ಬೆಂಗಳೂರು : ಅಮೆರಿಕಾ ಸಂಯುಕ್ತ ಸಂಸ್ಥಾನ ಅರ್ಜೆಂಟೀನಾದೊಡನೆ ಯುದ್ಧ ವಿಮಾನ ಒಪ್ಪಂದವನ್ನು ಅಂತಿಮಗೊಳಿಸಲು ಮುಂದಾಗಿದೆ. ಭಾರತ ಮತ್ತು ಚೀನಾಗಳ ಪೈಪೋಟಿಯನ್ನು ಮೀರಿ, ದಕ್ಷಿಣ ಅಮೆರಿಕಾದ ರಾಷ್ಟ್ರವಾದ ಅರ್ಜೆಂಟೀನಾದೊಡನೆ ಒಪ್ಪಂದ ಕುದುರಿಸುವ ಸಲುವಾಗಿ ಅಮೆರಿಕಾ ಸಂಯುಕ್ತ ಸಂಸ್ಥಾನ ಬಳಸಿರುವ ಎಫ್-16 ಯುದ್ಧ ವಿಮಾನಗಳನ್ನು ಒದಗಿಸುವುದಾಗಿ ಹೇಳಿದೆ. ಅರ್ಜೆಂಟೀನಾ ಮಾಧ್ಯಮಗಳ ಪ್ರಕಾರ, ಶ್ವೇತ ಭವನ ಪ್ರಸ್ತುತ ದಾನಿಶ್ ಏರ್ ಫೋರ್ಸ್ ಬಳಸುತ್ತಿರುವ 24 ಎಫ್-16 ಎ/ಬಿ ಫೈಟಿಂಗ್ ಫಾಲ್ಕನ್ ಯುದ್ಧ ವಿಮಾನಗಳನ್ನು ಅರ್ಜೆಂಟೀನಾಗೆ ನೀಡಲು ಅನುಮತಿ ನೀಡುವಂತೆ ಅಮೆರಿಕಾದ ಕಾಂಗ್ರೆಸ್ ಮೇಲೆ ಒತ್ತಡ ಹೇರುತ್ತಿದೆ. ಅಮೆರಿಕಾ ಪ್ರಸ್ತಾಪಿಸಿರುವ ಈ ಒಪ್ಪಂದದ ಮೌಲ್ಯ 700 ಮಿಲಿಯನ್ ಡಾಲರ್ ಆಗಿದೆ. ಅಮೆರಿಕಾ ಈಗ ಅರ್ಜೆಂಟೀನಾಗೆ ಯುದ್ಧ ವಿಮಾನಗಳನ್ನು ಮಾರಾಟ ಮಾಡಲು ಸಿದ್ಧವಾಗಿರುವುದು ಈಗಾಗಲೇ ಅರ್ಜೆಂಟೀನಾಗೆ ತಮ್ಮ ಯುದ್ಧ ವಿಮಾನಗಳ ಪ್ರಸ್ತಾವನೆಗಳನ್ನು ಸಲ್ಲಿಸಿರುವ ಭಾರತ ಮತ್ತು ಚೀನಾಗಳಿಗೆ ಹಿನ್ನಡೆಯಾಗಿದೆ. ವರದಿಗಳ ಪ್ರಕಾರ, ರಷ್ಯಾ ಸಹ ಈಗಾಗಲೇ ಬ್ಯೂನಸ್ ಐರಿಸ್‌ಗೆ ತನ್ನ ಮಿಗ್-35 ಯುದ್ಧ ವಿಮಾನಗಳನ್ನು ಒದಗಿಸುವ ಪ್ರಸ್ತಾವನೆ ಸಲ್ಲಿಸಿದೆ. ನವದೆಹಲಿ ಅರ್ಜೆಂಟೀನಾಗೆ ತನ್ನ 4.5 ತಲೆಮಾರಿನ ಲೈಟ್ ಕಾಂಬ್ಯಾಟ್ ಏರ್‌ಕ್ರಾಫ್ಟ್ (ಲಘು ಯುದ್ಧ ವಿಮಾನ – ಎಲ್‌ಸಿಎ) ತೇಜಸ್ ಅನ್ನು ಒದಗಿಸುವ ಪ್ರಸ್ತಾವನೆ ಸಲ್ಲಿಸಿದ್ದರೆ, ಬೀಜಿಂಗ್ ತಾನು ಪಾಕಿಸ್ತಾನದೊಡನೆ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಜೆಎಫ್-17 ಥಂಡರ್ ಬ್ಲಾಕ್ ಯುದ್ಧ ವಿಮಾನಗಳನ್ನು ಒದಗಿಸುವುದಾಗಿ ಪ್ರಸ್ತಾವನೆ ಸಲ್ಲಿಸಿದೆ. ಇತ್ತೀಚೆಗೆ ನಾಲ್ಕು ದಿನಗಳ ಭಾರತ ಭೇಟಿಗೆ ಆಗಮಿಸಿದ್ದ ಅರ್ಜೆಂಟೀನಾ ರಕ್ಷಣಾ ಸಚಿವ ಜಾರ್ಜ್ ಎನ್‌ರಿಕ್ ಟಯಾನಾ ಅವರು ಭಾರತೀಯ ಮಾಧ್ಯಮಗಳ ಜೊತೆ ಮಾತನಾಡುತ್ತಾ, ಅರ್ಜೆಂಟೀನಾ ಪ್ರಸ್ತುತ ಬ್ರಿಟಿಷ್ ಬಿಡಿಭಾಗಗಳನ್ನು ಹೊಂದಿರದ ಯುದ್ಧ ವಿಮಾನಗಳನ್ನು ಖರೀದಿಸುವ ಉದ್ದೇಶ ಹೊಂದಿದೆ ಎಂದಿದ್ದರು. ಮಾಲ್ವಿನಾಸ್ ದ್ವೀಪಗಳ ಕುರಿತ ವಿವಾದದಿಂದಾಗಿ ಯುನೈಟೆಡ್ ಕಿಂಗ್‌ಡಮ್ ಅರ್ಜೆಂಟೀನಾಗೆ ರಕ್ಷಣಾ ಉಪಕರಣಗಳ ರಫ್ತನ್ನು ನಿಯಂತ್ರಿಸಿರುವ ಹಿನ್ನೆಲೆಯಲ್ಲಿ ಅರ್ಜೆಂಟೀನಾ ಈ ಕ್ರಮಕ್ಕೆ ಮುಂದಾಗಿದೆ. ಟಯಾನಾ ಅವರು ಈ ಕುರಿತು ಮಾತನಾಡುತ್ತಾ, ಎಲ್‌ಸಿಎ ತೇಜಸ್ 16 ಬ್ರಿಟಿಷ್ ಬಿಡಿಭಾಗಗಳನ್ನು ಹೊಂದಿದೆ ಎಂದಿದ್ದಾರೆ. ಆದರೆ ಭಾರತ ಈ ಬಿಡಿಭಾಗಗಳನ್ನು ಬದಲಾಯಿಸುವ ಕುರಿತು ಪ್ರಸ್ತಾವನೆ ಸಲ್ಲಿಸಿದೆಯೇ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಸದ್ಯ ಅರ್ಜೆಂಟೀನಾ ಮುಂದೆ ಈಗ ಚೀನಾದ ಯುದ್ಧ ವಿಮಾನಗಳನ್ನು ಖರೀದಿಸಬೇಕೋ ಅಥವಾ ಅಮೆರಿಕಾದ ವಿಮಾನಗಳನ್ನೋ ಎಂಬ ಕಷ್ಟಕರ ನಿರ್ಧಾರ ಕೈಗೊಳ್ಳುವ ಸವಾಲು ಎದುರಾಗಿದೆ. ಭಾರತ ಮತ್ತು ಚೀನಾ ಎರಡೂ ರಾಷ್ಟ್ರಗಳು ವಿಶ್ವಸಂಸ್ಥೆಯ ವಸಾಹತುಶಾಹಿ ನಿರ್ಮೂಲನೆಯ ವಿಶೇಷ ಸಮಿತಿಯಲ್ಲಿ (ಸಿ-24) ಅರ್ಜೆಂಟೀನಾಗೆ ಬೆಂಬಲ ಸೂಚಿಸಿವೆ.
[vc_row][vc_column]
BREAKING NEWS
- ತೆಲಂಗಾಣ ಸಿಎಂ ಆಯ್ಕೆ ತೀರ್ಮಾನ ಎಐಸಿಸಿ ಅಧ್ಯಕ್ಷರ ಹೆಗಲಿಗೆ: ಡಿಕೆಶಿ
- ಮಿಚಾಂಗ್ ಅಬ್ಬರಕ್ಕೆ ಮುಳುಗಿದ ಚೆನ್ನೈ
- ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್ – ಬೆಂಗಳೂರು ಸೇರಿ ರಾಜ್ಯದ 63 ಕಡೆ ದಾಳಿ
- 200 ಟನ್ ಮೆಕ್ಕೆಜೋಳ ಕುಸಿತ ಪ್ರಕರಣ: ಮೂವರು ಕಾರ್ಮಿಕರ ಸಾವು
- ಬ್ರೇಕಿಂಗ್ ಇಂದು ಬೆಳ್ಳಂಬೆಳಗ್ಗೆ 63 ಕಡೆ ಲೋಕಾಯುಕ್ತ ದಾಳಿ.!
- ತಡರಾತ್ರಿ ಫುಡ್ಸ್ ಗೋದಾಮಿನ ಸಂಸ್ಕರಣಾ ಘಟಕದಲ್ಲಿ ಮೆಕ್ಕೆಜೋಳ ಕುಸಿತ ಮೂವರು ಸಾವು.!
- ಮಿಚಾಂಗ್ ಚಂಡಮಾರುತ ಎಫೆಕ್ಟ್ ರಾಜ್ಯದಲ್ಲಿ ಈ ಜಿಲ್ಲೆಗಳಲ್ಲಿ ಮಳೆ.!
- ಕೊಡಗು ಸೈನಿಕ ಶಾಲೆ ಪ್ರವೇಶಕ್ಕೆ ಅರ್ಜಿ ಆಹ್ವಾನ
- ವಿದ್ಯಾರ್ಥಿಗಳಿಗೆ ವಿವಿಧ ಸೌಲಭ್ಯ: ಅರ್ಜಿ ಆಹ್ವಾನ
- 2250 ರಂತೆ ನೇರವಾಗಿ ರೈತರಿಂದ ಮೆಕ್ಕೆಜೋಳ ಖರೀದಿ.!