ಧಾರವಾಡ : ಧಾರವಾಡ ಜಿಲ್ಲೆಯ 12 ಪರೀಕ್ಷಾ ಕೇಂದ್ರಗಳಲ್ಲಿ ಮೇ.23 ರಿಂದ ಜೂನ್ 3 ರವರೆಗೆ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಗಳು ಜರುಗಲಿವೆ. 7,330 ವಿದ್ಯಾರ್ಥಿಗಳು ಪೂರಕ ಪರೀಕ್ಷೆ ಬರೆಯಲಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ ಅವರು ತಿಳಿಸಿದ್ದಾರೆ.ಈ ಕುರಿತು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ಬೆಳಿಗ್ಗೆ ಸಭೆ ಜರುಗಿಸಿ, ಅವರು ಮಾತನಾಡಿದರು. ಜಿಲ್ಲೆಯಲ್ಲಿ ಧಾರವಾಡ ಶಹರ-4, ಹುಬ್ಬಳ್ಳಿ ಶಹರ-5, ನವಲಗುಂದ-1, ಕಲಘಟಗಿ-1, ಕುಂದಗೋಳ-1 ಹೀಗೆ ಒಟ್ಟು 12 ಪರೀಕ್ಷಾ ಕೇಂದ್ರಗಳಲ್ಲಿ ಪೂರಕ ಪರೀಕ್ಷೆ ನಡೆಯಲಿವೆ. ಪರೀಕ್ಷಾ ಅಕ್ರಮಗಳಿಗೆ ಆಸ್ಪದವಿಲ್ಲದಂತೆ ಮತ್ತು ಶಿಸ್ತುಬದ್ಧವಾಗಿ ಪರೀಕ್ಷೆಗಳು ಜರುಗುವಂತೆ ನೋಡಿಕೊಳ್ಳಬೇಕು ಎಂದು ಅವರು ಅಧಿಕಾರಿಗಳಿಗೆ ಹೇಳಿದರು. ಧಾರವಾಡ-2,923, ಹುಬ್ಬಳ್ಳಿ-3,095, ಕುಂದಗೋಳ-564, ಕಲಘಟಗಿ-388 ಹಾಗೂ ನವಲಗುಂದ-350 ವಿದ್ಯಾರ್ಥಿಗಳು ಸೇರಿ ಒಟ್ಟು 7,330 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದಾರೆ. ಪೊಲೀಸ್ ಆಯುಕ್ತರು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು ಪೊಲೀಸ್ ಬಿಗಿ ಬಂದೋಬಸ್ತ್‌ಗಳ ಬಗ್ಗೆ ಸೂಕ್ತ ಕ್ರಮ ವಹಿಸಿದ್ದಾರೆ. ಹೆಸ್ಕಾಂನವರು ಪರೀಕ್ಷಾ ದಿನಗಳಂದು ತಡೆರಹಿತ ವಿದ್ಯುತ್ ಪೂರೈಸಲು ಕ್ರಮ ಕೈಗೊಳ್ಳಬೇಕೆಂದು ಅವರು ಸೂಚಿಸಿದರು. ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರನ್ನು ಪರೀಕ್ಷೆಯ ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದ್ದು ಜಿಲ್ಲೆಯಲ್ಲಿ ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ಸಮಯಕ್ಕೆ ಸರಿಯಾಗಿ ಪ್ರಶ್ನೆ ಪತ್ರಿಕೆಗಳನ್ನು ಕೊಂಡೊಯ್ಯಲು ಒಟ್ಟು 6 ಮಾರ್ಗಗಳನ್ನು ಗುರುತಿಸಿ, ಪ್ರತಿ ಮಾರ್ಗಕ್ಕೆ 3 ಜನ ಅಧಿಕಾರಿಗಳ ತಂಡ ರಚಿಸಿ, 18 ಅಧಿಕಾರಿಗಳನ್ನು ಮಾರ್ಗಾಧಿಕಾರಿಗಳನ್ನಾಗಿ ನೇಮಿಸಲಾಗಿದೆ. ಜಿಲ್ಲೆಯಲ್ಲಿ 12 ಜನ ವೀಕ್ಷಕರನ್ನು ನೇಮಿಸಲಾಗಿದೆ. ಪ್ರತಿ ಪರೀಕ್ಷಾ ಕೇಂದ್ರಕ್ಕೆ ಸಿಟಿಂಗ್ ಸ್ಕ್ವಾಡ್ ಭೇಟಿ ನೀಡಿ ಪರೀಕ್ಷೆಗಳನ್ನು ಯಶಸ್ವಿಯಾಗಿ ಜರುಗಿಸಬೇಕೆಂದು ಅಪರ ಜಿಲ್ಲಾಧಿಕಾರಿಗಳು ನಿರ್ದೇಶಿಸಿದರು.
[vc_row][vc_column]
BREAKING NEWS
- ಪೊಲೀಸರು ಹಣೆಗೆ ಕುಂಕುಮ, ವಿಭೂತಿ ಇಡಬಾರದೆಂದು ಹೇಳಿಲ್ಲ -ಗೃಹ ಸಚಿವರ ಸ್ಪಷ್ಟನೆ
- ಶಾಸನ ಸಭೆಯ ಗೌರವ ಕಾಪಾಡಿ ಸ್ಪೀಕರ್ ಖಾದರ್ ಗೆ ಉಪರಾಷ್ಟ್ರಪತಿ ಸಲಹೆ
- ಸಾಲಗಾರರಿಗೆ ಸಂತಸ ಸುದ್ದಿಯನ್ನು ನೀಡಿದ ಆರ್ಬಿಐ : ರೆಪೊ ದರವನ್ನು ಯಥಾಸ್ಥಿತಿಯಲ್ಲಿಡಲು ನಿರ್ಧಾರ
- ಗೃಹಲಕ್ಷ್ಮೀ ಯೋಜನೆಯ ಅರ್ಜಿ ನಮೂನೆ ಬಿಡುಗಡೆ, ಅರ್ಜಿ ಸಲ್ಲಿಸೋದು ಹೇಗೆ?
- ಬಿಜೆಪಿ ಕೋರ್ ಕಮಿಟಿ ಸಭೆ ಧಿಡೀರ್ ರದ್ದು
- ಭಾರತಕ್ಕೆ ಕಾದಿದೆ ಒಂದು ಗಂಡಾಂತರ.! – ಮತ್ತೊಂದು ಭಯಾನಕ ಭವಿಷ್ಯ ನುಡಿದ ಕೋಡಿಮಠ ಶ್ರೀ
- ಒಡಿಶಾ ರೈಲು ದುರಂತದಲ್ಲಿ ಕಾಣೆಯಾಗಿ ಟಿವಿ ಲೈವ್ನಲ್ಲಿ ಪತ್ತೆಹಚ್ಚಿ ಪೋಷಕರನ್ನು ಸೇರಿದ ಪುತ್ರ!
- ಕೇರಳಕ್ಕೆ ಮುಂಗಾರು ಆಗಮನ -ಮಳೆ ಆರಂಭ
- ಕಟೀಲು ಕ್ಷೇತ್ರದಲ್ಲಿ ಬತ್ತಿ ಹೋದ ನಂದಿನಿ ನದಿ :31 ವರ್ಷಗಳ ಬಳಿಕ ತೀವ್ರ ಜಲಕ್ಷಾಮ
- ಒಡಿಶಾದಲ್ಲಿ ಕಾರ್ಮಿಕರ ಮೇಲೆ ಹರಿದ ಗೂಡ್ಸ್ ರೈಲು – 6 ಮಂದಿ ಮೃತ್ಯು