ಬೆಂಗಳೂರು: ಜೈಲಿನಿಂದ ಬಿಡುಗಡೆಯಾದ ಕೆಲ ಹೊತ್ತಿನಲ್ಲೇ ನಡುರಸ್ತೆಯಲ್ಲಿ ರೌಡಿ ಶೀಟರ್‌ನನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಹೊಸ ರೋಡ್ ಜಂಕ್ಷನ್ ಬಳಿ ನಡೆದಿದೆ.
ಕೊಲೆಯಾದವನನ್ನು ಮಹೇಶ ಅಲಿಯಾಸ್ ಸಿದ್ದಾಪುರ ಮಹೇಶ್ ಅಂತ ತಿಳಿದು ಬಂದಿದೆ. ಶುಕ್ರವಾರ ಸಂಜೆಯಷ್ಟೆ ಮಹೇಶ ಜೈಲಿನಿಂದ ಬಿಡುಗಡೆಯಾಗಿ ಹೊರ ಬಂದಿದ್ದ ಎನ್ನಲಾಗಿದ್ದು, ಬನಶಂಕರಿ ದೇವಸ್ಥಾನ ಎದುರು ಉದ್ಯಮಿ ಮದನ್ ಕೊಲೆ ಸಿದ್ದಾಪುರ ಮಹೇಶ ಜೈಲು ಸೇರಿದ್ದ ಆದರೆ ನಿನ್ನೆ ಜೈಲಿನಿಂದ ವಾಪಸ್ಸು ಬಂದಿದ್ದ ಮಹೇಶನನ್ನು ಮೈನ್ ರೋಡ್ ಬರುತ್ತಿದ್ದ ಹಾಗೇ ಹಂತಕರು ಕಾರನ್ನು ಅಡ್ಡ ಹಾಕಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಈ ನಡುವೆ ಆಗ್ನೇಯ ವಿಭಾಗ ಡಿಸಿಪಿ ಸ್ಥಳಕ್ಕೆ ಭೇಟಿ ನೀಡಿದ್ದು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ