ಚಂಡೀಗಢ: 15 ವರ್ಷದ ಅಪ್ರಾಪ್ತ ಬಾಲಕಿಯೊಬ್ಬಳು ತನ್ನ 12 ವರ್ಷದ ಸಹೋದರನ್ನೇ ಕೊಲೆಗೈದ ಅಚ್ಚರಿಯ ಘಟನೆಯೊಂದು ಹರಿಯಾಣದ ಬಲ್ಲಭಗಡ ಎಂಬಲ್ಲಿ ಮಂಗಳವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕೆಲಸ ಮುಗಿಸಿಕೊಂಡು ಹೆತ್ತವರು ಮನೆಗೆ ವಾಪಸ್ ಆದಾಗ ಮಗ ಕಾಣಲಿಲ್ಲ. ಹೀಗಾಗಿ ಮನೆಯೆಲ್ಲಾ ಹುಡುಕಾಡಿದ್ದಾರೆ.
ಈ ವೇಳೆ ಬಾಲಕ ಕೋಣೆಯಲ್ಲಿ ಕಂಬಳಿ ಹೊದ್ದು ಮಲಗಿದ ಸ್ಥಿತಿಯಲ್ಲಿ ಕಂಡು ಬಂದಿದ್ದಾನೆ. ಕೂಡಲೇ ಆತನ ಬಳಿ ತೆರಳಿ ಎಬ್ಬಿಸಿದಾಗ ಆತ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಈ ವೇಳೆ ಕಂಬಳಿ ತೆರೆದು ನೋಡಿದಾಗ ಕತ್ತು ಹಿಸುಕಿ ಕೊಲೆ ಮಾಡಿರುವುದು ಬಯಲಾಗಿದೆ. ಘಟನೆ ವೇಳೆ ಬಾಲಕಿ ಮಾತ್ರ ಮನೆಯಲ್ಲಿದ್ದಳು. ಪೋಷಕರು ಕೂಡಲೇ ಪೊಲೀಸರಿಗೆ ಮಾಹಿತಿ ನಿಡಿದ್ದು, ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಶೀಲನೆ ನಡೆಸಿದರು. ಈ ಇಬ್ಬರು ಮಕ್ಕಳು ಉತ್ತಪ್ರದೇಶದಲ್ಲಿರುವ ತನ್ನ ಅಜ್ಜಿ ಮನೆಯಲ್ಲಿ ವಾಸವಾಗಿದ್ದರು.
ಸುಬ್ರಮಣ್ಯ: ಕೆಎಸ್ ಆರ್ ಟಿಸಿ ಬಸ್ ಗೆ ದಂತದಿಂದ ತಿವಿದ ಕಾಡಾನೆ- ಪ್ರಯಾಣಿಕರು ಪಾರು
ಆದರೆ ಶಾಲೆಗೆ ರಜೆ ಇದ್ದ ಕಾರಣ ಇಬ್ಬರು ಕೂಡ ಅಪ್ಪ-ಅಮ್ಮನ ಜತೆ ಇರಲು ಬಂದಿದ್ದರು. ಬಾಲಕಿ ತನಗಿಂತ ತನ್ನ ತಮ್ಮನನ್ನು ಹೆತ್ತವರು ಹೆಚ್ಚು ಪ್ರೀತಿಸುತ್ತಾರೆ ಎಂದು ನಂಬಿದ್ದಾಳೆ. ಹೀಗಾಗಿ ಆಕೆ ಬಾಲಕನನ್ನು ಕೊಲೆ ಮಾಡಿದ್ದಾಳೆ ಅಂತ ಪೊಲೀಸರು ತಿಳಿಸಿದ್ದಾರೆ. ಘಟನೆಗೆ ಕಾರಣವಾದ ಮೊಬೈಲ್ ಹೆತ್ತವರು ಬಾಲಕನಿಗೆ ಇತ್ತೀಚೆಗೆ ಮೊಬೈಲ್ ಫೋನ್ ಕೊಡಿಸಿದ್ದರು. ಅಂತೆಯೇ ಮಂಗಳವಾರ ಅಪ್ಪ-ಅಮ್ಮ ಕೆಲಸಕ್ಕೆ ಹೋದ ಬಳಿಕ ಆತ ತನ್ನ ಮೊಬೈಲ್ ನಲ್ಲಿ ಗೇಮ್ಸ್ ಆಡ್ತಾ ಇದ್ದ. ಈ ವೇಳೆ ಬಾಲಕಿ ತನಗೊಮ್ಮೆ ಮೊಬೈಲ್ ಕೊಡುವಂತೆ ಕೇಳಿದ್ದಾಳೆ. ಈ ವೇಳೆ ಆತ ಮೊಬೈಲ್ ಕೊಡಲು ನಿರಾಕರಿಸಿದ್ದಾನೆ. ಇದರಿಂದ ಕೋಪಗೊಂಡ ಬಾಲಕಿ ಆತನನನು ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ ಎಂದು ಪೊಲೀಸರು ವಿವರಿಸಿದ್ದಾರೆ. ಸದ್ಯ ಬಾಲಕಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.