ದಾವಣಗೆರೆ; ಜಿಲ್ಲಾ ಸಮಾಜ ಕಲ್ಯಾಣ ಇಲಾಖೆÀಯಿಂದ 2023-24ನೇ ಸಾಲಿಗೆ ಮೆಟ್ರಿಕ್ ಪೂರ್ವ ಬಾಲಕರ/ಬಾಲಕಿಯರ , ವಿದ್ಯಾರ್ಥಿನಿಲಯಗಳ ಪ್ರವೇಶಕ್ಕಾಗಿ ಆನ್‍ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಪ.ಜಾತಿ, ಪ.ವರ್ಗ ಹಾಗೂ ಇತರೆ ವರ್ಗದ ವಿದ್ಯಾರ್ಥಿಗಳು ವೆಬ್‍ಸೈಟ್ https://ssp.karnataka.gov.in/ssp2223ನಲ್ಲಿ ಅರ್ಜಿ ಸಲ್ಲಿಸಬೇಕು.
ಅರ್ಜಿಯೊಂದಿಗೆ ಜಾತಿ,ಆದಾಯ ಪ್ರಮಾಣಪತ್ರÀ, ಆಧಾರ್ ಕಾರ್ಡ್, ಹಿಂದಿನ ತರಗತಿಯಲ್ಲಿ ಪಾಸಾದ ಅಂಕಪಟ್ಟಿಯ ಪ್ರತಿ, ವಿದ್ಯಾರ್ಥಿಯ ಬ್ಯಾಂಕ್ ಪಾಸ್ ಪುಸ್ತಕ ದೃಢೀಕೃತ ಪ್ರತಿಯೊಂದಿ ಆಯಾ ಆಯಾ ತಾಲ್ಲೂಕು ವ್ಯಾಪ್ತಿಯಲ್ಲಿ ಬರುವ ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯಗಳ ಸಂಬಂಧಿಸಿದ ವಾರ್ಡನ್ ಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ : 08192-231413 ಸಂಪರ್ಕಿಸಲು ಕೋರಲಾಗಿದೆ.