ಲಂಡನ್: ಖಲಿಸ್ತಾನಿ ಬೆಂಬಲಿಗ ಅಮೃತ್ಪಾಲ್ ಸಿಂಗ್ ಆಪ್ತ ಅವತಾರ್ ಸಿಂಗ್ ಖಂಡಾ ಯುಕೆಯಲ್ಲಿ ಸಾವನ್ನಪ್ಪಿದ್ದಾನೆ ಎನ್ನುವ ಮಾಹಿತಿ ಲಭ್ಯವಾಗಿದೆ.
ರಕ್ತದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಖಂಡಾ ಅವತಾರ್ ಬರ್ಮಿಂಗ್‌ಹ್ಯಾಮ್ ಸಿಟಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನ. ಲಂಡನ್‌ನಲ್ಲಿರುವ ರಾಯಭಾರ ಕಚೇರಿಯಲ್ಲಿ ಭಾರತದ ರಾಷ್ಟ್ರಧ್ವಜವನ್ನು ಕೆಳಗಿಳಿಸಿದ್ದಕ್ಕಾಗಿ ಆತನನ್ನು ಯುಕೆಯಲ್ಲಿ ಬಂಧಿಸಲಾಗಿತ್ತು.
‘ಗೃಹ ಲಕ್ಷ್ಮಿ ಯೋಜನೆಗೆ ನಾಳೆಯಿಂದ ಅರ್ಜಿ ಸಲ್ಲಿಕೆ ಪ್ರಾರಂಭ’ – ಲಕ್ಷ್ಮೀ ಹೆಬ್ಬಾಳ್ಕರ್
ಜೀವಂತ ಬಾಂಬ್‌ಗಳನ್ನು ಹೇಗೆ ತಯಾರಿಸುವುದು ಮತ್ತು ಐಇಡಿಗಳನ್ನು ಹೇಗೆ ನಿರ್ವಹಿಸುವುದು ಎಂಬುದರ ಕುರಿತು ಸಿಖ್ ಯುವಕರಿಗೆ ತರಬೇತಿ ನೀಡಿದ ಆರೋಪದ ಖಂಡಾ ಮೇಲಿತ್ತು. ಖಂಡಾ ಅವರು ಖಲಿಸ್ತಾನ್ ಲಿಬರೇಶನ್ ಫೋರ್ಸ್ (ಕೆಎಲ್‌ಎಫ್)ನ ಲಂಡನ್ ಘಟಕದ ಮುಖ್ಯಸ್ಥನಾಗಿದ್ದ ಮತ್ತು ಆತ ಕೆಎಲ್‌ಎಫ್ ಭಯೋತ್ಪಾದಕ ಕುಲ್ವಂತ್ ಸಿಂಗ್ ಖುಖ್ರಾನಾ ಅವರ ಪುತ್ರ.