೆಯವರಿಂದ ಮೆಚ್ಚುಗೆ: ಧನ್ಯವಾದ ಸಲ್ಲಿಸಿದ ಸಿಎಂ

ಹೀಗಾಗಿ ಈ ಖಾತೆಯನ್ನು ನಾವು ಪ್ರಮೋಟ್ ಮಾಡಿದ್ದು ನಿಜ. ಆದರೆ ಕ್ರಮೇಣ ನಮಗೆ ಅನೇಕರು ಮೆಸೇಜ್​ ಮಾಡಲು ಆರಂಭಿಸಿದ್ದರು. ಆಗ ನಾವು ನಿಶಾ ಜೊತೆ ಮಾತನಾಡಿ ಇದರಲ್ಲಿ ನಮ್ಮನ್ನು ಸೇರಿಸಬೇಡಿ. ನಾವು ಇನ್ಮೇಲೆ ನಿಮ್ಮ ಪೇಜ್​ ಪ್ರಮೋಟ್​ ಮಾಡೋದಿಲ್ಲ ಎಂದೂ ಸಹ ನಾವು ಅವರಿಗೆ ಹೇಳಿದ್ದೆವು. ಹೀಗಾಗಿ ಕಳೆದ ಆರು ತಿಂಗಳಿಂದ ಈ ಕಂಪನಿಯ ಪ್ರಮೋಷನ್​ ಕಾರ್ಯವನ್ನು ನಾವು ನಿಲ್ಲಿಸಿದ್ದೆವು. ಆದರೆ ನಿಶಾ ನನ್ನ ಮಗಳ ಹೆಸರಲ್ಲಿ ಪೋಷಕರಿಂದ ಲಕ್ಷಗಟ್ಟಲೇ ಹಣ ಪಡೆದಿದ್ದಾರೆ ಎಂಬುದು ಮಕ್ಕಳ ಪೋಷಕರಿಂದ ನಮಗೆ ತಿಳಿದಿದೆ ಎಂದು ಹೇಳಿದ್ದಾರೆ. ನಿಶಾ ನರಸಪ್ಪಗೆ ವಂಚನೆಯೇ ಉದ್ಯೋಗವಾಗಿತ್ತು. ವಂಶಿಕಾ ಮಾತ್ರವೇ ಅಲ್ಲದೆ ಚಿತ್ರರಂಗದ ಹಲವರ ಹೆಸರಿನಲ್ಲಿ ಹಣ ಹಲವರಿಂದ ಹಣ ಪಡೆದಿದ್ದ ನಿಶಾ ಆ ನಂತರ ಹಣ ಪಡೆದವರ ಕರೆಗಳನ್ನು ರಿಸೀವ್ ಮಾಡುತ್ತಿರಲಿಲ್ಲವಂತೆ, ಕರೆ ಮಾಡಿದರೂ ದರ್ಪದಿಂದ ಮಾತನಾಡುತ್ತಿದ್ದರಂತೆ. ಹೀಗೆ ವಂಚನೆ ಹಣದಿಂದಲೇ ಐಶಾರಾಮಿ ಜೀವನವನ್ನು ನಿಶಾ ನರಸಪ್ಪ ನಡೆಸುತ್ತಿದ್ದರು. ಆದರೆ ಈಗ ಬಂಧನಕ್ಕೆ ಒಳಗಾಗಿದ್ದಾರೆ.

Leave A Reply

Your email address will not be published.