ಬೆಂಗಳೂರು : ಪಿಎಸ್ ಐ ನೇಮಕಾತಿ ಹಗರಣ ಮುಗಿಯುವವರೆಗೂ ಮುಂದಿನ ಎರಡು ವರ್ಷ ಪಿಎಸ್ ಐಗಳ ನೇಮಕಾತಿ ಸಾಧ್ಯವಿಲ್ಲ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ಹಿಂದಿನ ಬಿಜೆಪಿ ಸರ್ಕಾರ ಗಮನಹರಿಸದಿದ್ದ ಕಾರಣಕ್ಕೆ ಪಿಎಸ್ ಐ ಹಗರಣ ನಡೆದಿದೆ. ಎಡಿಜಿಪಿ ನೇತೃತ್ವದಲ್ಲಿ ಹಗರಣದ ತನಿಖೆ ನಡೆಯುತ್ತಿದೆ. ಈ ಕಗ್ಗಂಟು ಮುಗಿಯುವವರೆಗೆ ಹೊಸ ನೇಮಕಾತಿ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ನಿಗದಿತ ವೇಳೆಯಲ್ಲಿ ಅರ್ಹರಿಗೆ ಬಡ್ತಿ ನೀಡಲು ಕಾನೂನಿನಲ್ಲಿ ಅವಕಾಶ ಇದ್ದು, ಅರ್ಹರೆಲ್ಲರಿಗೂ ಬಡ್ತಿ ನಿಡಲಾಗುವುದು ಎಂದು ತಿಳಿಸಿದ್ದಾರೆ. ರಾಘವೇಂದ್ರ ಔರಾದ್ಕರ್ ವರದಿಯನ್ನು ಪೂರ್ಣವಾಗಿ ಅನುಷ್ಠಾನಗೊಳಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಪೊಲೀಸರು ಸಂಕಷ್ಟದಲ್ಲಿದ್ದಾರೆ. ಅವರಿಗೆ ವೇತನ ಹೆಚ್ಚಳ, ಭತ್ಯೆ ಪರಿಷ್ಕರಣೆ, ಮನೆಗಳ ನವೀಕರಣ, ಸಮವಸ್ತ್ರ ನೀಡುವುದೂ ಸೇರಿದಂತೆ ಹಲವು ಶಿಫಾರಸ್ಸುಗಳನ್ನು ಔರಾದ್ಕರ್ ಸಮಿತಿ ಮಾಡಿದ್ದು, ಇವುಗಳ ಸಂಪೂರ್ಣ ಅನುಷ್ಠಾನಕ್ಕೆ ನಾವು ಬದ್ಧ ಎಂದು ಪರಮೇಶ್ವರ್ ವಾಗ್ದಾನ ಮಾಡಿದ್ದಾರೆ.
[vc_row][vc_column]
BREAKING NEWS
- ಶಾಲೆಗಳಿಗೆ ಬಾಂಬ್ ಬೆದರಿಕೆ : ಇಸ್ಲಾಂಗೆ ಮತಾಂತರವಾಗಿ ಇಲ್ಲವೇ ಸಾಯಲು ಸಿದ್ಧರಾಗಿ – ಖಾರಿಜೈಟ್ಸ್ ಹೆಸರಲ್ಲಿ ಇ-ಮೇಲ್
- ಮಲಯಾಳಂನ ಖ್ಯಾತ ನಟಿ ಆರ್.ಸುಬ್ಬಲಕ್ಷ್ಮಿ ನಿಧನ
- ಎಚ್ಐವಿ ಸೋಂಕಿತ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿ ಕರ್ನಾಟಕ
- ಹತ್ತೇ ನಿಮಿಷದಲ್ಲಿ ಬ್ಯಾಂಕ್ ನಿಂದ 18.85 ಕೋಟಿ ರೂ. ದರೋಡೆ.!
- ಬೆಂಗಳೂರಿನ 7ಕ್ಕೂ ಹೆಚ್ಚು ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ
- ಗ್ರಾಹಕರಿಗೆ ಶಾಕ್ : ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ಏರಿಕೆ
- ವಿಶ್ವ ಹವಾಮಾನ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ದುಬೈಗೆ ತೆರೆಳಿದ ಮೋದಿ – ಅದ್ದೂರಿ ಸ್ವಾಗತ
- ಶಾಲಾ ಶಿಕ್ಷಕಿ ಕಿಡ್ನಾಪ್ ಪ್ರಕರಣ ಸುಖಾಂತ್ಯ: ಅಪಹರಣಕಾರರ ಬಂಧನ
- ಭ್ರೂಣ ಹತ್ಯೆ ಪ್ರಕರಣ- ಸಿಐಡಿ ತನಿಖೆಗೆ ಒಪ್ಪಿಸಿದ ಸಿಎಂ
- ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ರಜನೀಶ್ ಗೋಯಲ್ ನೇಮಕ