ಹೊಸದಿಲ್ಲಿ: ಸಂಕಷ್ಟಕ್ಕೆ ಸಿಲುಕಿದ್ದ ಗೋ ಫಸ್ಟ್ ವಿಮಾನಯಾನ ಸಂಸ್ಥೆ, ವಿಮಾನ ಸೇವೆಯನ್ನು ಸ್ಥಗಿತಗೊಳಿಸಿತ್ತು.
ಗೋ ಫಸ್ಟ್ ದಿವಾಳಿತನದಿಂದ, ಎನ್‌ಸಿಎಲ್‌ಟಿ ರಕ್ಷಣೆ ನೀಡಿದ ಬೆನ್ನಲ್ಲೇ, ಸಂಸ್ಥೆಯು ತನ್ನ ವಿಮಾನಸೇವೆಗಳನ್ನು ಮೇ 24 ರಿಂದ ಮರು ಆರಂಭಗೊಳಿಸಲು ಚಿಂತನೆ ನಡೆಸಿದೆ.
ಆರಂಭದಲ್ಲಿ ಕೇವಲ 23 ವಿಮಾನಗಳ ಸೇವೆಯನ್ನಷ್ಟೇ ಪ್ರಾರಂಭಿಸಲು ಯೋಜಿಸಿದೆ ಎಂದು ಕೆಲ ಮಾಧ್ಯಮಗಳು ವರದಿಮಾಡಿವೆ.